ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ (Union Budget 2026) ದಿವ್ಯಾಂಗರಿಗೆ (Differently Abled) ಐಟಿ (IT), ಎವಿಜಿಸಿ (Animation, Visual Effects, Gaming, and Comics) ಆತಿಥ್ಯ ವಲಯಗಳಲ್ಲಿ ಸಮಗ್ರ ತರಬೇತಿ ನೀಡಲು ಕೌಶಲ್ಯ ಯೋಜನೆ ಘೋಷಿಸಲಾಗಿದೆ. ಅದಕ್ಕಾಗಿ ಆಧುನಿಕ ರಿಟೇಲ್ ಶೈಲಿಯ ಕೇಂದ್ರಗಳಾಗಿ ಸಹಾಯಕ ತಂತ್ರಜ್ಞಾನ ಮಾರ್ಟ್ ಸ್ಥಾಪನೆ ಮಾಡುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ.
ದಿವ್ಯಾಂಗ ಜನ ಕೌಶಲ ಯೋಜನೆ: ಐಟಿ, ಎವಿಜಿಸಿ ವಲಯಗಳು, ಆತಿಥ್ಯ ಮತ್ತು ಆಹಾರ, ಪಾನೀಯ ವಲಯಗಳು ದಿವ್ಯಾಂಗರಿಗೆ ಸೂಕ್ತವಾಗಿವೆ. ಇದು ಪ್ರತಿಯೊಬ್ಬ ದಿವ್ಯಾಂಗರಿಗೂ ನಿರ್ದಿಷ್ಟ ಉದ್ಯಮ-ಸಂಬಂಧಿತ ಮತ್ತು ಸಮಗ್ರ ತರಬೇತಿಯ ಮೂಲಕ ಗೌರವಯುತ ಜೀವನೋಪಾಯದ ಅವಕಾಶಗಳನ್ನು ಖಚಿತಪಡಿಸುತ್ತದೆ. ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್ ವಿಸ್ತರಣೆ – 40 ಸಾವಿರ ಕೋಟಿ ರೂ. ಮೀಸಲು, ಹೆಚ್ಚುವರಿ 10 ಸಾವಿರ ಕೋಟಿ ಘೋಷಣೆ
ದಿವ್ಯಾಂಗ ಸಹಾರಾ ಯೋಜನೆ: ಎಲ್ಲಾ ಅರ್ಹ ದಿವ್ಯಾಂಗರಿಗೆ ಉತ್ತಮ ಗುಣಮಟ್ಟದ ಸಹಾಯಕ ಸಾಧನಗಳಿಗೆ ಸಕಾಲಿಕ ಲಭ್ಯತೆ ಮೂಲಭೂತ ಅಗತ್ಯವಾಗಿದೆ. ಸಹಾಯಕ ಸಾಧನಗಳ ಉತ್ಪಾದನೆಯನ್ನು ಹೆಚ್ಚಿಸಲು ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮವನ್ನು ಬೆಂಬಲಿಸಲು, ಸಂಶೋಧನೆ & ಅಭಿವೃದ್ಧಿಗೆ ಹೂಡಿಕೆ ಮಾಡಬಹುದಾಗಿದೆ. ಇನ್ನೂ ಪಿಎಂ ದಿವ್ಯಾಶ ಕೇಂದ್ರಗಳನ್ನು ಬಲಪಡಿಸಲು, ದಿವ್ಯಾಂಗರು ಮತ್ತು ಹಿರಿಯ ನಾಗರಿಕರು ಸಹಾಯಕ ಉತ್ಪನ್ನಗಳನ್ನು ನೋಡಲು, ಪ್ರಯತ್ನಿಸಲು ಮತ್ತು ಖರೀದಿಸಲು ಆಧುನಿಕ ರಿಟೇಲ್ ಶೈಲಿಯ ಕೇಂದ್ರಗಳಾಗಿ ಸಹಾಯಕ ತಂತ್ರಜ್ಞಾನ ಮಾರ್ಟ್‍ಗಳನ್ನು ಸ್ಥಾಪನೆಗೆ ಬೆಂಬಲ ನೀಡುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್‍ನ ನಮ್ಮ ದೂರದೃಷ್ಟಿಯು ಪ್ರತಿ ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯವು ಅರ್ಥಪೂರ್ಣವಾದ ಭಾಗವಹಿಸುವಿಕೆಗಾಗಿ ಸಂಪನ್ಮೂಲಗಳು, ಸೌಕರ್ಯಗಳು ಮತ್ತು ಅವಕಾಶಗಳನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವುದಾಗಿದೆ ಎಂದು ಈ ಯೋಜನೆ ಘೋಷಣೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನೂ ಓದಿ: ಆದಾಯ ತೆರಿಗೆ ಸಲ್ಲಿಕೆಗೆ ಮಾ.31 ರ ವರೆಗೆ ಗಡುವು ವಿಸ್ತರಣೆ – ವಿಳಂಬಕ್ಕೆ 10% ದಂಡ

