ಚಿಕ್ಕಮಗಳೂರು: ಮದುವೆಯಾಗುತ್ತಿರುವ ಯುವತಿ ತನ್ನ ಜಾತಕ (Horoscope) ತೋರಿಸಲು ಹೋದಾಗ ಆಕೆ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ಎಸಗಿರೋ ಆರೋಪದ ಪ್ರಕರಣ ಚಿಕ್ಕಮಗಳೂರು (Chikkamagaluru ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ.
ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣರಾವ್ ವಿರುದ್ಧ ಆರೋಪ ಕೇಳಿ ಬಂದಿದೆ. ನೊಂದ ಯುವತಿ ಬಣಕಲ್ ಠಾಣೆಗೆ (Banakal Police Station) ದೂರು ನೀಡಿದ್ದು ಬಣಕಲ್ ಪೊಲೀಸರು ಆರೋಪಿ ಕೃಷ್ಣರಾವ್‌ನನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಕೇಸರಿ ಧ್ವಜದ ಪೋಟೋ ಅಪ್ಲೋಡ್ ಮಾಡಿದ್ದಕ್ಕೆ ತಾಯಿ, ಮಗನ ಮೇಲೆ ಹಲ್ಲೆ
ಯುವತಿ ಜಾತಕ ತೋರಿಸಲು ಹೋದಾಗ 2025 ನವೆಂಬರ್ 23 ರಿಂದ 2026 ಫೆಬ್ರವರಿ 2 ರ ಅವಧಿಯಲ್ಲಿ ಅರ್ಚಕ (Priest) ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ. ಜಾತಕದಲ್ಲಿ ದೋಷ ಇದೆ. ಅದಕ್ಕೆ ತಡೆಯೊಡೆಯಬೇಕು ಎಂದು ಹೆದರಿಸಿ ಯುವತಿಗೆ ಹೆದರಿಸಿದ್ದನಂತೆ. ಇದೀಗ ನೊಂದ ಯುವತಿ ಅರ್ಚಕನ ವಿರುದ್ಧ ದೂರು ನೀಡಿದ್ದಾಳೆ. ಇದನ್ನೂ ಓದಿ: ಪೋಷಕರು ಜೋರು ಮಾಡಿದ್ದಕ್ಕೆ ಸಿಟ್ಟಾಗಿ ಮನೆ ತೊರೆದ ಅಕ್ಕ-ತಮ್ಮ!
ಬಣಕಲ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64(2)(m) ಹಾಗೂ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿರೋ ಬಣಕಲ್ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಉದ್ಯಮಿಗಳು, ಕಾರು ಮಾಲೀಕರ ಬಳಿಯೂ ಬಿಪಿಎಲ್ ಕಾರ್ಡ್ – 2 ಲಕ್ಷಕ್ಕೂ ಅಧಿಕ ಅನರ್ಹರಿಗೆ ನೋಟಿಸ್!


