ನವದೆಹಲಿ: ಏಪ್ರಿಲ್ 2026 ರಿಂದ ಹೊಸ ಐಟಿ ಕಾಯ್ದೆ (New IT Act) ಅನ್ವಯ ಆದಾಯ ತೆರಿಗೆ ಸಲ್ಲಿಕೆ ವ್ಯವಸ್ಥೆಯನ್ನ ಗೊಳಿಸಲಾಗುವುದು ಜೊತೆಗೆ, ಪರಿಷ್ಕೃತ ಆದಾಯ ತೆರಿಗೆ ಸಲ್ಲಿಸುವ ಕೊನೆಯ ದಿನಾಂಕವನ್ನ ಮಾರ್ಚ್ 31 ರ ವರೆಗೆ ವಿಸ್ತರಣೆ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ.

ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ. ಆದ್ರೆ ಆದಾಯ ತೆರಿಗೆ ಪದ್ದತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವರ್ಷ ಜಾರಿಯಾಗಿರುವ ಹಳೆ ಪದ್ದತಿಯಂತೆ ಮುಂದುವರಿಯಲಿದೆ. ಹೊಸ ಕಾಯ್ದೆಯು ತಾಂತ್ರಿಕ ದೋಷಗಳನ್ನ ದಂಡಗಳಾಗಿ ಪರಿವರ್ತಿಸಲು ಹೊಸ ಕಾನೂನು ಪ್ರಸ್ತಾಪಿಸುತ್ತದೆ. ಸಣ್ಣ ತೆರಿಗೆ ಅಪರಾಧಗಳು ದಂಡವನ್ನ ಮಾತ್ರ ಆಕರ್ಷಿಸುತ್ತವೆ. ಆದಾಯ ತೆರಿಗೆ ಸಲ್ಲಿಕೆ ವಿಳಂಬಕ್ಕೆ 10% ದಂಡ ವಿಧಿಸಲಾಗುತ್ತದೆ, ಯಾವುದೇ ಶಿಕ್ಷೆ ಇರುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ವಿದೇಶಿ ಪ್ರಯಾಣ ಕೈಗೊಳ್ಳುವವರಿಗಾಗಿ ಈವರೆಗೂ ಇದ್ದ TCS (ಟ್ಯಾಕ್ಸ್ ಕಲೆಕ್ಟಡ್ ಸೋರ್ಸ್) ದರವನ್ನು ಶೇ.5 ರಿಂದ ಶೇ. 2ಕ್ಕೆ ಇಳಿಸಲಾಗಿದೆ. ಈ ಕಾನೂನು ಅಘೋಷಿತ ಆದಾಯವನ್ನು 1 ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಲು ಪ್ರಸ್ತಾಪಿಸುತ್ತದೆ. ಇದರೊಂದಿಗೆ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ (Medical Education) ಮುಂದುವರಿಸಲು ಟಿಸಿಎಸ್ ದರವನ್ನ ಶೇಕಡಾ 5 ರಿಂದ 2 ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಐಟಿ ರಿಟರ್ನ್ಸ್ಗೆ ಗಡುವು ವಿಸ್ತರಣೆ
ಇನ್ನೂ ತೆರಿಗೆದಾರರಿಗೆ ನಿರ್ಮಲಾ ಸೀತಾರಾಮನ್ ರಿಲೀಫ್ ಕೊಟ್ಟಿದ್ದು, ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಗಡುವನ್ನ ವಿಸ್ತರಣೆ ಮಾಡಿರುವುದಾಗಿ ಘೋಷಿಸಿದ್ದಾರೆ. ಈಗ ಇರುವ ಡಿಸೆಂಬರ್ 31 ರ ಹಿಂದಿನ ಗಡುವಿನ ಬದಲಿಗೆ ಸಂಬಂಧಿತ ಮೌಲ್ಯಮಾಪನ ವರ್ಷದ ಮಾರ್ಚ್ 31 ರ ವರೆಗೂ ಗಡುವು ವಿಸ್ತರಣೆ ಮಾಡಲಾಗಿದೆ. ಅದರಂತೆ ತೆರಿಗೆದಾರರು ದೋಷಗಳಿದ್ದಲ್ಲಿ ಸರಿಪಡಿಸಬಹುದು ಅಥವಾ ತಪ್ಪಿದ್ದ ರಿಟರ್ನ್ಗಳನ್ನ ಸರಿಪಡಿಸಿ ಮಾರ್ಚ್ 31 ರ ಒಳಗೆ ಸಲ್ಲಿಸಬಹುದು. ಇದಕ್ಕೆ ನಾಮಮಾತ್ರ ಶುಲ್ಕ ವಿಧಿಸಲಾಗುತ್ತದೆ.
ಪೋರ್ಟಲ್ ಕ್ರ್ಯಾಶ್ಗಳನ್ನ ತಡೆಗಟ್ಟಲು ಸಮಯಗಳ ಬದಲಾವಣೆ
* ಐಟಿಆರ್-1 ಮತ್ತು ಐಟಿಆರ್-2: ಗಡುವು ಜುಲೈ 31 ರ ವರೆಗೆ
* ಆಡಿಟ್ ಮಾಡದ ವ್ಯವಹಾರ ಪ್ರಕರಣಗಳು/ಟ್ರಸ್ಟ್ಗಳು: ಗಡುವು ಆಗಸ್ಟ್ 31 ರ ವರೆಗೆ
2026-27 ರಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚವನ್ನ (Public Capital Expenditure) 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದೆ. ಕಳೆದ ವರ್ಷದ ಬಜೆಟ್ನಲ್ಲಿ 11.21 ಲಕ್ಷ ಕೋಟಿ ರೂ. ಹಣವನ್ನ ಮೀಸಲಿಡಲಾಗಿತ್ತು.

