ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗಟ್ಟಲು ಯುಜಿಸಿ ನಿಯಮ (UGC Equity Rules) ಜಾರಿಗೆ ತಂದ ಹೊಸ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ (Supreme Court) ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಈ ಮಾರ್ಗಸೂಚಿಗಳು ಸಮಾಜವನ್ನ ವಿಭಜಿಸುವ ಅಪಾಯ ಹೊಂದಿವೆ. ನಿಯಮಗಳಲ್ಲಿ ಅಸ್ಪಷ್ಟತೆಯಿದ್ದು. ಅದು ದುರ್ಬಳಕೆಯಾಗದಂತೆ ತಜ್ಞರು ಮರು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದೆ. ಇದನ್ನೂ ಓದಿ: PublicTV Explainer: ಭಾರತ-ಇಯು ಡೀಲ್; ಐಷಾರಾಮಿ ಕಾರುಗಳು, ಬಿಯರ್, ವೈನ್, ಮೆಡಿಸಿನ್ – ಯಾವ್ಯಾವುದರ ಬೆಲೆ ಇಳಿಕೆ?

ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಯುಜಿಸಿಗೆ ನೋಟಿಸ್ ಜಾರಿಗೊಳಿಸಿದೆ. ಮಾರ್ಚ್ 19 ರಂದು ನೋಟಿಸ್‌ಗೆ ಉತ್ತರ ಸಲ್ಲಿಸಬೇಕು. ಸಾಲಿಸಿಟರ್ ಜನರಲ್ ನೋಟಿಸ್ ಸ್ವೀಕರಿಸಿದ್ದಾರೆ. 2019 ರಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಕೂಡ ಸಂವಿಧಾನ ಬದ್ಧತೆ ಪರಿಶೀಲನೆಗೆ ಸಂಬಂಧಿಸುತ್ತವೆ. ಆದ್ದರಿಂದ ಆ ಅರ್ಜಿಗಳನ್ನ ಇವುಗಳೊಂದಿಗೆ ಜೋಡಿಸಬೇಕು ಅಂತ ಆದೇಶಿಸಿದೆ.
ಸದ್ಯ, 2012ರಲ್ಲಿ ಜಾರಿಯಲ್ಲಿದ್ದ ಹಳೆಯ ನಿಯಮಗಳೇ ಚಾಲ್ತಿಯಲ್ಲಿ ಇರಲಿವೆ. ಪ್ರಕರಣದ ಮುಂದಿನ ವಿಚಾರಣೆಯನ್ನ ಮಾರ್ಚ್ 19ಕ್ಕೆ ನಿಗದಿಪಡಿಸಿದೆ. ಜಾತಿ ತಾರತಮ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ರೋಹಿತ್ ವೇಮುಲ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸಲ್ಲಿಸಿದ್ದ ಪಿಐಎಲ್ ಹಿನ್ನೆಲೆಯಲ್ಲಿ ಯುಜಿಸಿ ಈ ಹೊಸ ನಿಯಮಗಳನ್ನು ರೂಪಿಸಿತ್ತು. ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್ ಪತ್ನಿ ಸುನೇತ್ರಾ ಹೆಸರು ಪ್ರಸ್ತಾಪಿಸಲು ಎನ್‌ಸಿಪಿ ಚಿಂತನೆ

ಸುಪ್ರೀಂ ಆದೇಶದ ಮುಖ್ಯಾಂಶಗಳು
* ಯುಜಿಸಿ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ
* ನಿಯಮಗಳಲ್ಲಿ ಅಸ್ಪಷ್ಟತೆಯಿದ್ದು ಮರು ಪರಿಶೀಲನೆ ಅಗತ್ಯವಿದೆ
* ಈ ನಿಯಮಗಳಿಂದ ಸಮಾಜದಲ್ಲಿ ಒಡಕು ಮೂಡುವ ಸಾಧ್ಯತೆ
* ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದರೂ ಇನ್ನೂ ಜಾತಿ ತಾರತಮ್ಯವನ್ನು ಎದುರಿಸುತ್ತಿದ್ದೇವೆ
* ತಾರತಮ್ಯ ವ್ಯಾಪಕವಾಗಿ ವ್ಯಾಖ್ಯಾನಿಸುವ ಸೆಕ್ಷನ್ 3(ಇ) ಇದೆ, ಸೆಕ್ಷನ್ 3(ಇ) ಇದ್ದರೂ ಸೆಕ್ಷನ್ 3(ಸಿ) ಅಗತ್ಯವೇನು..?
* ಯುಜಿಸಿ ನಿಯಮ-2026 ತಡೆಗೆ ಸುಪ್ರೀಂ ಕೋರ್ಟ್ ಆದೇಶ
* ಕೇಂದ್ರ ಸರ್ಕಾರ, ಯುಜಿಸಿಗೆ ಸುಪ್ರೀಂ ಕೋರ್ಟ್ ನೋಟಿಸ್
* ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 19ಕ್ಕೆ ನಿಗದಿ

