ನವದೆಹಲಿ: ಗ್ರಾಹಕರ ಜೇಬಿಗೆ ಭಾರವಾಗಿದ್ದ ಚಿನ್ನ (Gold) ಮತ್ತು ಬೆಳ್ಳಿ (Silver) ದರ ಸತತ 4ನೇ ದಿನವೂ ಭಾರೀ ಇಳಿಕೆ (Prices Crash) ಕಂಡಿದೆ. MCX ವಹಿವಾಟಿನಲ್ಲಿ ಭಾರತದಲ್ಲಿ ಚಿನ್ನ 3% ಕುಸಿದಿದ್ದರೆ, ಬೆಳ್ಳಿಯ ಬೆಲೆ 6% ಕುಸಿದಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಕೇಂದ್ರ ಬಜೆಟ್ ಮಂಡಿಸಿದ ಮರುದಿನ ಮತ್ತೆ ಚಿನ್ನ, ಬೆಳ್ಳಿಯ ದರದಲ್ಲಿ ಭಾರೀ ಇಳಿಕೆಯಾಗಿದೆ. ಚಿನ್ನದ ಬೆಲೆ 10 ಗ್ರಾಂ ಗೆ 1,43,321 ರೂ.ಗಳಿಗೆ ವಹಿವಾಟು ನಡೆಸಿದ್ದು, ಶೇ.3 ರಷ್ಟು ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ ಕಳೆದ 4 ದಿನಗಳಲ್ಲಿ ಸುಮಾರು 1 ಲಕ್ಷ ರೂ. ಇಳಿಕೆಯಾಗಿದೆ. ಸೋಮವಾರ 6% ದರ ಕುಸಿದಿದ್ದು, 3,00,000 ರೂ.ಗೆ ಇಳಕೆಯಾಗಿದೆ. ಇದನ್ನೂ ಓದಿ: ವಿಕಸಿತ ಭಾರತಕ್ಕೆ ಕೇಂದ್ರದ ಯುವಶಕ್ತಿ ಬಜೆಟ್ – ಜೀರಾಮ್‌ಜೀ ಯೋಜನೆಗೆ 95,692 ಕೋಟಿ ಮೀಸಲು; ಹಿಂದಿಗಿಂತಲೂ ಹೆಚ್ಚು!

ಫೆ.1 ರಂದು ಕೇಂದ್ರ ಬಜೆಟ್ (Union Budget 2026) ದಿನದಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸುಮಾರು 9% ರಷ್ಟು ಕುಸಿದಿತ್ತು. ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,38,600 ರೂ.ಗೆ ಕುಸಿದಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,27,050 ರೂ.ಗೆ ಲಭ್ಯವಿತ್ತು. ಈ ದರಗಳು ಜಿಎಸ್ಟಿ ಮತ್ತು ಮೇಕಿಂಗ್ ಶುಲ್ಕಗಳನ್ನು ಒಳಗೊಂಡಿಲ್ಲ. ಸ್ಪಾಟ್ ಮಾರುಕಟ್ಟೆಯಲ್ಲಿ ಬೆಳ್ಳಿ ಕೂಡ ಪ್ರತಿ ಕೆಜಿಗೆ ಸುಮಾರು 2,65,600 ರೂ.ಗೆ ಇಳಿದಿತ್ತು. ಇದೀಗ ಸತತ 4ನೇ ದಿನ ಚಿನ್ನದ ದರ ಇಳಿಕೆಯಾಗಿದೆ. ಇದನ್ನೂ ಓದಿ: Union Budget 2026 | ಏ.1 ರಿಂದ ಹೊಸ ಆದಾಯ ತೆರಿಗೆ ನೀತಿ, 7 ಅಪರೂಪದ ಕಾಯಿಲೆಗಳ ಔಷಧಿ ಅಗ್ಗ – ಯಾವುದು ದುಬಾರಿ?
ಕಳೆದ 4 ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 50 ರಿಂದ 60 ಸಾವಿರದಷ್ಟು ಕುಸಿದಿದ್ದರೆ, ಬೆಳ್ಳಿ ಬರೋಬ್ಬರಿ 1 ಲಕ್ಷ ರೂ. ಇಳಿಕೆಯಾಗಿದೆ. ಇದನ್ನೂ ಓದಿ: Gold, Silver Price: ಬಜೆಟ್ ದಿನವೇ ಚಿನ್ನ, ಬೆಳ್ಳಿ ದರ ದಾಖಲೆ ಕುಸಿತ

