– ಟ್ರಂಪ್ ಬೆದರಿಕೆಗೆ ಇರಾನಿಯನ್ನರು ಹೆದರಬೇಡಿ ಅಂತ ಕರೆ
ಟೆಹ್ರಾನ್/ವಾಷಿಂಗ್ಟನ್: ಟ್ರಂಪ್ ಬೆದರಿಕೆಗಳಿಗೆ ಇರಾನಿಯನ್ನರು ಹೆದರದಂತೆ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಕರೆ ಕೊಟ್ಟಿದ್ದಾರೆ. ಜೊತೆಗೆ ಅಮೆರಿಕ ವಿರುದ್ಧ ಮತ್ತೊಂದು ದಾಳಿಯ ಎಚ್ಚರಿಕೆಯನ್ನೂ ನೀಡಿದ್ದಾರೆ.
The Americans should know if they start a war, this time it will be a regional war.
— Khamenei.ir (@khamenei_ir) February 1, 2026
ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸೇನೆಯನ್ನ (US Army) ಸಜ್ಜುಗೊಳಿಸಿದೆ. ಇತ್ತ ಇರಾನ್‌ನಲ್ಲಿ ಆರ್ಥಿಕ ದಂಗೆ ಮುಂದುವರಿದಿದ್ದು, ಅನೇಕ ರಾಷ್ಟ್ರಗಳು ಒತ್ತಡ ಹೇರಿವೆ. ಈ ಮಧ್ಯೆ ಮಾತನಾಡಿರುವ ಖಮೇನಿ, ಅಮೆರಿಕವು ನಡೆಸುವ ಯಾವುದೇ ಮಿಲಿಟರಿ ದಾಳಿಯು ಪ್ರಾದೇಶಿಕ ಯುದ್ಧಕ್ಕೆ ಪ್ರಚೋದನೆ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Budget 2026 | ಇರಾನ್‌ಗೆ ಇಲ್ಲ, ಬಾಂಗ್ಲಾ ಅನುದಾನ ಅರ್ಧ ಕಡಿತ

ಅಮೆರಿಕನ್ನರು (Americans) ಯುದ್ಧ ಆರಂಭಿಸಿದರೆ, ಈ ಬಾರಿ ಅದು ಪ್ರಾದೇಶಿಕ ಯುದ್ಧವಾಗಿರುತ್ತದೆ ಅನ್ನೋದು ಅವರಿಗೆ ತಿಳಿದಿರಬೇಕು. ಹಾಗಾಗಿ ಇರಾನಿಯನ್ನರು ಟ್ರಂಪ್ ಬೆದರಿಕೆಗಳಿಗೆ ಭಯಪಡಬೇಕಿಲ್ಲ ಎಂದಿದ್ದಾರೆ.
ಇರಾನ್ ಮೇಲೆ ಅಮೆರಿಕ ಯುದ್ಧದ ಮುನ್ಸೂಚನೆ ಬಳಿಕ ಖಮೇನಿ ಅವರ ಹೇಳಿಕೆ ಹೊರಬಂದಿದೆ. ಇದನ್ನೂ ಓದಿ: ಅಮೆರಿಕದ ಎಪ್‌ಸ್ಟೀನ್ ಲೈಂಗಿಕ ಕೇಸ್‌ನ ಮತ್ತೊಂದು ಫೈಲ್ ರಿಲೀಸ್; ಟ್ರಂಪ್ ಹೆಸರು, ಮೋದಿ ಇಸ್ರೇಲ್ ಭೇಟಿಯ ಉಲ್ಲೇಖ

