– ಕಾರ್ಯಕ್ರಮದಲ್ಲಿ ಸಾಲು ಸಾಲು ಶಾಸಕರು ಭಾಗಿ
ರಾಮನಗರ: ಕನಕಪುರದಲ್ಲಿ (Kanakapura) ಅದ್ಧೂರಿ ಕನಕೋತ್ಸವ (Kanakotsava) ಕಾರ್ಯಕ್ರಮ ನಡೆಯುತ್ತಿದ್ದು, ಕನಕೋತ್ಸವದ ಹೆಸರಲ್ಲಿ ಡಿಸಿಎಂ ಡಿಕೆಶಿ (DK Shivakumar) ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಕನಕೋತ್ಸವ ಕಾರ್ಯಕ್ರಮದಲ್ಲಿ ಸಾಲು ಸಾಲು ಶಾಸಕರು ಭಾಗಿಯಾಗಿದ್ದು, ಶುಕ್ರವಾರ 20ಕ್ಕೂ ಹೆಚ್ಚು ಶಾಸಕರು ಕನಕಪುರಕ್ಕೆ ಬಂದಿದ್ದಾರೆ.
ಕಾರ್ಯಕ್ರಮದ ಬಳಿಕ ಡಿಕೆಶಿ ಮನೆಯಲ್ಲಿ ಔತಣ ಕೂಟದಲ್ಲಿ ಭಾಗಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಅಧಿಕಾರ ಹಂಚಿಕೆ ಹೊತ್ತಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಕೆ ಪ್ಲ್ಯಾನ್ ಮಾಡಿ ಕನಕೋತ್ಸವ ನೆಪದಲ್ಲಿ ಹತ್ತಾರು ಶಾಸಕರನ್ನ ಕರೆತಂದು ಶಕ್ತಿ ಪ್ರದರ್ಶನ ಮಾಡ್ತಿದ್ದಾರಾ ಎಂಬ ಕುತೂಹಲ ಹೆಚ್ಚಾಗಿದ್ದು, ಇಂದೂ ಕೂಡಾ ಹಲವು ಶಾಸಕರು ಕನಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ನಾವು ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತೇವೆ, ನಾಚಿಕೆಯಿಂದ ತಲೆ ಬಾಗುತ್ತೇವೆ: ಪಾಕ್ ಪ್ರಧಾನಿ ನೋವಿನ ಮಾತು

ಕಳೆದ ಮೂರು ದಿನಗಳಿಂದ ಕನಕೋತ್ಸವ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಪಕ್ಷದ ಎಲ್ಲಾ ಶಾಸಕರಿಗೂ ಆಹ್ವಾನ ನೀಡಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಹುಮ್ನಾಬಾದ್ ಸ್ಫೋಟ ಪ್ರಕರಣ – ತನಿಖೆಗೆ ಈಶ್ವರ್ ಖಂಡ್ರೆ ಆದೇಶ

