– 2 ದಿನಗಳಲ್ಲಿ ಬೆಳ್ಳಿ ದರ 1 ಲಕ್ಷ ಡೌನ್
ಬೆಂಗಳೂರು/ಮುಂಬೈ: ಸತತ ಏರಿಮುಖವಾಗಿ ಸಾಗುತ್ತಿದ್ದ ಚಿನ್ನ – ಬೆಳ್ಳಿಯ ದರ (Gold And Silver Price) ಕಳೆದ 2 ದಿನಗಳಲ್ಲಿ ಭಾರೀ ಕುಸಿತ ಕಂಡಿದೆ. ಕೇಂದ್ರ ಬಜೆಟ್‌ಗೂ (Budget 2026) ಮುನ್ನವೇ ಕಳೆದ 2 ದಿನಗಳಲ್ಲಿ ಚಿನ್ನ 10 ಗ್ರಾಮ್‌ಗೆ 1.5 ಲಕ್ಷ ರೂ.ಗೆ ಕುಸಿದಿದ್ದರೆ, 4 ಲಕ್ಷ ರೂ. ಇದ್ದ ಬೆಳ್ಳಿಯ ದರ 3 ಲಕ್ಷಕ್ಕೆ ಕುಸಿದಿದೆ.

ಇದು ವ್ಯಾವಹಾರಿಕರಿಗೆ ನಿರಾಸೆ ಮೂಡಿಸಿದ್ದರೆ, ಚಿನ್ನ – ಬೆಳ್ಳಿ ಖರೀದಿ ಗ್ರಾಹಕರಿಗೆ ಫುಲ್ ಖುಷ್ ಆಗಿದೆ. 2 ದಿನಗಳ ಹಿಂದೆ 4 ಲಕ್ಷ ರೂ. ಇದ್ದ ಕೆಜಿ ಬೆಳ್ಳಿ ಬೆಲೆ ಜನವರಿ 31 (ಇಂದು) ರಂದು 30% ಕುಸಿತ ಕಂಡಿದ್ದು, ಕೆಜಿ 3 ಲಕ್ಷ ರೂ.ಗಳಿಗೆ ಇಳಿಕೆಯಾಗಿದೆ. ಇನ್ನೂ 1.93 ಲಕ್ಷ ರೂ.ಗೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನದ ದರ 10 ಗ್ರಾಮ್‌ಗೆ ಇಂದು 1,50,849 ರೂ.ಗಳಿಗೆ ಕುಸಿದಿದೆ. ಈ ದರಗಳು ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳನ್ನ ಒಳಗೊಂಡಿರುವುದಿಲ್ಲ. ಇದನ್ನೂ ಓದಿ: ಚಿನ್ನ – ಬೆಳ್ಳಿ ಬೆಲೆ ದಿಢೀರ್ ಕುಸಿತ; ಒಂದೇ ದಿನದಲ್ಲಿ ಬೆಳ್ಳಿ 15%, ಚಿನ್ನ 10% ಬೆಲೆ ಕುಸಿತ
ಚಿನ್ನದ ದರ ಪ್ರಮುಖ ನಗರಗಳಲ್ಲಿ ಎಷ್ಟಿದೆ?


