ನವದೆಹಲಿ: ಯಾವುದೇ ತಾರತಮ್ಯ ಮಾಡಲ್ಲ, ಯಾರು ಕಾನೂನು ದುರುಪಯೋಗಪಡಿಸಲು ಸಾಧ್ಯವಿಲ್ಲ ಎಂದು ಯುಜಿಸಿ ಹೊಸ ನಿಯಮಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಸ್ಪಷ್ಟನೆ ನೀಡಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು, ಯುಜಿಸಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೊಸ ನಿಯಮಗಳನ್ನು ತಂದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತು ಮಾತನಾಡಿದ ಅವರು, ಹೊಸ ನಿಯಮ ಜಾರಿಯಾದರೂ, ಯಾರಿಗೂ ತಾರತಮ್ಯವಾಗಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಕಾನೂನು ದುರುಪಯೋಗ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ದಾಖಲೆಯ 6.76 ಕೋಟಿ ಅಭ್ಯರ್ಥಿಗಳು ನೋಂದಣಿ
ಜಾತಿ ನಿಂದನೆಯಾಗದಂತೆ ಯುಜಿಸಿ ಕಠಿಣ ನಿಯಮಗಳನ್ನ ತಂದಿದ್ದು, ಈ ಹೊಸ ನಿಯಮಗಳ ಪ್ರಕಾರ, ಕ್ಯಾಂಪಸ್‌ಗಳಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಒಬಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ, ಹೊಸ ನಿಯಮ ಜಾರಿಗೆ ತರಲಾಗಿದೆ.

