Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Union Budget 2026 | ಏ.1 ರಿಂದ ಹೊಸ ಆದಾಯ ತೆರಿಗೆ ನೀತಿ, 7 ಅಪರೂಪದ ಕಾಯಿಲೆಗಳ ಔಷಧಿ ಅಗ್ಗ – ಯಾವುದು ದುಬಾರಿ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | Union Budget 2026 | ಏ.1 ರಿಂದ ಹೊಸ ಆದಾಯ ತೆರಿಗೆ ನೀತಿ, 7 ಅಪರೂಪದ ಕಾಯಿಲೆಗಳ ಔಷಧಿ ಅಗ್ಗ – ಯಾವುದು ದುಬಾರಿ?

Bengaluru City

Union Budget 2026 | ಏ.1 ರಿಂದ ಹೊಸ ಆದಾಯ ತೆರಿಗೆ ನೀತಿ, 7 ಅಪರೂಪದ ಕಾಯಿಲೆಗಳ ಔಷಧಿ ಅಗ್ಗ – ಯಾವುದು ದುಬಾರಿ?

Public TV
Last updated: February 1, 2026 7:00 pm
Public TV
Share
5 Min Read
Budget 2026 1
SHARE

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ರ ಬಜೆಟ್ ಮಂಡಿಸಿದ್ದಾರೆ. ಯಂಗ್ ಇಂಡಿಯಾ, ಉದ್ಯೋಗ ಸೃಷ್ಟಿ, ಆರೋಗ್ಯ, ದೇಶದ ರಕ್ಷಣೆಯೊಂದಿಗೆ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಗುರಿಯಾಗಿಸಿ ಬಜೆಟ್ ಮಂಡಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಸತತ 9ನೇ ಬಜೆಟ್ ಮಂಡಿಸಿದ್ದು, ಈ ಮೂಲಕ ದೇಶದಲ್ಲಿ ಅತ್ಯಧಿಕ ಬಜೆಟ್ ಮಂಡಿಸಿದ ಹಣಕಾಸು ಸಚಿವೆಯಾಗಿ ದಾಖಲೆ ಬರೆದಿದ್ದಾರೆ. ಇನ್ನು, ದೇಶದ ಇತಿಹಾಸದಲ್ಲಿ 2ನೇ ಬಾರಿ ಭಾನುವಾರ ಬಜೆಟ್ ಮಂಡನೆಯಾಗಿದೆ. ಬಜೆಟ್ ಮಂಡಿಸಿದ ಸೀತಾರಾಮನ್, 12 ವರ್ಷಗಳಲ್ಲಿ ಭಾರತದ ಆರ್ಥಿಕ ಪಥವು ಸ್ಥಿರತೆಯಿಂದ ಗುರುತಿಸಲ್ಪಟ್ಟಿದೆ. ನಮ್ಮ ಸರ್ಕಾರವೂ ವಾಕ್ಚಾತುರ್ಯಕ್ಕಿಂತ ಸುಧಾರಣೆಗೆ ಆದ್ಯತೆ ನೀಡಿದೆ. 2026ರ ಬಜೆಟ್ ಅನ್ನು ಯುವಶಕ್ತಿ ಮುನ್ನಡೆಸಲಿದೆ ಅಂದರು. 81 ನಿಮಿಷಗಳಲ್ಲಿ ಭಾನುವಾರದ ಬಜೆಟ್ ಭಾಷಣವನ್ನು ಅಂತ್ಯಗೊಳಿಸಿದರು. ಇದನ್ನೂ ಓದಿ: ಗಾಂಧಿ ಹೆಸರಿನಲ್ಲಿ ಹೊಸ ಯೋಜನೆ ಪ್ರಕಟ

budget

ಕೇಂದ್ರ ಬಜೆಟ್‌ನಲ್ಲಿ ಬದಲಾಗದ ಐಟಿ ಸ್ಲ್ಯಾಬ್‌
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪಾವತಿದಾರರಿಗೆ ಯಾವುದೇ ಸಿಹಿಸುದ್ದಿ ಸಿಕ್ಕಿಲ್ಲ. ಹಳೆಯ ತೆರಿಗೆ ಪದ್ದತಿಯನ್ನೇ ಯಥಾಸ್ಥಿತಿ ಕಾಯ್ದುಕೊಂಡಿದೆ. ಕಳೆದ ಬಾರಿಯ ತೆರಿಗೆ ಪದ್ದತಿಯೇ ಮುಂದುವರಿಸಿದೆ ಕೇಂದ್ರ ಸರ್ಕಾರ. ಅಲ್ಲದೇ, ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ನೀತಿ ಜಾರಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ರು. ಇದನ್ನೂ ಓದಿ: Union Budget 2026 | ಕರ್ನಾಟಕಕ್ಕೆ ಸಿಕ್ಕಿದ್ದೇನು? – ಈಡೇರದ ನಿರೀಕ್ಷೆಗಳೇನು?

ಹಾಲಿ ತೆರಿಗೆ ಸ್ಲ್ಯಾಬ್‌ ಎಷ್ಟಿದೆ?
ಮೊತ್ತ ಟ್ಯಾಕ್ಸ್ (2024-25ರದ್ದು)
* 4 ಲಕ್ಷದವರೆಗೆ ಇಲ್ಲ
* 4,00,001 ರಿಂದ 8 ಲಕ್ಷ 5%
* 8,00,001 ರಿಂದ 12 ಲಕ್ಷ 10%
* 12,00,001 ರಿಂದ 16 ಲಕ್ಷ 15%
* 16,00,001 ರಿಂದ 20 ಲಕ್ಷ 20%
* 20,00,001 ರಿಂದ 24 ಲಕ್ಷ 20%
* 24 ಲಕ್ಷ ಮೇಲ್ಪಟ್ಟರೆ 30% ಇದ್ದು, ಇದೇ ಸ್ಲ್ಯಾಬ್‌ಗಳು ಮುಂದುವರಿಯಲಿದೆ.

ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನ ಬಡತನ ರೇಖೆಯಿಂದ ಮೇಲೆ ಎತ್ತಿದ್ದೇವೆ ಅಂದಿರುವ ನಿರ್ಮಲಾ ಸೀತಾರಾಮನ್, ದೇಶದ ಜನ ಒಂದಷ್ಟು ಖುಷಿಪಡುವ ಹಾಗೂ ನಿರಾಳ ಎನ್ನಿಸುವಂಥ ಒಂದಷ್ಟು ಕ್ರಮಗಳನ್ನ ಘೋಷಿಸಿದ್ದಾರೆ. ಅದರಲ್ಲಿ ಡಯಾಬಿಟಿಸ್ ಔಷಧಿಗಳು, 7 ಕ್ಯಾನ್ಸರ್ ಔಷಧಗಳ ದರಗಳಲ್ಲಿ ಇಳಿಕೆಯಾಗಿದೆ. ಇನ್ನೊಂದು ಕಡೆ ಸಿಗರೇಟ್, ಮದ್ಯಪಾನ, ಐಷಾರಾಮಿ ವಾಚ್‌ಗಳ ಬೆಲೆ ಏರಿಕೆಯಾಗಿದೆ. ಹಾಗಿದ್ರೆ, ಯಾವುದೆಲ್ಲಾ ಕಡಿಮೆಯಾಗಿದೆ ಅನ್ನೋದನ್ನು ನೋಡೋದಾದ್ರೆ… ಇದನ್ನೂ ಓದಿ: ವೈಯಕ್ತಿಕ ಬಳಕೆಗೆ ಆಮದು ಮಾಡಿಕೊಳ್ಳುವ ಎಲ್ಲಾ ಸರಕುಗಳ ಮೇಲಿನ ಸುಂಕ 20%ನಿಂದ 10%ಗೆ ಇಳಿಕೆ

ಅಗ್ಗವಾಗಿದ್ದೇನು..?
* 17 ಕ್ಯಾನ್ಸರ್, ಡಯಾಬಿಟಿಸ್ ಔಷಧಿಗಳು
* 7 ಅಪರೂಪದ ಕಾಯಿಲೆಗಳ ಔಷಧಿ
* ಚರ್ಮ ಉತ್ಪನ್ನಗಳು, ಸೀ ಫುಡ್
* ಮೈಕ್ರೋಅವನ್, ಸೋಲಾರ್ ಬಿಡಿಭಾಗ, ಪ್ಯಾನಲ್
* ಸೆಣಬು ಉತ್ಪನ್ನ, ಜವಳಿ ಉತ್ಪನ್ನ
* ವಿದೇಶಿ ಯಾತ್ರೆ, ಫಾರಿನ್ ಎಜುಕೇಷನ್
* ಇವಿ ಬ್ಯಾಟರಿಗಳು, ಬಯೋಗ್ಯಾಸ್ ಮಿಶ್ರಿತ ಸಿಎನ್‌ಜಿ

ಏರಿಕೆ ಆಗಿದ್ದೇನು..?
* ಮದ್ಯ, ಸಿಗರೇಟ್, ಪಾನ್ ಮಸಾಲಾ
* ಐಷಾರಾಮಿ ವಾಚ್‌ಗಳು, ಖನಿಜಗಳು
* ಕಬ್ಬಿಣದ ಅದಿರು, ಕಲ್ಲಿದ್ದಲು
* ವಿಡಿಯೋ ಗೇಮ್ಸ್ & ಸಾಫ್ಟ್‌ವೇರ್‌
* ಕೊಡೆಗಳು, ಡಿಜಿಟಲ್ ಕ್ಯಾಮೆರಾ
* ಸೇರಿ ಇನ್ನಿತರ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ.

ಐಟಿ ರಿಟರ್ನ್ಸ್‌ಗೆ ಗಡುವು ವಿಸ್ತರಣೆ
ಐಟಿಆರ್ ಫೈಲ್ ಅವಧಿ ಡಿಸೆಂಬರ್ 31 ರಿಂದ ಮಾರ್ಚ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಶುಲ್ಕ ಪಾವತಿಯೊಂದಿಗೆ ಐಟಿ ರಿಟರ್ನ್ಸ್ ಪರಿಷ್ಕರಣೆಗೆ ಹೆಚ್ಚಿನ ಸಮಯ ಕೊಡಲಾಗಿದೆ. ಐಟಿಆರ್-1 ಮತ್ತು ಐಟಿಆರ್-2 ಫಾರ್ಮ್‌ಗಳನ್ನ ಹೊಂದಿರುವವರು ಜುಲೈ 31 ರ ವರೆಗೆ ರಿಟರ್ನ್ಸ್ ಸಲ್ಲಿಸಬಹುದು. ಆಡಿಟ್ ಮಾಡದ ವ್ಯವಹಾರ ಪ್ರಕರಣಗಳು ಮತ್ತು ಟ್ರಸ್ಟ್‌ಗಳನ್ನ ಆಗಸ್ಟ್ 31 ರ ವರೆಗೆ ರಿಟರ್ನ್ಸ್ ಸಲ್ಲಿಸಲು ಅವಕಾಶ ಇದೆ. ಮರುಮೌಲ್ಯಮಾಪನ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೂ ಜನರು ರಿಟರ್ನ್ಸ್ ನವೀಕರಿಸಬಹುದು. ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ರಾಸಿಕ್ಯೂಷನ್ ಚೌಕಟ್ಟನ್ನ ತರ್ಕಬದ್ಧಗೊಳಿಸಲು ಪ್ರಸ್ತಾಪ ಮಾಡಲಾಗಿದೆ. ಇದರಲ್ಲಿ ಯಾರಿಗೆ ಖುಷಿ.. ಯಾರಿಗೆ ಶಾಕ್ ಅಂತ ನೋಡುವುದಾದ್ರೆ.

ಯಾರಿಗೆ ತೆರಿಗೆ ಇಳಿಕೆ ಖುಷಿ?
* ಮೋಟಾರು ಅಪಘಾತ ಕ್ಲೇಮ್ ವ್ಯಕ್ತಿಗೆ ನೀಡುವ ಬಡ್ಡಿಗೆ ತೆರಿಗೆ ವಿನಾಯಿತಿ
* ಈ ಖಾತೆಯ ಮೇಲಿನ ಯಾವುದೇ ಟಿಡಿಎಸ್ ಅನ್ನು ರದ್ದುಗೊಳಿಸಲಾಗುತ್ತದೆ
* ಶಿಕ್ಷಣ, ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್ ದರ 5% ರಿಂದ 2% ಗೆ ಇಳಿಕೆ
* ಈಕ್ವಿಟಿ ಫ್ಯೂಚರ್‌ಗಳ ಮೇಲಿನ ಎಸ್‌ಟಿಟಿ ಶೇ 0.02 ರಿಂದ ಶೇ 0.05ಕ್ಕೆ ಹೆಚ್ಚಳ

ಯಾರಿಗೆ ತೆರಿಗೆ ಶಾಕ್..?
* ತಪ್ಪಾಗಿ ಐಟಿ ಸಲ್ಲಿಕೆ ಮಾಡಿದರೆ ಶೇ.100 ರಷ್ಟು ದಂಡ
* ಚರಾಸ್ತಿಗಳನ್ನ ಬಹಿರಂಗ ಪಡಿಸದಿದ್ದರೆ ದಂಡ
* ಕಾರ್ಪೊರೇಟ್ ಪ್ರವರ್ತಕರಿಗೆ 22% ತೆರಿಗೆ ವಿಧಿಸಲಾಗುವುದು
* ಕಾರ್ಪೊರೇಟ್ ಅಲ್ಲದ ಪ್ರವರ್ತಕರಿಗೆ ಮರುಖರೀದಿಗಳ ಮೇಲೆ 30% ತೆರಿಗೆ
* `ಕಾರ್ಪೊರೇಟ್ ಮಿತ್ರ’ರ ಮೂಲಕ ಎಂಎಸ್‌ಎಂಇಗಳ ನಿಯಂತ್ರಕ ಅಂಗೀಕಾರ
* ಆಸ್ತಿ ವ್ಯವಹಾರಗಳ ಮೇಲಿನ ಟಿಡಿಎಸ್‌ಗೆ ಇನ್ಮುಂದೆ `ಟ್ಯಾನ್’ ಅಗತ್ಯವಿಲ್ಲ
* ಆಸ್ತಿ ಮಾರಾಟದ ಮೇಲೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಸರಳೀಕರಣ
* ವಿದೇಶಿ ಕಂಪನಿಗಳಿಗೆ 2047ರ ವರೆಗೆ ತೆರಿಗೆ ರಜೆ
* ಭಾರತೀಯ ಮೀನುಗಾರಿಕಾ ಹಡಗುಗಳ ಮೀನುಗಾರಿಕೆಗೆ ಟ್ಯಾಕ್ಸ್ ಇಲ್ಲ
* ಎಂಬುದು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಈಡೇರದ ನಿರೀಕ್ಷೆ; ಬೆಂಗಳೂರಿಗೆ ಸಿಕ್ಕಿದ್ದು 2 ಹೈಸ್ಪೀಡ್ ರೈಲು ಮಾತ್ರ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ನಿರೀಕ್ಷೆಯೇ ಈಡೇರಿಲ್ಲ. ಕರ್ನಾಟಕಕ್ಕೆ ಅಂದುಕೊಂಡಷ್ಟು ಪಾಲು ಸಿಕ್ಕಿಲ್ಲ. ವಿಶೇಷವೇನೆಂದ್ರೆ, ಬೆಂಗಳೂರಿಗೆ 2-2 ಹೈಸ್ಪೀಡ್ ರೈಲು ಸಿಕ್ಕಿದ್ದು ಬಿಟ್ಟರೇ ಅಂಥಾ ಮಹತ್ವದ ಘೋಷಣೆಗಳೇನು ಇಲ್ಲ. ಇನ್ನು ಕರ್ನಾಟಕ ಕರಾವಳಿಗೆ ಪಕ್ಷಿಪಥ, ಬಿಟ್ಟರೇ ಬೇರೇನೂ ಇಲ್ಲ. ಇದರ ಜೊತೆಗೆ ಭದ್ರಾ ಮೇಲ್ದಂಡೆ, ರೈಲು ಯೋಜನೆಗಳಿಗೆ ಯಾವುದೇ ಅನುದಾನ ಸಿಕ್ಕಿಲ್ಲ.

ಕರ್ನಾಟಕಕ್ಕೆ ಸಿಕ್ಕಿದ್ದೇನು ಅಂತ ನೋಡುವುದಾದ್ರೆ..,

> ಕರ್ನಾಟಕಕ್ಕೆ 2 ಹೈಸ್ಪೀಡ್ ರೈಲು
> ಹೈದ್ರಾಬಾದ್ ಟು ಬೆಂಗಳೂರು ಹೈಸ್ಪೀಡ್ ರೈಲು
> ಬೆಂಗಳೂರು ಟು ಚೆನ್ನೈ ಹೈಸ್ಪೀಡ್ ರೈಲು
> ಕರ್ನಾಟಕ ಕರಾವಳಿಯಲ್ಲಿ ಪಕ್ಷಿ ಪಥ ನಿರ್ಮಾಣ
> ಕರ್ನಾಟಕ ಕರಾವಳಿಯಲ್ಲಿ ಆಮೆ ಹಾದಿ ನಿರ್ಮಾಣ

ಕೇಂದ್ರ ಬಜೆಟ್ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳು ಹುಸಿಯಾಗಿವೆ. ತೆರಿಗೆ ಯಥಾಸ್ಥಿತಿ ಕಾಯ್ದಿರಿಸಲಾಗಿದೆ. ಮದ್ಯಪ್ರಿಯರು ಹಾಗೂ ತಂಬಾಕು ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.

TAGGED:income taxkarnatakanarendra modiNirmala SitharamanUnion Budget 2026ಆದಾಯ ತೆರಿಗೆಕರ್ನಾಟಕಕೇಂದ್ರ ಬಜೆಟ್‌ 2026ನರೇಂದ್ರ ಮೋದಿನಿರ್ಮಲಾ ಸೀತಾರಾಮನ್
Share This Article
Facebook Whatsapp Whatsapp Telegram

Cinema news

Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post

You Might Also Like

Nepal Accident
Latest

ನೇಪಾಳದ ರೋಲ್ಪಾದಲ್ಲಿ ಪ್ರಪಾತಕ್ಕೆ ಬಿದ್ದ ಜೀಪ್ – 20 ಮಂದಿ ಸಾವು, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ

Public TV
By Public TV
13 minutes ago
siddaramaiah
Bengaluru City

ಇದು ಆಡಳಿತವಲ್ಲ, ಸಂಘಟಿತ ಲೂಟಿ – ಗ್ಯಾಸ್ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

Public TV
By Public TV
45 minutes ago
IndiGo Flight
Districts

ಶಿವಮೊಗ್ಗ – ಬೆಂಗಳೂರು ನಡುವಿನ ಹಾರಾಟ ನಿಲ್ಲಿಸಿದ ಇಂಡಿಗೋ ವಿಮಾನ

Public TV
By Public TV
47 minutes ago
Hajj
Latest

ಹಜ್‌ ಯಾತ್ರೆಯ ವಿಮಾನ ದರ 10,000 ರೂ. ಹೆಚ್ಚಳ

Public TV
By Public TV
48 minutes ago
SRH Player Heinrich Klaasen Loses Cool
Cricket

ಇನ್ನೊಮ್ಮೆ ಈ ರೀತಿ ಮಾಡಿದ್ರೆ ನೀನು ನೆಲದ ಮೇಲೆ ಬೀಳಬೇಕಾಗುತ್ತೆ: ಅಭಿಮಾನಿ ವಿರುದ್ಧ ಕ್ಲಾಸೆನ್ ಕೆಂಡಾಮಂಡಲ

Public TV
By Public TV
1 hour ago
bhagwant maan
Latest

ವಿಧಾನಸಭೆಗೆ ಕುಡಿದು ಬಂದಿದ್ರಾ ಪಂಜಾಬ್‌ ಸಿಎಂ?- ಆಲ್ಕೋಹಾಲ್‌ ಟೆಸ್ಟ್‌ಗೆ ವಿಪಕ್ಷಗಳ ಒತ್ತಾಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?