– ಇಬ್ಬರೇ ಇರಲು 2 ಮನೆ ಬಾಡಿಗೆ ಪಡೆದಿದ್ದ ದಂಪತಿ
– 17 ಲಕ್ಷ ಕಳವಾಗಿದ್ರೂ ದೂರು ಕೊಡದ ಜೋಡಿ!
ಮೈಸೂರು: ನಗರದ (Mysuru) ಹೊರವಲಯದ ಯಾಂಡಳ್ಳಿ ಬಳಿ ಡ್ರಗ್ಸ್ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗೋಡೌನ್ ಜಪ್ತಿ ಮಾಡಿ, ಅದರಲ್ಲಿ ಸಂಗ್ರಹಿಸಿದ್ದ ಡ್ರಗ್ಸ್ ತಯಾರಿಕೆಗೆ ಬಳಸುವ ಭಾರೀ ಪ್ರಮಾಣದ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ (Uttar Pradesh) ಮೂಲದ ದಂಪತಿ ನಾಲ್ಕು ತಿಂಗಳ ಹಿಂದೆ ಎರಡು ಮನೆ ಹಾಗೂ ಮನೆ ಕೆಳ ಅಂತಸ್ತಿನಲ್ಲಿ ಗೋಡೌನ್ ಬಾಡಿಗೆ ಪಡೆದಿದ್ದರು. ಈ ಗೋಡೌನ್‌ನಲ್ಲಿ ಡ್ರಗ್ಸ್ ತಯಾರಿಕೆಗೆ ಬಳಸುವ ಭಾರಿ ಪ್ರಮಾಣದ ಕೆಮಿಕಲ್ಸ್ ಸಂಗ್ರಹಿಸಿದ್ದರು. ಕೃತ್ಯಕ್ಕೆ ಅನುಕೂಲವಾಗುವಂತೆ ನಿರ್ಜನ ಪ್ರದೇಶದ ಒಂಟಿ ಮನೆಯನ್ನೇ ದಂಪತಿ ಆಯ್ಕೆ ಮಾಡಿಕೊಂಡಿದ್ದರು. ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಥೈಲ್ಯಾಂಡ್‌ನಿಂದ ಫ್ಲೈಟ್‌ನಲ್ಲಿ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ – 10 ಮಂದಿ ಕೇರಳ ಗ್ಯಾಂಗ್ ಬಂಧಿಸಿದ ಪೊಲೀಸರು
ಗೋಡೌನನ್ನಲ್ಲಿ ಡ್ರಗ್ಸ್ ತಯಾರಿಕೆಗಾಗಿ ಭಾರಿ ಪ್ರಮಾಣದ ಕಚ್ಚಾ ಪದಾರ್ಥಗಳನನ್ನು ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಿದ್ದರು. ಡ್ರಗ್ಸ್ ತಯಾರಿಕೆಗೆ ಅಂತಿಮ ಹಂತದ ಸಿದ್ಧತೆಗಳನ್ನ ಮಾಡಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರೋಪಿಗಳ ಪ್ಲ್ಯಾನ್‌ನ್ನು ವಿಫಲಗೊಳಿಸಿದ್ದಾರೆ.
ದಂಪತಿ ಈ ಮನೆಗೆ ಬಂದು ಮೂರು ತಿಂಗಳು ಕಳೆದಿದ್ದರೂ ಸಹ ಸ್ಥಳೀಯರ ಜೊತೆ ಮಾತುಕತೆ ಇರಲಿಲ್ಲ. ಕೇವಲ ಇಬ್ಬರು ವಾಸ ಮಾಡುವುದಕ್ಕೆ ಎರಡು ಮನೆ ಬಾಡಿಗೆ ಪಡೆದಿದ್ದರು. ರಾತ್ರಿ ವೇಳೆಯಲ್ಲಿ ಮಾತ್ರ ಆಗಾಗ ಗೋಡೌನ್ ಬಾಗಿಲು ತೆರೆಯುತ್ತಿದ್ದರು. ಸ್ಥಳೀಯರು ಮಾತನಾಡಿಸಲು ಪ್ರಯತ್ನಿಸಿದಾಗ ಕೈ ಸನ್ನೆಯಲ್ಲೇ ಮಾತನಾಡುತ್ತಿದ್ದರು. ದೆಹಲಿ ನೋಂದಣಿಯ ಕಾರು ಬಳಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಎರಡು ತಿಂಗಳ ಹಿಂದೆ ಈ ಮನೆಯಲ್ಲಿ 17 ಲಕ್ಷ ರೂ. ಕಳ್ಳತನವಾಗಿತ್ತು. ಆಗ ಮಾತ್ರ ಸ್ಥಳೀಯರೊಬ್ಬರಿಗೆ ದಂಪತಿ ಮಾಹಿತಿ ಕೊಟ್ಟಿದ್ದರು. ಈ ಬಗ್ಗೆ ಪೊಲೀಸರಿಗೆ ಯಾವ ಮಾಹಿತಿ ಕೊಡದ ಕಾರಣ ದೂರು ಕೂಡ ದಾಖಲಾಗಿರಲಿಲ್ಲ. ಈ ನಡೆ ಹಲವಾರು ಅನುಮಾನಗಳಿಗೂ ಕಾರಣವಾಗಿತ್ತು. ಇನ್ನೂ ಮೈಸೂರಿನ ರಿಂಗ್ ರಸ್ತೆಯಲ್ಲಿ ನಾಲ್ಕು ತಿಂಗಳ ಹಿಂದೆ ಡ್ರಗ್ಸ್ ತಯಾರಿಕಾ ಜಾಲ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದರು. ಇದನ್ನೂ ಓದಿ: ಗೆಳೆಯನಿಗಾಗಿ ಡ್ರಗ್ಸ್ ಮಾರಾಟ – ಮಹಿಳಾ ಟೆಕ್ಕಿ ಸೇರಿದಂತೆ ನಾಲ್ವರು ಅರೆಸ್ಟ್

