– 15,000 ಶಾಲೆ, 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೆಟರ್ಸ್ ಲ್ಯಾಬ್
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ದಾಖಲೆಯ 9ನೇ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಕೊಡುಗೆಗಳನ್ನ ಘೋಷಣೆ ಮಾಡಿದ್ದಾರೆ. ದೇಶಾದ್ಯಂತ ಶಿಕ್ಷಣ, ಸಂಶೋಧನೆ, ಕ್ರಿಯೇಟಿವ್ (ಸೃಜನಶೀಲ) ವಲಯಗಳನ್ನ ಬಲಪಡಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರವು ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್ ಸ್ಥಾಪಿಸುವ ಉದ್ದೇಶ ಹೊಂದಿದೆ. ಜೊತೆಗೆ 15,000 ಮಾಧ್ಯಮಿಕ ಶಾಲೆಗಳು (ಹೈಸ್ಕೂಲ್) ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಲ್ಯಾಬ್ (ವಿಷಯ ರಚನೆಕಾರರ ಪ್ರಯೋಗಾಲಯ) ಗಳನ್ನ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್‌ಗೆ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಅನಿಮೇಷನ್, ವಿಷ್ಯುವಲ್ ಎಫೆಕ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVCG) ಬೆಳೆಯುತ್ತಿರುವ ಉದ್ಯಮವಾಗಿದ್ದು, 2030 ರ ವೇಳೆಗೆ 2 ದಶಲಕ್ಷ ವೃತ್ತಿಪರರ ಅಗತ್ಯವಿರಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ AVCG ಕಂಟೆಂಟ್ ಕ್ರಿಯೇಟರ್ಸ್ ಲ್ಯಾಬ್‌ಗಳನ್ನ ಸ್ಥಾಪಿಸುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ರು.
ಇದರೊಂದಿಗೆ ಡಿಸೈನ್ ಮತ್ತು ಇನೋವೇಷನ್ (ನಾವಿನ್ಯತೆ) ಶಿಕ್ಷಣವನ್ನ ಬಲಪಡಿಸಲು ಹೊಸ National Institute of Design in eastern India ಸ್ಥಾಪಿಸುವ ಗುರಿ ಹೊಂದಿದೆ. ಜೊತೆಗೆ ಐದು ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳನ್ನ ಅಭಿವೃದ್ಧಿಪಡಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಟೌನ್‌ಶಿಪ್‌ಗಳು ವಸತಿ ಸೌಲಭ್ಯಗಳು, ಸುಧಾರಿತ ಸಂಶೋಧನಾ ಮೂಲಸೌಕರ್ಯ, ಬಹು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನ ಒಂದೇ ಸಂಕೀರ್ಣದಲ್ಲಿ ಒಳಗೊಂಡಿರಲಿದೆ.

