ದಾವಣಗೆರೆ: ಮದುವೆಯಾಗಿ (Marriage) ಎರಡೇ ತಿಂಗಳಿಗೆ ಪ್ರಿಯಕರನೊಂದಿಗೆ (Lover) ಪರಾರಿಯಾಗಿ, ಪತಿಯ (Husband) ಆತ್ಮಹತ್ಯೆಗೆ ಕಾರಣರಾಗಿದ್ದ ಪತ್ನಿ (Wife) ಹಾಗೂ ಆಕೆಯ ಪ್ರಿಯಕರನನ್ನು (Lover) ದಾವಣಗೆರೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಮಹಿಳೆ ತನ್ನ ಪ್ರಿಯಕರ ಕುಮಾರ್‌ನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಮನನೊಂದು ಆಕೆಯ ಪತಿ ಹರೀಶ್ ಡೆತ್‌ನೋಟ್ ಬರೆದಿಟ್ಟು ಜಮೀನಿನಲ್ಲಿ ನೇಣಿಗೆ ಶರಣಾಗಿದ್ದ. ಅಲ್ಲದೇ ಮುಂದೆ ನಿಂತು ಮದುವೆ ಮಾಡಿಸಿದ್ದ ಮಹಿಳೆಯ ಸೋದರ ಮಾವ ರುದ್ರೇಶ್ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಜ.28 ರಂದು ಹರೀಶ್ ಪತ್ನಿಯನ್ನು ಬಂಧಿಸಿದ್ದರು. ಇಂದು (ಜ.29) ಆಕೆಯ ಪ್ರಿಯಕರ ಕುಮಾರ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆಯಾದ ಎರಡೇ ತಿಂಗಳಿಗೆ ಮತ್ತೊಬ್ಬನ ಜೊತೆ ಪತ್ನಿ ಪರಾರಿ – ನೇಣಿಗೆ ಕೊರಳೊಡ್ಡಿದ ಪತಿ
ಆರೋಪಿ ಮಹಿಳೆಯನ್ನು ಹುಲಿಕಟ್ಟೆ ಬಳಿ ಪೊಲೀಸರು ಬಂಧಿಸಿದ್ದರು. ಕುಮಾರ್‌ನನ್ನು ಹಳೇ ಕಡ್ಲೆಬಾಳು ಗ್ರಾಮದ ಬಳಿ ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಡಂಬಲ್‌ನಿಂದ ಹೊಡೆದು ದೆಹಲಿ ಸ್ವಾಟ್ ಕಮಾಂಡೊ ಪತ್ನಿ ಹತ್ಯೆಗೈದ ಪತಿ

