Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ನಾಟಕದ ಶಾಲೆಗಳಿಗೆ ಜಿಯೋದಿಂದ ಭವಿಷ್ಯದ ಎಐ ತರಬೇತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕರ್ನಾಟಕದ ಶಾಲೆಗಳಿಗೆ ಜಿಯೋದಿಂದ ಭವಿಷ್ಯದ ಎಐ ತರಬೇತಿ

Bengaluru City

ಕರ್ನಾಟಕದ ಶಾಲೆಗಳಿಗೆ ಜಿಯೋದಿಂದ ಭವಿಷ್ಯದ ಎಐ ತರಬೇತಿ

Public TV
Last updated: January 28, 2026 6:43 pm
Public TV
Share
3 Min Read
Reliance Jio launches campaign to equip teachers students on AI use in Karnataka
SHARE

ಬೆಂಗಳೂರು: ಸುಧಾರಿತ ಕೃತಕ ಬುದ್ಧಿಮತ್ತೆಯನ್ನು (ಎಐ- ಆರ್ಟಿಫಿಷಿಯಲ್ ಇಂಟೆಲೆಜೆನ್ಸ್) ಎಲ್ಲರಿಗೂ ಲಭ್ಯ ಆಗುವಂತೆ ಮಾಡುವ ತನ್ನ ಬದ್ಧತೆಯನ್ನು ರಿಲಯನ್ಸ್ ಜಿಯೋ (Reliance Jio) ಮತ್ತಷ್ಟು ಬಲಪಡಿಸುತ್ತಿದೆ. ಈ ಉದ್ದೇಶದ್ದೇ ಭಾಗವಾಗಿ ಜಿಯೋ ಕರ್ನಾಟಕದಾದ್ಯಂತ ಸಮಗ್ರ ಎಐ ಶಿಕ್ಷಣ ಅಭಿಯಾನ ಪ್ರಾರಂಭಿಸಿದೆ. ಡಿಜಿಟಲ್ ಒಳಗೊಳ್ಳುವಿಕೆ ಬಲಪಡಿಸುವ ಹಾಗೂ ರಾಜ್ಯದ (Karnataka) ಶಾಲೆ ಮತ್ತು ಕಾಲೇಜುಗಳ ಜೊತೆಗೆ ಸಂಪರ್ಕವನ್ನು ಸಾಧಿಸಿ ‘ಜಿಯೋ ಎಐ ಕ್ಲಾಸ್‌ರೂಮ್’ (Jio AI Classroom) ಉಪಕ್ರಮದ ಮೂಲಕ ಪ್ರಾಯೋಗಿಕ ಎಐ ತರಬೇತಿಯನ್ನು ನೀಡುವ ಗುರಿಯನ್ನು ಹಾಕಿಕೊಂಡಿದೆ.

ಭಾರತದಾದ್ಯಂತ (India) ಇರುವ ಶಾಲೆಗಳು ಎಐ ತಂತ್ರಜ್ಞಾನವನ್ನು ತರಗತಿಯ ಕಲಿಕೆಯಲ್ಲಿ ವೇಗವಾಗಿ ಅಳವಡಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭವಿಷ್ಯಕ್ಕಾಗಿ ಸಿದ್ಧರಾಗುವ ರೀತಿಯಲ್ಲಿ ಶಿಕ್ಷಣದ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆಗೆ ಸಾಕ್ಷಿ ಆಗುತ್ತಿದೆ. ಜಿಯೋ ಎಐ ಕ್ಲಾಸ್‌ರೂಮ್ ಮೂಲಕ ಶಿಕ್ಷಣ ಸಂಸ್ಥೆಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಎಐ ಕೌಶಲಗಳನ್ನು ಒದಗಿಸುತ್ತಿದ್ದು ವಿದ್ಯಾರ್ಥಿಗಳಿಗಾಗಿ ನಿಜವಾದ ‘ಎಐ-ರೆಡಿ’ (AI-Ready) ಶಾಲೆಗಳನ್ನು ಸಜ್ಜುಗೊಳಿಸುತ್ತಿದೆ.

ಈ ಅಭಿಯಾನವು ಆರಂಭಿಕ ಹಂತದಲ್ಲೇ ಭರ್ಜರಿ ಯಶಸ್ಸನ್ನು ಕಂಡಿದ್ದು, ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಶಾಲೆಗಳನ್ನು ತಲುಪಿದೆ. ಜಿಯೋದ ಹಿರಿಯ ಕಾರ್ಯನಿರ್ವಾಹಕರು ನಡೆಸಿಕೊಡುತ್ತಿರುವ ಈ ವಿಶೇಷ ತರಬೇತಿ ಅವಧಿಗಳಿಗಾಗಿ 10,000ಕ್ಕೂ ಹೆಚ್ಚು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಯುವಜನತೆಯ ಕೌಶಲ ಅಭಿವೃದ್ಧಿಗೆ ಪೂರಕವಾಗಿ, ಕಂಪನಿಯು ನಾಲ್ಕು ವಾರಗಳ ಉಚಿತ ಆನ್‌ಲೈನ್ ಸರ್ಟಿಫಿಕೇಷನ್ ಕಾರ್ಯಕ್ರಮವಾದ ‘ಜಿಯೋ ಎಐ ಕ್ಲಾಸ್‌ರೂಮ್’ ಅನ್ನು ಪರಿಚಯಿಸಿದೆ. ಈ ಕಾರ್ಯಕ್ರಮವು ವಿಡಿಯೋ ಉಪನ್ಯಾಸಗಳು, ಪಿಡಿಎಫ್ ಅಧ್ಯಯನ ಸಾಮಗ್ರಿಗಳು, ರೆಫರೆನ್ಸ್ ವಿಡಿಯೊಗಳು ಮತ್ತು ಪ್ರತಿ ಮಾಡ್ಯೂಲ್‌ನ ನಂತರ ಸಂವಾದಾತ್ಮಕ ರಸಪ್ರಶ್ನೆಗಳು ಹಾಗೂ ಅಸೈನ್‌ಮೆಂಟ್‌ಗಳನ್ನು ಒಳಗೊಂಡಿರುವ ನಾಲ್ಕು ಹಂತದ ಸಮಗ್ರ ಪಠ್ಯಕ್ರಮವನ್ನು ನೀಡುತ್ತದೆ. ಇದನ್ನೂ ಓದಿ: ಕೆಲ ವರ್ಷಗಳಲ್ಲಿ ಸೌರಶಕ್ತಿ ಚಾಲಿತ ಎಐ ಉಪಗ್ರಹ ಉಡಾವಣೆ: ಮಸ್ಕ್‌ ಘೋಷಣೆ

JIO AI Class

ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಭಾಗವಹಿಸುವವರಿಗೆ ‘ಕಂಪ್ಲೀಷನ್ ಬ್ಯಾಡ್ಜ್’ ನೀಡಲಾಗುತ್ತದೆ. ಜಿಯೋ ಪಿಸಿ (JioPC) ಮೂಲಕ ಈ ಕಾರ್ಯಕ್ರಮವನ್ನು ಪಡೆಯುವ ಕಲಿಯುವವರು ಜಿಯೋ ಇನ್‌ಸ್ಟಿಟ್ಯೂಟ್ ಪ್ರಮಾಣಪತ್ರವನ್ನು ಸಹ ಪಡೆಯಲಿದ್ದಾರೆ. ಇದು ಅವರ ಎಐ ಪರಿಕಲ್ಪನೆಯ ತಿಳಿವಳಿಕೆ ಮತ್ತು ಅಸೈನ್‌ಮೆಂಟ್‌ಗಳ ಮೂಲಕ ಪಡೆದ ಪ್ರಾಯೋಗಿಕ ಜ್ಞಾನವನ್ನು ದೃಢೀಕರಿಸುತ್ತದೆ. ಈ ವ್ಯವಸ್ಥಿತ ಕೋರ್ಸ್ ಅನ್ನು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಮೂಲಕ ಕಲಿಯುವವರಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಮತ್ತು ಎಐ ತಂತ್ರಜ್ಞಾನಗಳ ಪ್ರಾಯೋಗಿಕ ಅನುಭವ ಪಡೆಯಲು ವಿನ್ಯಾಸ ಮಾಡಲಾಗಿದೆ.

ಈ ಡಿಜಿಟಲ್ ಸಬಲೀಕರಣ ಅಭಿವೃದ್ಧಿಯ ಮುಖ್ಯವಾದ ಅಂಶ ಏನೆಂದರೆ, ಯಾವುದೇ ವೆಚ್ಚವಿಲ್ಲದೆ ಬಳಕೆದಾರರಿಗೆ ಪ್ರೀಮಿಯಂ ತಂತ್ರಜ್ಞಾನವನ್ನು ಒದಗಿಸುವುದು. ಜಿಯೋ ತನ್ನ ಅನ್‌ಲಿಮಿಟೆಡ್ 5ಜಿ ಚಂದಾದಾರರಿಗೆ 35,100 ರೂ. ಮೌಲ್ಯದ 18 ತಿಂಗಳ ‘ಗೂಗಲ್ ಜೆಮಿನಿ ಪ್ರೊ’ (Google Gemini Pro) ಪ್ಲಾನ್ ಅನ್ನು ಉಚಿತವಾಗಿ ನೀಡುತ್ತಿದೆ. ಬಳಕೆದಾರರು ಇದನ್ನು ನೇರವಾಗಿ ಮೈಜಿಯೋ (MyJio) ಆಪ್ ಮೂಲಕ ಸಕ್ರಿಯಗೊಳಿಸಬಹುದು. ಇದು ಅತ್ಯಾಧುನಿಕ ಜೆಮಿನಿ 3 ಪ್ರೊ ಮಾಡೆಲ್ ಮತ್ತು ಉನ್ನತ ಮಟ್ಟದ ಸೃಜನಶೀಲ ಸಾಧನಗಳಿಗೆ ಸಂಪರ್ಕವನ್ನು ನೀಡುತ್ತದೆ. ಇದರಲ್ಲಿ ಎಐ-ಚಾಲಿತ ಚಿತ್ರ ರಚನೆಗಾಗಿ ‘ನ್ಯಾನೋ ಬನಾನಾ ಪ್ರೊ’ (Nano Banana Pro) ಮತ್ತು ಸುಧಾರಿತ ವಿಡಿಯೋ ನಿರ್ಮಾಣಕ್ಕಾಗಿ ‘ವಿಯೋ 3.1’ (Veo 3.1) ಸೇರಿವೆ. ಈ ಪ್ಲಾನ್ ಶೈಕ್ಷಣಿಕ ಸಂಶೋಧನಾ ಸಾಧನವಾದ ‘ನೋಟ್‌ಬುಕ್ ಎಲ್‌ಎಂ’ (NotebookLM) ಅನ್ನು ಸಹ ಒಳಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅವರ ಡಿಜಿಟಲ್ ಪೋರ್ಟ್‌ಫೋಲಿಯೊಗಳು ಮತ್ತು ಸಂಶೋಧನಾ ಡೇಟಾಗಳನ್ನು ಸಂಗ್ರಹಿಸಲು 2 ಟಿಬಿ ಕ್ಲೌಡ್ ಸ್ಟೋರೇಜ್ ಅನ್ನು ಸಹ ಒದಗಿಸುತ್ತದೆ.

ತನ್ನ ಎಐ ಕ್ಲಾಸ್‌ರೂಮ್ ಉಪಕ್ರಮದ ಭಾಗವಾಗಿ, ಜಿಯೋ ಪಿಸಿಯು ‘ಜಿಯೋ ಪಿಸಿ ಎಐ ಕ್ಲಾಸ್‌ರೂಮ್ ಸ್ಕಾಲರ್‌ಶಿಪ್’ ಅನ್ನು ಸಹ ಘೋಷಿಸಿದೆ. ಎಐ ಫೌಂಡೇಷನ್ ಕೋರ್ಸ್ ಪೂರ್ಣಗೊಳಿಸಿದ ಕಲಿಕಾರ್ಥಿಗಳಿಗೆ ಜಿಯೋ ಪಿಸಿ ಖರೀದಿಸಲು ಈ ವಿದ್ಯಾರ್ಥಿವೇತನವು ಸಹಾಯ ಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳು ದುಬಾರಿ ಕಂಪ್ಯೂಟರ್‌ಗಳನ್ನು ಖರೀದಿಸುವ ಅನಿವಾರ್ಯ ಇಲ್ಲದೆ ಎಐ ಪ್ರಾಜೆಕ್ಟ್‌ಗಳು ಮತ್ತು ಪ್ರಾಯೋಗಿಕ ಪ್ರಯೋಗಗಳನ್ನು ನಡೆಸಲು ಸಾಧ್ಯವಾಗುತ್ತದೆ.

ಕರ್ನಾಟಕದ ವಿದ್ಯಾರ್ಥಿಗಳು www.jio.com/ai-classroom ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಅಗತ್ಯವಾದ ಮೂಲಭೂತ ಜ್ಞಾನವನ್ನು ಪಡೆಯಬಹುದು. ಇದು ಪ್ರಾದೇಶಿಕ ಉದ್ಯೋಗಿಗಳು ತಾಂತ್ರಿಕ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿ ಇರುವುದನ್ನು ಖಚಿತಪಡಿಸುತ್ತದೆ.

TAGGED:class roomeducationjiotechಕರ್ನಾಟಕಕ್ಲಾಸ್ ರೂಂಜಿಯೋಟೆಕ್ಶಿಕ್ಷಣ
Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ತುಳುನಾಡಿನ ದೈವಕ್ಕೆ ʻಹೆಣ್ಣು ದೆವ್ವʼ ಅಂತ ಅಪಮಾನ – ರಣವೀರ್ ಸಿಂಗ್‌ ವಿರುದ್ಧ FIR
Bengaluru City Cinema Crime Latest Main Post
Suri Anna 2
ಹರೀಶ್ ರಾಯ್ ನಟಿಸಿದ ಕೊನೆ ಚಿತ್ರ ಸೂರಿ ಅಣ್ಣ ಟ್ರೈಲರ್ ಬಿಡುಗಡೆ
Cinema Latest Main Post Sandalwood
Arijith Singh
ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿದ ಅರಿಜಿತ್ ಸಿಂಗ್
Bollywood Cinema Latest Main Post
kavya gowda
ನಟಿ ಕಾವ್ಯ ಗೌಡ, ಪತಿ ಮೇಲೆ ಹಲ್ಲೆ ಆರೋಪ; ದೂರು ದಾಖಲು
Cinema Latest Main Post Sandalwood

You Might Also Like

KN RAJANNA
Bengaluru City

ಅಪೆಕ್ಸ್‌ ಬ್ಯಾಂಕ್‌ ಚುನಾವಣಾ ಸಭೆ; ಸಿಎಂ ಎದುರೇ ಕೆ.ಎನ್‌ ರಾಜಣ್ಣ – ಸಚಿವ ಸುಧಾಕರ್ ನಡ್ವೆ ಜಟಾಪಟಿ

Public TV
By Public TV
6 minutes ago
TRAIN
Bengaluru City

ಶಿವರಾತ್ರಿ ಪ್ರಯುಕ್ತ ಬೆಂಗಳೂರು – ವಿಜಯಪುರ ನಡುವೆ ವಿಶೇಷ ರೈಲು

Public TV
By Public TV
17 minutes ago
IND vs NZ 3
Cricket

ದುಬೆ ಬೆಂಕಿ ಬ್ಯಾಟಿಂಗ್‌ ವ್ಯರ್ಥ – ಸರಣಿಯಲ್ಲಿ ಮೊದಲ ಗೆಲುವು; ಕಿವೀಸ್‌ಗೆ 50 ರನ್‌ಗಳ ಜಯ

Public TV
By Public TV
38 minutes ago
Rock Climbing
Districts

ರಾಕ್ ಕ್ಲೈಂಬಿಂಗ್ ಕ್ರೀಡೆಗೆ ಆನೆಗೊಂದಿ ಫೇಮಸ್

Public TV
By Public TV
1 hour ago
Droupadi Murmu 1
Latest

ವಿಬಿ-ಜಿ ರಾಮ್ ಜಿ ಕಾನೂನು ಮೂಲಕ ಗ್ರಾಮೀಣ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ: ರಾಷ್ಟ್ರಪತಿ ಮುರ್ಮು ಶ್ಲಾಘನೆ

Public TV
By Public TV
2 hours ago
Kavital Police Station
Crime

ಕೌಟುಂಬಿಕ ಕಲಹಕ್ಕೆ ಗರ್ಭಿಣಿ ಸೊಸೆಯನ್ನ ಕೊಂದ ಮಾವ – ಆರೋಪಿ ಅರೆಸ್ಟ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?