– ಪಂದ್ಯ ಮುಗಿಯುವ ಮುನ್ನವೇ ಭಾರತ ಸೆಮಿಸ್‌ಗೆ ಎಂಟ್ರಿ
ಬುಲವಾಯೊ: U19 ವಿಶ್ವಕಪ್ ಟೂರ್ನಿಯ ನಿರ್ಣಾಯಕ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ (Pakistan) ತಂಡದ ವಿರುದ್ಧ ಭಾರತ U19 ತಂಡ 58 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ (Team India) ಸೆಮಿಫೈನಲ್ ತಲುಪಿದೆ. ಫೆ.4 ರಂದು ಅಫ್ಘಾನಿಸ್ತಾನದ ವಿರುದ್ಧ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿದೆ.
ಭಾರತದ ವಿರುದ್ಧ ಗೆಲುವಿಗೆ 253 ರನ್ ಗುರಿ ಪಡೆದ ಪಾಕಿಸ್ತಾನ 46.2 ಓವರ್‌ಗಳಲ್ಲಿ 194 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸೋಲಿನೊಂದಿಗೆ ವಿಶ್ವಕಪ್ (U19 World Cup) ಟೂರ್ನಿಯಿಂದ ಹೊರಬಿದ್ದು, ಗಂಟುಮೂಟೆ ಕಟ್ಟಿದೆ.
ಬುಲವಾಯೊ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 49.5 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟ್ ಆಗಿತ್ತು. 253 ರನ್ ಗುರಿ ಬೆನ್ನಟ್ಟಿದ್ದ ಪಾಕ್ 29.4 ಓವರ್‌ಗಳಲ್ಲಿ 151 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆ ಬಳಿಕ ಭಾರತೀಯ ಬೌಲರ್‌ಗಳ ಪರಾಕ್ರಮದ ಮುಂದೆ ಮಂಡಿಯೂರಬೇಕಾಯಿತು. ಕೊನೆಗೆ ಹೀನಾಯ ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿತು.
ಹೀನಾಯ ಸೋಲಿನ ಬಳಿಕ ಪಾಕ್ ಕ್ರಿಕೆಟಿಗ ಮೈದಾನದಲ್ಲೇ ಕಣ್ಣೀರಿಟ್ಟ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪಂದ್ಯ ಮುಗಿಯುವ ಮುನ್ನವೇ ಭಾರತ ಸೆಮಿಸ್‌ಗೆ ಎಂಟ್ರಿ
ಸೂಪರ್ ಸಿಕ್ಸ್ ಸ್ಟೇಜ್‌ನ 2ನೇ ಗುಂಪಿನಲ್ಲಿ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದ್ದು, ಸೆಮಿಫೈನಲ್ ಖಚಿತಪಡಿಸಿಕೊಂಡಿದೆ. 2ನೇ ಸ್ಥಾನಕ್ಕೆ ಭಾರತ ಮತ್ತು ಪಾಕ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಭಾರತ ಎಲ್ಲಾ 3 ಪಂದ್ಯ ಗೆದ್ದು, 3 ಸಾವಿರಕ್ಕೂ ಅಧಿಕ ನೆಟ್ ರನ್‌ರೇಟ್ ಹೊಂದಿದರೂ 6 ಅಂಕ ಗಳಿಸಿದ್ದರಿಂದ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿತ್ತು. +1.484 ರನ್ ರೆಟ್ ಹೊಂದಿದ್ದ ಪಾಕಿಸ್ತಾನ 3 ರಲ್ಲಿ 2 ಪಂದ್ಯ ಗೆದ್ದು 4 ಅಂಕಗಳೊAದಿಗೆ 3ನೇ ಸ್ಥಾನದಲ್ಲಿತ್ತು.
ಇಂದು ಭಾರತ ನೀಡಿದ 253 ರನ್‌ಗಳ ಗುರಿಯನ್ನ 33.3 ಓವರ್‌ಗಳಲ್ಲೇ ತಲುಪಬೇಕಿತ್ತು. ಆದ್ರೆ 40 ಓವರ್ ಕಳೆದರೂ ಪಾಕಿಸ್ತಾನ 200 ರನ್ ತಲುಪುವಲ್ಲಿ ವಿಫಲವಾಗಿತ್ತು. ಹೀಗಾಗಿ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.




