ಕೋಲ್ಕತ್ತಾ: ಮೊಮೊ ಫ್ಯಾಕ್ಟರಿಯಲ್ಲಿ (Momo Factory) ಯಾರ ಹಣ ಹೂಡಿಕೆಯಾಗಿದೆ? ಕೋಲ್ಕತ್ತಾದ ಆನಂದಪುರದ ವೇರ್‌ಹೌಸ್ ಮತ್ತು ಮೊಮೊ ಕಾರ್ಖಾನೆಯಲ್ಲಿ ನಡೆದ ಅಗ್ನಿ ದುರಂತ ಆಕಸ್ಮಿಕ ಘಟನೆಯಲ್ಲ. ಮಮತಾ ಬ್ಯಾನರ್ಜಿ ಸರ್ಕಾರದ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ವಾಗ್ದಾಳಿ ನಡೆಸಿದರು.
ಉತ್ತರ-24 ಪರಗಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೋಲ್ಕತ್ತಾದ ಸಮೀಪದ ಆನಂದಪುರ ಗೋದಾಮಿನಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ್ದ ಭೀಕರ ಅಗ್ನಿ ಅವಘಡ ಉಲ್ಲೇಖಿಸಿ ಬಂಗಾಳ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಬೆಂಕಿ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಕಾರ್ಮಿಕರಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಆನಂದಪುರ ಬೆಂಕಿ ಘಟನೆ ಆಕಸ್ಮಿಕ ಅಲ್ಲ. ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರದ ಭಷ್ಟ್ರಾಚಾರದ ಪರಿಣಾಮ. ಮೊಮೊ ಕಾರ್ಖಾನೆಯಲ್ಲಿ ಯಾರ ಹಣ ಹೂಡಿಕೆಯಾಗಿದೆ? ಕಾರ್ಖಾನೆ ಮಾಲೀಕರು ಯಾರೊಂದಿಗೆ ವಿದೇಶಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ? ಮಾಲೀಕರನ್ನ ಇನ್ನೂ ಏಕೆ ಬಂಧಿಸಿಲ್ಲ? ಅಂತಲೂ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕೋಲ್ಕತ್ತಾ ಬಳಿಯ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 21 ಮಂದಿ ಸಜೀವ ದಹನ, 28 ಜನ ಮಿಸ್ಸಿಂಗ್

ಈ ಘಟನೆ ಹಿಂದೆ ಪಕ್ಷದ ಭ್ರಷ್ಟಾಚಾರವಿಲ್ಲ ಎಂದು ಟಿಎಂಸಿ ಕೂಗಿ ಕೂಗಿ ಹೇಳುತ್ತಿದೆ. ಆದ್ರೆ ಘಟನೆ ನಡೆದು 32 ಗಂಟೆಗಳ ನಂತರ ಸಚಿವರು ಸ್ಥಳಕ್ಕೆ ಬಂದಿದ್ದಾರೆ. ಜೊತೆಗೆ ಇದು ರಾಜ್ಯ ಆಡಳಿತ ಮತ್ತು ಪರಿಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಮುಖ್ಯಮಂತ್ರಿಗಳು ಈ ಘಟನೆ ಸಂಪೂರ್ಣ ತನಿಖೆಗೆ ಆದೇಶಿಸಬೇಕು. ನಿಜವಾದ ಅಪರಾಧಿಗಳನ್ನ ಪತ್ತೆ ಮಾಡಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ಪತನ ಕೇಸ್‌ನಲ್ಲಿ ಸ್ಫೋಟಕ ಟ್ವಿಸ್ಟ್ – ಕೊನೇ ಕ್ಷಣದಲ್ಲಿ ಪೈಲಟ್ ಬದಲಾಗಿದ್ದೇಕೆ?
ಏನಾಗಿತ್ತು ಘಟನೆ?
ಜನವರಿ 26 ರಂದು ಕೋಲ್ಕತ್ತಾ ನಗರಕ್ಕೆ ಹತ್ತಿರವಿರುವ ದಕ್ಷಿಣ 24 ಪರಗಣ ಜಿಲ್ಲೆಯ ಆನಂದಪುರದಲ್ಲಿ 2 ಗೋದಾಮು ಮತ್ತು ಮೊಮೊ ಕಂಪನಿಯ ಉತ್ಪಾದನಾ ಘಟಕ ಸುಟ್ಟು ಬೂದಿಯಾಗಿತ್ತು. ಈ ಘಟನೆಯಲ್ಲಿ 21 ಕಾರ್ಮಿಕರು ಸಜೀವ ದಹನವಾಗಿದ್ದರು.

