ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಪ್ರತಿವರ್ಷ ನಡೆಸುವ ಪರೀಕ್ಷಾ ಪೆ ಚರ್ಚಾ (Pariksha Pe Charcha) ಕಾರ್ಯಕ್ರಮದಲ್ಲಿ ಭಾಗಿಯಾಗಲು 6.76 ಕೋಟಿ ಅಭ್ಯರ್ಥಿಗಳು ನೋಂದಣಿ ಮಾಡಿ, ದಾಖಲೆ ನಿರ್ಮಿಸಿದ್ದಾರೆ.
2026ರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರೋಬ್ಬರಿ 6 ಕೋಟಿ 76 ಲಕ್ಷ ಅಭ್ಯರ್ಥಿಗಳು ತಮ್ಮ ಹೆಸರನ್ನ ನೊಂದಾಯಿಸಿದ್ದಾರೆ. ದೇಶದ ವಿವಿಧ ಪ್ರದೇಶಗ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತಿದ್ದ ಪ್ರಧಾನಿ ಮೋದಿ, ಪರೀಕ್ಷೆ ವಿಚಾರದಲ್ಲಿ ಅವರಿಗೆ ಮಾರ್ಗದರ್ಶನ ಹಾಗೂ ಪ್ರೇರಣಾದಾಯಕ ಮಾತುಗಳನ್ನ ಹೇಳುತ್ತಿದ್ದರು. ಇದನ್ನೂ ಓದಿ: ರಾಹುಲ್ ಹೇಡಿ, ಅಂಜುಬುರುಕ ಎಂದ ಮುಸ್ಲಿಂ ಕೈ ನಾಯಕನಿಗೆ ಈಗ ಬೆದರಿಕೆ ಕರೆ
2026ರ ಪರೀಕ್ಷಾ ಪೆ ಚರ್ಚಾ ಈಗ ಪ್ಯಾನ್ ಇಂಡಿಯಾ ಮಟ್ಟದ ಚರ್ಚಾ ವೇದಿಕೆಯಾಗಿ ಮಾರ್ಪಟ್ಟಿದೆ. ಇದು ಹೊಸ ಗಿನ್ನಿಸ್ ದಾಖಲೆಯನ್ನೇ ಬರೆದಿದೆ. 2026ರ ಪರೀಕ್ಷಾ ಪೆ ಚರ್ಚಾ ವಿಶ್ವದಲ್ಲಿಯೇ ಅತಿದೊಡ್ಡ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆಯಲಿದೆ. ಮುಖ್ಯ ಕಾರ್ಯಕ್ರಮ ಈಗಾಗಲೇ ನಡೆದಿದ್ದು, ರೆಕಾರ್ಡ್ ಕೂಡ ಮಾಡಲಾಗಿದೆ. ಸದ್ಯದಲ್ಲಿಯೇ ವಿವಿಧ ಪ್ಲಾಟ್‌ಫಾರ್ಮ್ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

