– ಸಿ.ಜೆ ರಾಯ್ ಫೋನ್‌ಗಳು ಪೊಲೀಸರ ವಶಕ್ಕೆ
– ರಾಯ್ ಡೈರಿಯಲ್ಲಿ ಸಿಕ್ತು ಮಹತ್ವದ ಮಾಹಿತಿ
ಬೆಂಗಳೂರು: ನೂರಾರು ಕೋಟಿ ಒಡೆಯ ಕಾನ್ಫಿಡೆಂಟ್ ಗ್ರೂಪ್ (Confident Group) ಮುಖ್ಯಸ್ಥ ಸಿ.ಜೆ ರಾಯ್ (CJ Roy) ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಸಿಜೆ ರಾಯ್ ಮೊಬೈಲ್, ಡೈರಿ ವಶಕ್ಕೆ ಪಡೆದಿರೋ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಗನ್‌ನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ ಸಿಜೆ ರಾಯ್ ಸಾವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆಗೂ ಮುನ್ನ ಯಾರ ಜೊತೆಯಾದರೂ ಮಾತನಾಡಿದ್ರಾ? ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದ್ರಾ? ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮೊಬೈಲ್‌ಗಳನ್ನು ಸಿಐಟಿ ಸೈಬರ್ ಸೆಲ್‌ಗೆ ರಿಕವರಿಗಾಗಿ ಕಳುಹಿಸಿದ್ದಾರೆ. ಇದನ್ನೂ ಓದಿ: 300 ಕೋಟಿಗೆ ಸರಿಯಾದ ದಾಖಲಾತಿ ಹೊಂದಿರಲಿಲ್ವಾ ರಾಯ್? – ಉದ್ಯಮಿಗೆ ಕೇರಳ ಎಲೆಕ್ಷನ್ ಕಂಟಕ?
ಆತ್ಮಹತ್ಯೆಗೂ ಮುನ್ನ ತಾಯಿ ಜೊತೆ ಮಾತನಾಡಬೇಕೆಂದು ರಾಯ್ ತಿಳಿಸಿದ್ದರು. ಜೊತೆಗೆ ಗನ್‌ಮ್ಯಾನ್ ಬಳಿ ಯಾರಿಗೂ ಒಳಗೆ ಬಿಡದಂತೆ ಹೇಳಿದ್ದರು. ಹಾಗಾದರೆ ಆತ್ಮಹತ್ಯೆಗೂ ಮುನ್ನ ನಿಜಕ್ಕೂ ತಾಯಿ ಜೊತೆಗೆ ಮಾತನಾಡಿದ್ರಾ? ಅಥವಾ ಬೇರೆ ಇನ್ಯಾರ ಜೊತೆಯಾದ್ರೂ ಮಾತನಾಡಿದ್ರಾ? ಅಥವಾ ಮೆಸೇಜ್ ಕಳುಹಿಸಿದ್ದಾರಾ? ಎಂಬ ಕೆಲ ಅನುಮಾನಗಳು ವ್ಯಕ್ತವಾಗಿದ್ದು, ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದು, ಸಿಐಡಿಗೆ ರವಾನಿಸಿದ್ದಾರೆ. ಎರಡು ಫೋನ್‌ಗೆ ಪಾಸ್‌ವಾರ್ಡ್ ಇರುವ ಕಾರಣ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಬೇಕು. ಹೀಗಾಗಿ ಸದ್ಯ ಸಿಐಡಿ ಸೈಬರ್ ಸೆಲ್‌ಗೆ ಮೊಬೈಲ್‌ನ್ನು ರವಾನೆ ಮಾಡಿದ್ದು, ಮೊಬೈಲ್‌ನಲ್ಲಿ ಇರುವ ಮಾಹಿತಿ ರಿಕವರಿ ಮಾಡಲಿದ್ದಾರೆ. ಇದನ್ನೂ ಓದಿ: ಕೇಂದ್ರದ ಮಾತು ಕೇಳದ ಉದ್ಯಮಿಗಳಿಗೆ ಇಡಿ, ಐಟಿ ಬಳಸಿಕೊಂಡು ಕಿರುಕುಳ: ಪ್ರಿಯಾಂಕ್ ಖರ್ಗೆ ಕಿಡಿ
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಇದೀಗ ಹಲವು ಮಾಹಿತಿಗಳು ಬಯಲಾಗುತ್ತಿದ್ದು, ಪೊಲೀಸ್ ತನಿಖೆ ವೇಳೆ ಅವರ ಪರ್ಸನಲ್ ಡೈರಿ ಸಿಕ್ಕಿದೆ ಎನ್ನಲಾಗಿದೆ. ಅದರಲ್ಲಿ ಅವರು ಬೆಂಗಳೂರಿನ ಪ್ರಭಾವಿ ರಾಜಕಾರಣಿಗಳು, ಚಿತ್ರರಂಗದ ಅನೇಕರ ಜೊತೆ ಒಡನಾಟ ಇರುವುದನ್ನು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಎದೆಯ ಮೇಲೆ ಗನ್ ಇಟ್ಟು ಟ್ರಿಗರ್ ಪಾಯಿಂಟ್ ಒತ್ತಿ ರಾಯ್ ಆತ್ಮಹತ್ಯೆ – ಮರಣೋತ್ತರ ಪರೀಕ್ಷೆಯಲ್ಲಿ ದೃಢ
ತಮ್ಮ ಕಾರ್ಯಕ್ರಮಗಳಿಗೆ ನಟಿ, ಮಾಡೆಲ್‌ಗಳನ್ನು ಕರೆಸುತ್ತಿದ್ದ ಸಿಜೆ ರಾಯ್ ತಮ್ಮ ಡೈರಿಯಲ್ಲಿ ನಟಿಯರು, ಮಾಡೆಲ್‌ಗಳ ಹೆಸರು ಬರೆದಿಟ್ಟಿದ್ದಾರೆ. ಆದ್ರೆ ಯಾವ ಕಾರಣಕ್ಕಾಗಿ ಹೆಸರುಗಳು ಬರೆದಿದ್ದಾರೆ ಅಂತ ತನಿಖೆ ನಡೆಯುತ್ತಿದೆ. ಬರೀ ಈವೆಂಟ್ ವಿಚಾರಕ್ಕಾ? ಅಥವಾ ಬೇರೆ ಇದೆಯಾ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಡೈರಿಯನ್ನು ಇಂಚಿಂಚೂ ಪರಿಶೀಲನೆ ಮಾಡುತ್ತಿರುವ ಪೊಲೀಸರು ಡೈರಿಯಲ್ಲಿನ ಸೀಕ್ರೆಟ್ ಹೊರಗೆಳೆಯಲಿದ್ದಾರೆ. ಇದನ್ನೂ ಓದಿ: ಸಿಜೆ ರಾಯ್ ‘ಸ್ನೇಹಿತನಿಗೂ ಮಿಗಿಲು’ – ನಟ ಮೋಹನ್ ಲಾಲ್ ಭಾವನಾತ್ಮಕ ಪೋಸ್ಟ್
ಸಿಜೆ ರಾಯ್ ಕುಟುಂಬಸ್ಥರ ವಿಚಾರಣೆ:
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಪೊಲೀಸರು ಖಾಸಗಿ ಹೋಟೆಲ್‌ವೊಂದರಲ್ಲಿ ಸಿಜೆ ರಾಯ್ ಹೆಂಡತಿ-ಮಕ್ಕಳ ಹೇಳಿಕೆ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನಿರಬಹುದು? ಕೊನೆಯ ಬಾರಿ ಯಾವಾಗ ಕಾಲ್ ಮಾಡಿದ್ರು? ಆತ್ಮಹತ್ಯೆಗೂ ಮುನ್ನ ಕರೆ ಅಥವಾ ಮೆಸೇಜ್ ಏನಾದ್ರು ಮಾಡಿದ್ರಾ? ಐಟಿ ತನಿಖೆ ಬಗ್ಗೆ ನಿಮ್ಮ ಬಳಿ ಏನು ಹೇಳಿದ್ರು? ಬೇರೆ ಯಾವುದಾದ್ರು ಸಮಸ್ಯೆಗಳಿತ್ತಾ? ಹೀಗೆ ಹತ್ತು ಹಲವು ಪ್ರಶ್ನೆ ಕೇಳಿರುವ ಪೊಲೀಸರು ಸಿಜೆ ರಾಯ್ ಕುಟುಂಬಸ್ಥರ ಹೇಳಿಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಉದ್ಯಮಿ ಸಿಜೆ ರಾಯ್ ಮೊಬೈಲ್‌ನಲ್ಲಿದ್ಯಾ ಡೆತ್ ಸೀಕ್ರೆಟ್ – ರಿಕವರಿಗಾಗಿ ಸಿಐಡಿ ಸೈಬರ್ ಸೆಲ್‌ಗೆ ರವಾನೆ
ಉದ್ಯಮಿ ಸಿಜೆ ರಾಯ್ ಸೂಸೈಡ್ ಪ್ರಕರಣ ಸಂಬಂಧ ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ಮಾತು ಕೇಳದ ಉದ್ಯಮಿಗಳಿಗೆ ಕಿರುಕುಳ ಕೊಡಲಾಗುತ್ತಿದೆ ಅಂತ ಆರೋಪಿಸಿದ್ದಾರೆ. ಕಳೆದ 10 ವರ್ಷಗಳಿಂದ ಇಡಿ, ಐಟಿ, ಬಳಸಿಕೊಂಡು ಕೇಂದ್ರದಿಂದ ಟಾರ್ಚರ್ ಕೊಡಲಾಗುತ್ತಿದೆ. ಕೇಂದ್ರಕ್ಕೆ ತಲೆ ಭಾಗದ ಉದ್ಯಮಿಗಳಿಗೆ ಈ ಕಿರುಕುಳ ಆಗುತ್ತಿದೆ ಎಂದಿದ್ದಾರೆ. ಜನರಿಗೆ ತೊಂದರೆ ಕೊಡಲು ಕೇಂದ್ರದ ಬಳಿ ಹೊಸ ಆಯುಧವೇ ಇದೆ ಎಂದು ಪ್ರಿಯಾಂಕ್ ಹೇಳಿದ್ದಾರೆ. ಇದನ್ನೂ ಓದಿ: ಸಿ.ಜೆ ರಾಯ್ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ನಡೆಯಲಿರುವ ಅಂತ್ಯಕ್ರಿಯೆ
ಈ ನಡುವೆ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಸಮಜಾಯಿಷಿಗೆ ಇಳಿದಿದ್ದಾರೆ. ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಐಟಿ ಮಾಹಿತಿ ನೀಡಿದ್ದಾರೆ. ಐಟಿ ವಂಚನೆ ಮಾಡಿದ್ದರ ಬಗ್ಗೆ ತನಿಖೆ ನಡೆಸಲಾಗ್ತಾ ಇತ್ತು. 1 ತಿಂಗಳ ಹಿಂದೆ ದಾಳಿ ನಡೆಸಿ ದಾಖಲೆ ವಶಕ್ಕೆ ಪಡೆದಿದ್ದೆವು. ರಾಯ್ ಆಡಿಟಿಂಗ್ ಅಲ್ಲಿ ವ್ಯತ್ಯಾಸ ಇತ್ತು. ಹೀಗಾಗಿ ಮತ್ತೆ ಪರಿಶೀಲನೆ ನಡೆಸಲಾಗುತ್ತಿತ್ತು. ಶುಕ್ರವಾರ ಹೇಳಿಕೆ ಪಡೆದಿಲ್ಲ, ಒತ್ತಡ ಹೇರಿಲ್ಲ. ರಾಜಕೀಯ ಪ್ರೇರಿತವಾಗಿ ತನಿಖೆ ನಡೆಯಬಹುದು. ಹೀಗಾಗಿ ತನಿಖೆಯ ಮೇಲೆ ಗಮನ ಇಡಬೇಕಿದೆ ಎಂದು ಗೃಹ ಕಚೇರಿಗೆ ಐಟಿ ಮನವಿ ಮಾಡಿದೆ. ಇದನ್ನೂ ಓದಿ: ಯಾವುದೇ ಸಾಲವಿಲ್ಲ, ಶತ್ರುಗಳಿಲ್ಲ.. ಐಟಿ ಅಧಿಕಾರಿಗಳ ಒತ್ತಡ ಇತ್ತು: ಸಿಜೆ ರಾಯ್ ಬಗ್ಗೆ ಸಹೋದರ ಮಾತು
ಇನ್ನು ಸಿಜೆ ರಾಯ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಮೀಷನರ್ ಸೀಮಂತ್ ಕುಮಾರ್ ಸಿಂಗ್‌ರಿಂದ ಡಿಜಿಪಿ ಸಲೀಂ ಮಾಹಿತಿ ಪಡೆದಿದ್ದಾರೆ. ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ ಸಾಧ್ಯತೆ ಇದ್ದು, ರಿಯಲ್ ಎಸ್ಟೇಟ್ ವ್ಯವಹಾರ, ಐಟಿ ರೇಡ್ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ – ಅಶೋಕ್ ನಗರ ಪೊಲೀಸರಿಂದ ಯುಡಿಆರ್ ದಾಖಲು

