ಬೆಂಗಳೂರು: ಬಗೆದಷ್ಟು ಬಯಲಾಗುತ್ತಿದೆ ಇನ್ಸ್‌ಪೆಕ್ಟರ್ ಗೋವಿಂದರಾಜು (Inspector Govindaraju) ಲಂಚಾವತಾರದ ಪುರಾಣ. ನಾಲ್ಕು ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಇನ್ಸ್‌ಪೆಕ್ಟರ್ ಗೋವಿಂದರಾಜು ಇದೇ ಗ್ಯಾಂಗ್ ಬಳಿ ಎರಡನೇ ಬಾರಿ ಹಣ ಪಡೆದಿರುವುದರ ಬಗ್ಗೆ ದೂರುದಾರರು ಲೋಕಾಯುಕ್ತ (Lokayukta) ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಬಡ್ಸ್ ಆಕ್ಟರ್ ಅಡಿಯಲ್ಲಿ ಈ ಹಿಂದೆ ಕೂಡ ಇದೇ ಆರೋಪಿಗಳ ಮೇಲೆ ಎರಡು ಕೇಸ್ ದಾಖಲಿಸಿದ್ದ ಇನ್ಸ್‌ಪೆಕ್ಟರ್ ಗೋವಿಂದರಾಜು ಆರೋಪಿಗಳಿಗೆ ಈ ಎರಡು ಕೇಸ್‌ನಿಂದ ವಿಮುಕ್ತಿಗೊಳಿಸಲು 15 ಲಕ್ಷ ರೂ. ಲಂಚ ಹಣ ಪಡೆದಿದ್ದರ ಬಗ್ಗೆ ಲೋಕಾಯುಕ್ತ ಪೊಲೀಸರ ಮುಂದೆ ದೂರುದಾರರು ತಿಳಿಸಿದ್ದಾರೆ. ಸುಜನ್, ಸೂರಜ್ ಎಂಬವರ ಮೇಲೆ ಕೇಸ್ ದಾಖಲಿಸಿದ್ದರು. ಮೊದಲ ಬಾರಿ ಕೇಸ್ ಆದಾಗ ಅಕ್ಬರ್ ಹಣ ಸೆಟಲ್ ಮಾಡಿರುತ್ತಾರೆ. ಮತ್ತೆ ಎರಡನೇ ಬಾರಿ ಬಡ್ಸ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿ ಪೊಲೀಸ್ ಠಾಣೆಗೆ ಕರೆ ತಂದು ಐದು ಲಕ್ಷ ರೂ. ಹಣಕ್ಕೆ ಡಿಮಾಂಡ್ ಮಾಡಿ ಮುಂಗಡವಾಗಿ ಒಂದು ಲಕ್ಷ ಹಣ ಪಡೆದಿರುತ್ತಾರೆ. ನಾಲ್ಕು ಲಕ್ಷ ಹಣ ಪಡೆಯುವಾಗ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ನಾನು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು, ಯಾವಾಗ ನಿಲ್ಲಬೇಕು ಎಂದು ಜನ ತೀರ್ಮಾನಿಸುತ್ತಾರೆ: ನಿಖಿಲ್
ದೂರುದಾರರ ಜೊತೆ ಹಣಕ್ಕೆ ಆಗ ಕಾಲ್ ಮಾಡಿ ಇನ್ಸ್‌ಪೆಕ್ಟರ್ ಗೋವಿಂದರಾಜು ಕಾಲ್ ಮಾಡಿ ಉಳಿದ ನಾಲ್ಕು ಲಕ್ಷ ರೂ.ಹಣ ತಂದು ಕೊಡಿ ಎಂದು ಮಾತನಾಡಿದ್ದಾರೆ. ಜೊತೆಗೆ ಕೆಲವೊಂದು ಆಡಿಯೋಗಳಲ್ಲಿ ಎಸಿಪಿ ಐಜಿಯ ಹೆಸರನ್ನ ಕೂಡ ಪ್ರಸ್ತಾಪ ಮಾಡಿದ್ದಾರೆ. ಸದ್ಯ ಆಡಿಯೋಗಳನ್ನ ಪಡೆದಿರೋ ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಯಿಂದಲೇ 84 ರನ್ – ಇಶಾನ್ ಕಿಶನ್ ಸಿಡಿಲಬ್ಬರದ ಶತಕ, ಕಿವೀಸ್ ಕಂಗಾಲು

