ಹಾಸನ: ಮನೆ ಸೀಜ್ ಮಾಡೋದಾಗಿ ಫೈನಾನ್ಸ್ (Finance) ಸಿಬ್ಬಂದಿ ಬೆದರಿಕೆ ಹಾಕಿದ್ದಕ್ಕೆ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶ್ರವಣಬೆಳಗೊಳ ಬಳಿಯ ಕೊತ್ತನಘಟ್ಟ ಗ್ರಾಮದಲ್ಲಿ ನಡೆದಿದೆ.
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತನನ್ನು ಯೋಗೇಶ್ (50) ಎಂದು ಗುರುತಿಸಲಾಗಿದೆ. ಚನ್ನರಾಯಪಟ್ಟಣದ (Channapatna) ಫೈನಾನ್ಸ್ ಒಂದರಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಿದ್ದ ಅವರು, ವೈಯಕ್ತಿಕ ಸಮಸ್ಯೆಯಿಂದ ಕಳೆದ 2 ತಿಂಗಳ ಕಂತನ್ನು ಬಾಕಿ ಉಳಿಸಿಕೊಂಡಿದ್ದರು.
ಫೆ.4ರ ರಾತ್ರಿ ಯೋಗೇಶ್ ಅವರ ಮನೆಗೆ ಬಂದಿದ್ದ ಇಬ್ಬರು ಫೈನಾನ್ಸ್ ಸಿಬ್ಬಂದಿ ಮನೆ ಸೀ ಜ್‍ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮಾನಕ್ಕೆ ಅಂಜಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಫೈನಾನ್ಸ್‌ನ 3 ಲಕ್ಷಕ್ಕೂ ಅಧಿಕ ಹಣ ಆನ್‌ಲೈನ್ ಗೇಮ್‌ಗೆ ಬಳಕೆ – ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆ
ಫೈನಾನ್ಸ್ ವಿರುದ್ಧ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಖಾಸಗಿ ಫೈನಾನ್ಸ್ ಕಿರುಕುಳ – ಬೇಸತ್ತು ಆರ್‌ಬಿಐ ಮೊರೆ ಹೋದ ಮಹಿಳೆ

