ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತಗೆ ‘ಕೈ’ ಮುಖಂಡ ರಾಜೀವ ಗೌಡ ಧಮ್ಕಿ ಹಾಕಿದ ಪ್ರಕರಣ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಬ್ಬ ಕಾಂಗ್ರೆಸ್ ಮುಖಂಡ, ಸರ್ಕಾರಿ ಅಧಿಕಾರಿಗೆ ಧಮ್ಕಿ ಹಾಕಿದ್ದಾನೆ.
ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಬಿಎಲ್‌ಓಗೆ ಚಿಕ್ಕಬಳ್ಳಾಪುರ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಕರೆ ಮಾಡಿ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. ನಾಸ್ತಿಮನಹಳ್ಳಿ ಗ್ರಾಮದ ನಾಗೇಶ್ ರೆಡ್ಡಿ ಬಿಎಲ್‌ಓ ಶಿವಶಂಕರ್ ಎಂಬುವರಿಗೆ ಧಮ್ಕಿ ಹಾಕಿದ ಆಡಿಯೋ ವೈರಲ್ ಆಗಿದೆ.
ಬಿಎಲ್‌ಓ ಶಿವಶಂಕರ್ ಪೊಲೀಸರಿಗೆ ದೂರು ನೀಡಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿಲ್ಲ. ಘಟನೆ ನಂತರ ನಾಗೇಶ್ ರೆಡ್ಡಿ, ಬಿಎಲ್‌ಓಗೆ ಕ್ಷಮಾಪಣೆ ಕೇಳಿದ್ದಾನೆ. ನಾನು ಮಾತನಾಡಿದ್ದು ತಪ್ಪು. ಶಿವಶಂಕರ್ ಅವ್ರು ಕರೆ ಮಾಡಿ ಎಸ್‌ಐಆರ್ ಡಾಕ್ಯುಮೆಂಟ್ಸ್ ಬಗ್ಗೆ ಮಾತನಾಡಿದ್ರು. ಆದ್ರೆ ಅದು ನನಗೆ ಎಫ್‌ಐಆರ್ ಅಂತ ಕೇಳಿಸ್ತು.. ಹಾಗಾಗಿ ನಾನು ಆವೇಶದಲ್ಲಿ ತಪ್ಪು ಮಾತನಾಡಿದ್ದೇನೆ. ನಿನ್ನೆಯೇ ಕ್ಷಮೆ ಕೇಳಿದ್ದೇನೆ ಅಂತ ಸ್ಪಷ್ಟಪಡಿಸಿದ್ದಾನೆ.

