– ರಾಯ್ ಪ್ರಕರಣ ಎಸ್‌ಐಟಿ ತನಿಖೆ ಆಗಲಿ ಎಂದ ಶಾಸಕ
ರಾಮನಗರ: ಸಿಜೆ ರಾಯ್ (CJ Roy) ಅವರೇ ಗುಂಡು ಹೊಡೆದುಕೊಂಡ್ರಾ ಅಥವಾ ಯಾರಾದ್ರು ಗುಂಡು ಹೊಡೆದ್ರಾ? ಎಂದು ರಾಯ್ ಆತ್ಮಹತ್ಯೆ ಬಗ್ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕನಕಪುರದಲ್ಲಿ ಮಾತನಾಡಿದ ಅವರು, ಘಟನೆ ಆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ, ಇದ್ದವರು ಐಟಿಯವರು (IT) ಮಾತ್ರ. ಒಳಗಡೆ ಏನಾಗಿದ್ಯೋ ಏನೋ ಗೊತ್ತಿಲ್ಲ. ನನಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿಯವರು ಚುನಾವಣೆಗೆ ನೂರಾರು ಕೋಟಿ ದುಡ್ಡು ಕೇಳಿದ್ದಾರೆ. ಅವರು ಹಣ ಕೊಡದಿದ್ದಕ್ಕೆ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ಇಂತಹ ಭ್ರಷ್ಟ ಬಿಜೆಪಿಯಿಂದ (BJP) ನಮ್ಮ ದೇಶ ಅಭಿವೃದ್ಧಿ ಆಗಲ್ಲ. ಅಶೋಕಣ್ಣ, ಸುನೀಲಣ್ಣ, ಯತ್ನಾಳ್ ಅವ್ರು ಮೈಸೂರಿನ ಒಂದು ಕೋತಿ ಎಲ್ಲದಕ್ಕೂ ಬಾಯಿ ಬಡಿದುಕೊಳ್ತಾರೆ. ಇದರ ಬಗ್ಗೆ ಯಾಕೆ ಯಾರೂ ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉದ್ಯಮಿ ಸಿಜೆ ರಾಯ್ ಪ್ರಕರಣ ತನಿಖೆ ಚುರುಕು – ಕುಟುಂಬಸ್ಥರ ವಿಚಾರಣೆ, ಹೇಳಿಕೆ ದಾಖಲು
ಒಬ್ಬ ಕಾಮನ್ ಮ್ಯಾನ್ ಹಣ ಸಂಪಾದನೆ ಮಾಡೋಕೆ ಬಿಜೆಪಿ ಬಿಡುತ್ತಿಲ್ಲ. ಅವರಿಗೆ ಸಾಲ ಇಲ್ಲ, ಯಾವುದೇ ಸಮಸ್ಯೆ ಇಲ್ಲ ಕಳೆದ ಒಂದು ತಿಂಗಳಿನಿಂದ ಐಟಿ ಅವರಿಗೆ ಕಿರುಕುಳ ನೀಡಿದೆ. ಕೇಂದ್ರದಲ್ಲಿ ಬಿಜೆಪಿ ಇದ್ರೆ ಇದೇ ಕಿರುಕುಳ ಮುಂದುವರಿಯುತ್ತದೆ. ಈ ಬಗ್ಗೆ ಎಸ್‌ಐಟಿ ತನಿಖೆ ಆಗಲಿ. ಇದನ್ನ ಸಿಬಿಐಗೆ ಕೊಟ್ರೆ ಅದೂ ಅವರ ಕೈಯಲ್ಲೇ ಇದೆ, ನ್ಯಾಯಸಿಗಲ್ಲ. ಹಾಗಾಗಿ ಎಸ್‌ಐಟಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: 300 ಕೋಟಿಗೆ ಸರಿಯಾದ ದಾಖಲಾತಿ ಹೊಂದಿರಲಿಲ್ವಾ ರಾಯ್? – ಉದ್ಯಮಿಗೆ ಕೇರಳ ಎಲೆಕ್ಷನ್ ಕಂಟಕ?

