ಹಾಸನ: ಪುಂಡರಿಬ್ಬರು ರಸ್ತೆ ಮಧ್ಯೆ ವ್ಹೀಲಿಂಗ್ (Wheeling) ಮಾಡಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಅರಸೀಕೆರೆ (Arasikere) ತಾಲೂಕಿನ ಮುದುಡಿ ರಸ್ತೆಯಲ್ಲಿ ನಡೆದಿದೆ.
KA-31-J-5670 ನಂಬರ್‌ನ ಬೈಕ್‍ನಲ್ಲಿ ವೀಲ್ಹಿಂಗ್ ಮಾಡುತ್ತಲೇ ಬೈಕ್‍ನಲ್ಲಿ ಇಬ್ಬರು ಯುವಕರು ತೆರಳಿದ್ದಾರೆ. ಒಂದೇ ಚಕ್ರದಲ್ಲಿ ಬೈಕ್ (Bike) ಓಡಿಸಿದ್ದು ಇನ್ನೋರ್ವ ಹೆದರದೆ ಹಿಂಬದಿ ಕುಳಿತಿದ್ದಾನೆ. ವೀಲ್ಹಿಂಗ್ ಮಾಡುವಾಗ ನಾಯಿ ಅಡ್ಡ ಬಂದಿದ್ದು ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ. ಇದನ್ನೂ ಓದಿ: ಯಪ್ಪಾ… ಸೌಂಡು – ಸಾರ್ವಜನಿಕರಿಗೆ ಕಿರಿಕಿರಿ ಮಾಡ್ತಿದ್ದ ಜಿಪ್ಸಿ ವಶಕ್ಕೆ ಪಡೆದ ಪೊಲೀಸರು
ಬೈಕ್‍ಗೆ ನಾಯಿ ಅಡ್ಡ ಬಂದ ಕೂಡಲೇ ಕಾರು ಚಾಲಕ ಅಪಘಾತ ತಪ್ಪಿಸಲು ತಕ್ಷಣವೇ ಕಾರನ್ನು ನಿಲ್ಲಿಸಿದ್ದಾನೆ. ವೀಲ್ಹಿಂಗ್ ಮಾಡುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಜಮೀನು ಒತ್ತುವರಿ ವಿಚಾರಕ್ಕೆ ಗಲಾಟೆ – ತಮ್ಮನ ತಲೆ ಒಡೆದು ಕೊಂದ ಅಣ್ಣ

