– ಆದಾಯ ತೆರಿಗೆ ಮಿತಿ 15 ಲಕ್ಷ ರೂ. ವರೆಗೆ ವಿಸ್ತರಣೆ ಸಾಧ್ಯತೆ
– ಉದ್ಯೋಗಸ್ಥ ದಂಪತಿಗೆ ಜಂಟಿ ತೆರಿಗೆ ವ್ಯವಸ್ಥೆ…?
– ಆಭರಣಗಳ ಜಿಎಸ್‌ಟಿ ದರವೂ ಇಳಿಕೆ ಸಾಧ್ಯತೆ
ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್ (Union Budget 2026) ಭಾನುವಾರ (ಫೆ.1) ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 9ನೇ ಬಾರಿಗೆ ಬಜೆಟ್ ಮಂಡಿಸಲಿದ್ದು, ಪಿ. ಚಿದಂಬರಂ ದಾಖಲೆಯನ್ನು ಸರಿಗಟ್ಟುತ್ತಿದ್ದಾರೆ.
ಭಾನುವಾರದ ಬಜೆಟ್ ಕುರಿತು ಜನಸಾಮಾನ್ಯರಿಂದ ಹಿಡಿದು ಉದ್ಯಮಿಗಳವರೆಗೆ ನಿರೀಕ್ಷೆಗಳು ಹೆಚ್ಚಿವೆ. ಜನಸಾಮಾನ್ಯರಿಗೆ ಹಲವು ಪ್ರಮುಖ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಬಜೆಟ್‌ನಲ್ಲಿ ಒಂದಿಷ್ಟು ದೊಡ್ಡ ಘೋಷಣೆಗಳು ಇರಬಹುದು ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಈ ನಿಟ್ಟಿನಲ್ಲಿ ಬಜೆಟ್ ನಿರೀಕ್ಷೆಗಳೇನು ಅಂತ ನೋಡೋದಾದ್ರೆ… ಇದನ್ನೂ ಓದಿ: ಮೈಲಿಗಲ್ಲು ಸಾಧಿಸಲು ನಿರ್ಮಲಾ ಸೀತಾರಾಮನ್ ಸಜ್ಜು – 9ನೇ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ

ನಿರ್ಮಲಾ ಬಜೆಟ್: ಫೋಕಸ್ ಏನಿರಬಹುದು..?
* ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಸಾಧ್ಯತೆ
* ಹಿರಿಯ ನಾಗರಿಕರಿಗೆ ರಿಲೀಫ್, 80-ಟಿಟಿಬಿ ಮಿತಿ ಬದಲಾವಣೆ (ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿನ ಠೇವಣಿಗಳ ಮೇಲಿನ ಬಡ್ಡಿಗೆ ಸದ್ಯ 50,000 ವರೆಗೆ ಕಡಿತ. ಈ ಮಿತಿಯನ್ನು 1 ಲಕ್ಷ ರೂಪಾಯಿವರೆಗೆ ಏರಿಸೋ ಸಾಧ್ಯತೆ)
* ಸೆಕ್ಷನ್ 24(ಬಿ) ಅಡಿಯಲ್ಲಿ ಗೃಹ ಸಾಲದ ಕಡಿತ
* ಸೆಕ್ಷನ್ 80ರಡಿ ಆರೋಗ್ಯ ವಿಮೆ ಕಡಿತ
* MSME ಗಳ ಉತ್ಪಾದನೆ, ಮೂಲಸೌಕರ್ಯಗಳಿಗೆ ಒತ್ತು
* ದೀರ್ಘಾವಧಿಯ ಉಳಿತಾಯ ಪ್ರೋತ್ಸಾಹ ಕ್ರಮಗಳು
* ರಸ್ತೆ, ರೈಲು, ವಸತಿ, ನಗರಾಭಿವೃದ್ಧಿಗೆ ಬಂಡವಾಳ ಹೂಡಿಕೆ
* ಡಿಜಿಟಲ್ ಆರ್ಥಿಕತೆ, ಎಐ ಮತ್ತು ಡೀಪ್ ಟೆಕ್ನಾಲಜಿಗೆ ಹೊಸ ಪಾಲಿಸಿ

ದೊಡ್ಡವರಿಗೆ ʻಒನ್ ಟೈಂ ಸೆಟಲ್ ಮೆಂಟ್ʼ ಸ್ಕೀಂ?
* ಟ್ಯಾಕ್ಸ್ ಟೆರರಿಸಂ ಹಣೆಪಟ್ಟಿಯಿಂದ ಹೊರಬರುವ ಪ್ರಯತ್ನ
* ಕೆಳ, ಮಧ್ಯಮ ವರ್ಗಕ್ಕಿಂತ `ದೊಡ್ಡವರಿಗೆ’ ಬಜೆಟ್‌ನಲ್ಲಿ ರಿಲೀಫ್..?
* ಕೇಂದ್ರದ ಬಳಿ ವಿದೇಶದಲ್ಲಿ ಹೂಡಿಕೆ ಮಾಡಿದ ದೊಡ್ಡವರ ಸಂಪೂರ್ಣ ವಿವರ
* ತೆರಿಗೆ ಕಟ್ಟಿದವರಿಗೆ ಯಾವುದೇ ಸಮಸ್ಯೆ ಇಲ್ಲ
* ತೆರಿಗೆ ಕಟ್ಟದವರಿಗೆ ಒನ್ ಟೈಂ ಸೆಟ್ಲ್ಮೆಂಟ್‌ಗೆ ಅವಕಾಶ ಸಾಧ್ಯತೆ
ಉದ್ಯೋಗಸ್ಥ ದಂಪತಿಗೆ ಜಂಟಿ ತೆರಿಗೆ…?
* ಉದ್ಯೋಗಸ್ಥ ದಂಪತಿಗೆ ಜಂಟಿ ತೆರಿಗೆ ವ್ಯವಸ್ಥೆ..? (ಬೇರೆ ಬೇರೆ ಸ್ಲಾಬ್‌ಗಳ ಬದಲು ಎರಡನ್ನೂ ಒಟ್ಟಿಗೆ ಸೇರಿಸಲು ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ಪ್ರಸ್ತಾವನೆ)
* ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಸಾಧ್ಯತೆ
* ಸದ್ಯ 12 ಲಕ್ಷವರೆಗೆ ಆದಾಯ ಹೊಂದಿರುವವರು ತೆರಿಗೆ ಪಾವತಿಸುವಂತಿಲ್ಲ
* ಈ ವರ್ಷದಿಂದ 15 ಲಕ್ಷವರೆಗೆ ತೆರಿಗೆ ವಿನಾಯ್ತಿ ಸಾಧ್ಯತೆ
* ತೆರಿಗೆ ಸ್ಲ್ಯಾಬ್‌ಗಳ ಪರಿಶೀಲನೆ ಸಾಧ್ಯತೆ

ಚಿನ್ನಾಭರಣ ಉದ್ಯಮ: ಆಮದು ಸುಂಕ ಕಡಿತ?
* ಚಿನ್ನಾಭರಣ ಖರೀದಿಗೆ ಪ್ಯಾನ್ ಮಿತಿಯಲ್ಲಿ ಬದಲಾವಣೆ ಸಾಧ್ಯತೆ
* ಸದ್ಯಕ್ಕೆ 2 ಲಕ್ಷವರೆಗೆ ಆಭರಣ ಖರೀದಿಗೆ ಪ್ಯಾನ್ ಬೇಕಾಗಿಲ್ಲ
* ಈ ಮಿತಿಯನ್ನು ಹೆಚ್ಚಳ ಮಾಡೋ ಸಾಧ್ಯತೆ ಇದೆ
* ಆಭರಣ ಕ್ಷೇತ್ರಕ್ಕೆ ವಿಶೇಷ ರಿಯಾಯಿತಿ ನೀಡಬಹುದು
* ಪ್ರಸ್ತುತ ಚಿನ್ನದ ಆಮದು ಸುಂಕ ಶೇ.6ರಷ್ಟಿದೆ
* ಸುಂಕದ ಪ್ರಮಾಣವನ್ನು ಇನ್ನಷ್ಟು ಇಳಿಕೆ ನಿರೀಕ್ಷೆ
* ಆಭರಣಗಳ ಮೇಲೆ ಇರುವ ಶೇ.3 ರಷ್ಟು ಜಿಎಸ್‌ಟಿ ದರ 1.25ಕ್ಕೆ ಇಳಿಕೆ ಸಾಧ್ಯತೆ

ಹಿರಿಯ ನಾಗರಿಕರಿಗೆ ಮತ್ತಷ್ಟು ಗಿಫ್ಟ್….?
* ಹಿರಿಯ ನಾಗರಿಕರಿಗೆ ಬಜೆಟ್‌ನಲ್ಲಿ ಬಂಪರ್ ನಿರೀಕ್ಷೆ
* ಐಟಿ ಕಾಯ್ದೆಯ ಸೆಕ್ಷನ್ 80 ಅಡಿಯಲ್ಲಿ ಇನ್ನಷ್ಟು ವಿನಾಯ್ತಿ
* ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿನ ಠೇವಣಿಗಳ ಮೇಲಿನ ಬಡ್ಡಿಗೆ ಸದ್ಯ 50,000 ವರೆಗೆ ಕಡಿತ
* ಈ ಮಿತಿಯನ್ನು 1 ಲಕ್ಷ ರೂಪಾಯಿವರೆಗೆ ಏರಿಸೋ ಸಾಧ್ಯತೆ
* 3 ಲಕ್ಷ ರೂ. ವರೆಗಿನ ತೆರಿಗೆ ವಿನಾಯ್ತಿಯನ್ನು ಹೆಚ್ಚಿಸಬಹುದು
ವೈದ್ಯಕೀಯ ಔಷಧ, ಉಪಕರಣಗಳ ಸುಂಕ ಕಡಿತ..!
* ಆರೋಗ್ಯ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು
* ರೊಯೋಟಿಕ್ಸ್, ರೇಡಿಯೋ ಥೆರಪಿಯಂಥ ಸುಧಾರಿತ ಉಪಕರಣ ಮೇಲಿನ ಸೀಮಾ ಸುಂಕ ಕಡಿಮೆ
* ಔಷಧ ತಯಾರಿಕಾ ವಲಯಕ್ಕೆ ಹೆಚ್ಚಿನ ಬೆಂಬಲ ಸಿಗುವ ನಿರೀಕ್ಷೆ
* 2ನೇ ಮಹಾನಗರ, 3ನೇ ಮಹಾನಗರದಲ್ಲಿ ಡಯಾಗ್ನೋಸ್ಟಿಕ್ ಸೌಲಭ್ಯಗಳು
* ಐವಿಎಫ್, ಸಹಾಯಕ ತಂತ್ರಜ್ಞಾನಗಳಿಗೆ ಸಬ್ಸಿಡಿ; ತೆರಿಗೆ ರಿಲೀಫ್
* ಪಿಎಂ ಕಿಸಾನ್ ಯೋಜನೆಯಡಿ ನೀಡಲಾಗುವ 6000 ರೂ.ಅನ್ನು 9000 ರೂ.ವರೆಗೆ ಏರಿಸುವ ನಿರೀಕ್ಷೆ
* ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆ
* 2047ರ ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು
* ಸ್ಟಾರ್ಟ್ ಅಪ್‌ಗಳು ಮತ್ತು ಐಟಿ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು
* ಮುದ್ರಾಂಕ ಶುಲ್ಕಗಳು ಕಡಿಮೆ ಮಾಡುವ ನಿರೀಕ್ಷೆ
* ಆರೋಗ್ಯ ಮತ್ತು ಜೀವ ವಿಮೆಗೆ ಸಂಬಂಧಿಸಿದಂತೆ ಸುಧಾರಣೆ ಘೋಷಿಸಬಹುದು
ರಾಜ್ಯದ ನಿರೀಕ್ಷೆಗಳೇನು?
> ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ನಿರೀಕ್ಷೆ
> 3ನೇ ಹಂತದ ಮೆಟ್ರೋ ವಿಸ್ತರಣೆಗೆ ಕೇಂದ್ರದ ವಿಶೇಷ ನೆರವು
> ಬೆಂಗಳೂರು ಉಪನಗರ ರೈಲು ಯೋಜನೆಗೆ ವಿಶೇಷ ಅನುದಾನ
> ಕೃಷ್ಣ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ
> ಶಿರಾಡಿ ಸುರಂಗ ಮಾರ್ಗ, ಹಾಸನ ಐಐಟಿ, ರಾಯಚೂರು ಏಮ್ಸ್ ನಿರೀಕ್ಷೆ
> ಕರ್ನಾಟಕ ಬಂದರುಗಳಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್
> ಮಂಡ್ಯದಲ್ಲಿ ಕೈಗಾರಿಕಾ ಸ್ಥಾಪನೆ, ಮೈಸೂರು-ಕುಶಾಲನಗರ ಹೊಸ ರೈಲು ಯೋಜನೆ

