ಸಿನಿಮಾ (Cinema) ರಂಗದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ (Casting Couch) ವಿಚಾರ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ನಟಿ ಐಶ್ವರ್ಯ ರಾಜೇಶ್ (Aishwarya Rajesh) ತಮಗಾದ ಕಹಿ ಅನುಭವವನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ.
ಈ ವಿಚಾರವಾಗಿ ಮಾತಾಡಿರುವ ಐಶ್ವರ್ಯ ರಾಜೇಶ್, ನಾನು ಚಿತ್ರರಂಗಕ್ಕೆ ಬರುವ ಮುನ್ನ ನಮ್ಮ ಅಣ್ಣನ ಜೊತೆ ಒಂದು ಫೋಟೊಶೂಟ್‌ಗೆ ಹೋಗಿದ್ದೆ. ನಮ್ಮ ಅಣ್ಣನನ್ನು ಸ್ಟುಡಿಯೋದ ಹೊರಗಡೆ ಕೂರಿಸಿ ನನಗೆ ಒಂದು ತುಂಡು ಬಟ್ಟೆ ಕೊಟ್ಟರು. ಇದನ್ನು ಹಾಕ್ಕೊಂಡು ಬಾ, ನಿನ್ನ ಬಾಡಿ ನೋಡಬೇಕು ಎಂದ್ರು. ಯಾವ ಆಂಗಲ್‌ನಲ್ಲಿ ಹೇಗೆ ಕಾಣ್ತಿಯಾ, ಹೇಗೆ ಫೋಟೊ ಹಿಡಿಯಬಹುದು ಅಂತೆಲ್ಲಾ ಹೇಳ್ತಿದ್ರು. ಮೂವರು ಆ ಬಟ್ಟೆ ಹಾಕಿಕೊಳ್ಳುವಂತೆ ನನ್ನ ಮನವೊಲಿಸುವ ಪ್ರಯತ್ನ ಮಾಡಿದ್ರು. ನಾನು ಒಪ್ಪಿಕೊಳ್ಳುವ ಹಂತಕ್ಕೆ ಹೋಗಿದ್ದೆ. ಅಷ್ಟರಲ್ಲಿ ನನಗೆ ಏನು ಅನ್ನಿಸಿತೋ ಗೊತ್ತಿಲ್ಲ. ನಮ್ಮ ಅಣ್ಣನ ಅನುಮತಿ ಕೇಳಬೇಕು ಎಂದು ಹೊರಗೆ ಬಂದುಬಿಟ್ಟೆ ಎಂದಿದ್ದಾರೆ. ಇದನ್ನೂ ಓದಿ: ಕಮಿಟ್‌ಮೆಂಟ್‌ಗೆ ನೋ ಎಂದಿದಕ್ಕೆ ಸಿನಿಮಾ ಆಫರ್ಸ್ ಕಡಿಮೆಯಾಗಿದೆ: ‘ಪುಷ್ಪ 2’ ನಟಿ
ಇದೇ ರೀತಿ ಎಷ್ಟು ಹೆಣ್ಣು ಮಕ್ಕಳಿಗೆ ಹೀಗೆ ನಡೆದಿದೆಯೋ ಗೊತ್ತಿಲ್ಲ. ಆ ಘಟನೆ ಮಾತ್ರ ನನ್ನ ಮನಸ್ಸಿನಲ್ಲೇ ಉಳಿದುಬಿಟ್ಟಿದೆ. ಈ ಬಗ್ಗೆ ಸಾಕಷ್ಟು ಜನರಿಗೆ ಹೇಳಿ ಆ ಫೋಟೊ ಸ್ಟುಡಿಯೋ ಬಗ್ಗೆ ಕಂಪ್ಲೇಟ್ ಮಾಡಿದ್ದೆ ಎಂದು ಅವರು ವಿವರಿಸಿದ್ದಾರೆ.
ಶೂಟಿಂಗ್‌ಗೆ 10 ನಿಮಿಷ ತಡವಾಗಿ ಬಂದಿದ್ದಕ್ಕೆ ನಿರ್ದೇಶಕ ಬೈದಿದ್ದರು. ಅದನ್ನೂ ಸಹ ಮರೆಯಲು ಸಾಧ್ಯವಿಲ್ಲ.. ಅವರು ಮತ್ತೊಬ್ಬ ನಟಿಯ ಜೊತೆ ಹೋಲಿಕೆ ಮಾಡಿ ಮಾತನಾಡಿದ್ದರು. ತಪ್ಪು ಮಾಡದೇ ಇದ್ದರೂ ನೂರಾರು ಸಹ ಕಲಾವಿದರ ಮುಂದೆ ಬೈದಿದ್ದು ಬೇಸರ ತಂದಿತ್ತು ಎಂದಿದ್ದಾರೆ. ಆಗ ಸುಮ್ಮನಿದ್ದೆ, ಈಗ ಆಗಿದ್ರೆ ಖಂಡಿತಾ ಸುಮ್ಮನಿರುತ್ತಿರಲಿಲ್ಲ ಎಂದಿದ್ದಾರೆ.
ಕೊನೆಯದಾಗಿ ಐಶ್ವರ್ಯ ತಮಿಳು ಚಿತ್ರ ‘ತೀಯಾವರ್ ಕುಲೈಗಲ್ ನಡುಂಗ’ದಲ್ಲಿ ಅರ್ಜುನ್ ಜೊತೆ ಕಾಣಿಸಿಕೊಂಡಿದ್ದರು. 2025 ರ ಹಿಟ್ ಸಂಕ್ರಾಂತಿಕಿ ವಾಸ್ತುನಂ ಚಿತ್ರದಲ್ಲಿ ನಟಿಸಿದ್ದರು. ಐಶ್ವರ್ಯಾ ಪ್ರಸ್ತುತ ಭರತ್ ದರ್ಶನ್ ನಿರ್ದೇಶನದ ‘ಓ..! ಸುಕುಮಾರಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಒಂದು ಅವಕಾಶ ಕಳೆದು ಹೋದರೆ, ನೂರಾರು ಅವಕಾಶಗಳು ಬರುತ್ತವೆ: ಕಾಸ್ಟಿಂಗ್ ಕೌಚ್ ಬಗ್ಗೆ ಸನ್ನಿ ಲಿಯೋನ್ ಪ್ರತಿಕ್ರಿಯೆ

