– ಮೈ ಜುಮ್ಮೆನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಬಿಎಂಟಿಸಿಗೆ (BMTC) ʻಕಿಲ್ಲರ್ʼ ಎಂಬ ಹಣೆಪಟ್ಟಿ ಹೋಗ್ತಿಲ್ಲ. ಬಿಎಂಟಿಸಿ ಬಸ್ ಹರಿದು ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೈಕ್ ನಲ್ಲಿ ಹೋಗ್ತಿದ್ದ ಮಹಿಳೆ ಬಸ್‌ಗೆ ಬಲಿಯಾದ ಸಿಸಿಟಿವಿ ಅಪಘಾತದ ದೃಶ್ಯ ಬೆಚ್ಚಿ ಬೀಳಿಸುವಂತಿದೆ.
ಬೆಂಗಳೂರಿಗರ ನೆಚ್ಚಿನ ಸಾರಿಗೆ ಅಂದ್ರೆ ಅದು ಬಿಎಂಟಿಸಿ ಬಸ್ (BMTC Bus). ಆದ್ರೆ ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರೋ ಬಿಎಂಟಿಸಿ ಬಸ್ ಆಕ್ಸಿಡೆಂಟ್ ಗಳು, ಅದರಲ್ಲೂ ಎಲೆಕ್ಟ್ರಿಕ್ ಬಸ್ ಅಪಘಾತಗಳು ಜನರಲ್ಲಿ ಭಯವನ್ನುಂಟು ಮಾಡ್ತಿವೆ. ಚಾಲಕರ ಅಜಾಗರೂಕತೆ, ರ‍್ಯಾಶ್ ಡ್ರೈವಿಂಗ್ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್‌ಗಳಿಗೆ ಅನೇಕರು ಬಲಿಯಾಗಿದ್ದಾರೆ. ಇದನ್ನೂ ಓದಿ: ಫ್ರೀ ಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಬಾಲಕನ ಹತ್ಯೆ – ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಅದರಂತೆ, ನಿನ್ನೆ ಬೆಳ್ಳಿಗ್ಗೆ 9.30 ರಿಂದ 10 ಗಂಟೆ ಸುಮಾರಿಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗೆ 20 ವರ್ಷದ ಯುವತಿಯೊಬ್ಬರು ಬಲಿಯಾಗಿದ್ದಾರೆ. ಮಣಿಪುರದಿಂದ (Manipur) ಬಂದು ಬೆಂಗಳೂರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹನ್ನಾ ಇನಕಾ ಸಾವನ್ನಪ್ಪಿದ ಯುವತಿ ಎಂದು ಗುರುತಿಸಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿಗೆ ಹೋಗ್ತಿದ್ದ ಇವಿ ಬಸ್, ಕೆ.ಆರ್ ಪುರಂನ ರೈಲ್ವೆ ನಿಲ್ದಾಣದ ಬಳಿ ಬಂದಾಗ, ಬೈಕ್ ನ ಹಿಂಭಾಗದಲ್ಲಿ ಕುಳಿತು ಹನ್ನಾ ಇನಕಾ ಬೈಕ್ ಇವಿ ಬಸ್ ಮುಂದೆ ಬಂದಿದೆ. ಆಗ ಬಸ್ ನ ಮುಂಭಾಗಕ್ಕೆ ಟಚ್ ಆಗಿ ಬೈಕ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಹಿಂಭಾಗದಲ್ಲಿ ಕುಳಿತ ಯುವತಿ ಬಸ್ ಮುಂಭಾಗದ ಚಕ್ರಕ್ಕೆ ಬಿದ್ದಿದ್ದಾಳೆ. ಆಗ ಯುವತಿಯ ತಲೆ ಮೇಲೆ ಬಿಎಂಟಿಸಿ ಬಸ್ ಹತ್ತಿಸಿದೆ. ಇದನ್ನೂ ಓದಿ: ರೀಲ್ಸ್ ಗೀಳು – ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ ಮಹಿಳೆ ಸಾವು
ಅಪಘಾತವಾದ ಕೂಡಲೇ ಬಸ್ ಕೆಳಗಡೆ ಬಿದ್ದ ಯುವತಿಯನ್ನ ಕೆ.ಆರ್ ಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಯುವತಿ ಮೂಲತಃ ಮಣಿಪುರ ಮೂಲದವರಾಗಿದ್ರೂ, ಬದುಕು ಕಟ್ಟಿಕೊಳ್ಳಲು ಕೆಲಸ ಅರಸಿ, ಬೆಂಗಳೂರಿಗೆ ಬಂದು ಮಾರತಳ್ಳಿಯಲ್ಲಿ ವಾಸವಾಗಿದ್ದರು. ಹೀಗೆ ಬಸ್ ಗೆ ಬಲಿಯಾಗಿದ್ದು ಮಾತ್ರ ವಿರ್ಪಯಾಸ. ಇದನ್ನೂ ಓದಿ: ದೇಶದಲ್ಲೇ ʻನಮ್ಮ ಮೆಟ್ರೋʼ ಬಲು ದುಬಾರಿ; ಟಿಕೆಟ್ ದರ ವಿಚಾರದಲ್ಲೂ ರಾಜ್ಯ-ಕೇಂದ್ರದ ಸಂಘರ್ಷ

