ನವದೆಹಲಿ: ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು ಮಂಡಿಸಿದ ಬಜೆಟ್ (Union Budget 2026) ಭಾರತದ ʻಅಭಿವೃದ್ಧಿ ಎಕ್ಸ್‌ಪ್ರೆಸ್’ಗೆ ಹೊಸ ಶಕ್ತಿ ಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬಣ್ಣಿಸಿದ್ದಾರೆ.
ಈ ಬಜೆಟ್ ಹೆಚ್ಚಿನ ಬಂಡವಾಳ ಮತ್ತು ಬೆಳವಣಿಗೆ ನಡುವೆ ಪರಿಪೂರ್ಣ ಸಮತೋಲನ ಸಾಧಿಸುತ್ತದೆ. ಇದು ವಿಶ್ವದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ. ನಂಬಿಕೆ ಆಧಾರಿತ ಆಡಳಿತ ಮತ್ತು ಜನ ಕೇಂದ್ರಿತ ಆರ್ಥಿಕ ಚೌಕಟ್ಟಿನ ದೃಷ್ಟಿಕೋನವನ್ನು ಈ ಬಜೆಟ್ ಒಳಗೊಂಡಿದೆ. ಈ ಮೂಲಕ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದ ತೃಪ್ತವಾಗಿಲ್ಲ. ಅದು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಬಯಸುತ್ತದೆ ಎಂಬ ಸಂದೇಶ ಸಾರಿದೆ. ಇದನ್ನೂ ಓದಿ: ರಕ್ಷಣಾ ಬಜೆಟ್ ಬರೋಬ್ಬರಿ 7.85 ಲಕ್ಷ ಕೋಟಿಗೆ ಏರಿಕೆ – ಯಾವ ವರ್ಷ ಎಷ್ಟಿತ್ತು?
ಬಜೆಟ್‌ನಲ್ಲಿ ಈಶಾನ್ಯ ಪ್ರದೇಶದ ಪ್ರವಾಸೋದ್ಯಮ ಉತ್ತೇಜನಕ್ಕೆ ಒತ್ತು ಕೊಡಲಾಗಿದೆ. ಒಟ್ಟಾರೆಯಾಗಿ, ಈ ವರ್ಷದ ಬಜೆಟ್ ಭಾರತದ ‘ಅಭಿವೃದ್ಧಿ ಎಕ್ಸ್‌ಪ್ರೆಸ್’ಗೆ ಹೊಸ ಶಕ್ತಿ ಮತ್ತು ವೇಗವನ್ನು ನೀಡುತ್ತದೆ. 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈ ಬಜೆಟ್ ಪ್ರತಿಬಿಂಬಿಸುತ್ತದೆ. ವಿಕಸಿತ ಭಾರತಕ್ಕೆ (Viksit Bharat) ಇದು ಸ್ಪಷ್ಟವಾದ ಮಾರ್ಗವನ್ನು ರೂಪಿಸುತ್ತದೆ.
ವರ್ತಮಾನದ ಕನಸುಗಳಿಗೆ ಜೀವ ತುಂಬಿ, ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಈ ಬಜೆಟ್ ಬಲಪಡಿಸುತ್ತದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಉನ್ನತ ಆಕಾಂಕ್ಷೆಗಳಿಗೆ ಈ ಬಜೆಟ್ ಬಲವಾದ ಅಡಿಪಾಯವಾಗಿದೆ.
ಬಜೆಟ್‌ನಲ್ಲಿ ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ಕೊಡಲಾಗಿದೆ. ಇನ್ನೂ, ಮಹಿಳಾ ಹಣಕಾಸು ಸಚಿವೆಯಾಗಿ, ನಿರ್ಮಲಾ ಜಿ ಸತತ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಕ್‌ಪತಿ ದೀದಿಯಿಂದ ‘SHE-ಮಾರ್ಟ್’ವರೆಗೆ – ಬಜೆಟ್‌ನಲ್ಲಿ ಗ್ರಾಮೀಣ ಮಹಿಳೆಯರಿಗೆ ಒತ್ತು

