ನವದೆಹಲಿ: ‘ಮದರ್ ಆಫ್ ಆಲ್ ಡೀಲ್ಸ್’ ಎಂದೇ ಕರೆಯಲ್ಪಡುವ ಭಾರತ-ಯುರೋಪ್ ಒಕ್ಕೂಟವು (EU) ಮುಕ್ತ ವ್ಯಾಪಾರ (Trade Deal) ಒಪ್ಪಂದಕ್ಕೆ ಮಂಗಳವಾರ ಅಧಿಕೃತವಾಗಿ ಸಹಿ ಹಾಕಿವೆ.
ಅಂತರರಾಷ್ಟ್ರೀಯ ಗಮನವನ್ನು ಸೆಳೆಯುತ್ತಿರುವ ಈ ಒಪ್ಪಂದ ಎರಡು ಶತಕೋಟಿ ಜನರ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಜಾಗತಿಕ GDP (GDP) ಒಟ್ಟು ದೇಶೀಯ ಉತ್ಪನ್ನದ ಸುಮಾರು ಕಾಲು ಭಾಗದಷ್ಟು ಪಾಲನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಭಾರತ-ಯುರೋಪ್ ಒಕ್ಕೂಟ ಒಪ್ಪಂದದಿಂದ ಉತ್ಪಾದನೆ, ಬೆಂಬಲ ಸೇವಾ ವಲಯಕ್ಕೆ ಉತ್ತೇಜನ: ಮೋದಿ ಬಣ್ಣನೆ
ಈ ವ್ಯಾಪಾರ ಒಪ್ಪಂದವು ಭಾರತಕ್ಕೆ ಪ್ರವೇಶಿಸುವ ಯುರೋಪಿಯನ್ ಒಕ್ಕೂಟದ ರಫ್ತಿನ ಸುಮಾರು ಶೇ. 97 ರಷ್ಟು ಮೇಲಿನ ಸುಂಕವನ್ನು ಕಡಿತಗೊಳಿಸುತ್ತದೆ. ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೃಢಪಡಿಸಿದ್ದಾರೆ. ಈ ಬೆಳವಣಿಗೆಯು ಅಮೆರಿಕವನ್ನು ಕೆರಳಿಸಿದಂತೆ ಕಂಡುಬಂದಿದೆ.

ಇದು ಯುರೋಪಿಯನ್ ಒಕ್ಕೂಟ ಮತ್ತು ಭಾರತ ಎರಡೂ ಇದುವರೆಗೆ ಮಾಡಿಕೊಂಡಿರುವ ಅತಿದೊಡ್ಡ ವ್ಯಾಪಾರ ಒಪ್ಪಂದವಾಗಿದೆ. 2022ರ ಜೂನ್‌ನಲ್ಲಿ ಒಪ್ಪಂದದ ಮಾತುಕತೆ ನಡೆಸಲಾಗಿತ್ತು. ಸುಮಾರು ಒಂಬತ್ತು ವರ್ಷಗಳ ವಿರಾಮದ ನಂತರ ಮಾತುಕತೆ ಪುನರಾರಂಭಗೊಂಡು ಇಂದು ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಭಾರತ-EU ವ್ಯಾಪಾರ ಒಪ್ಪಂದದೊಂದಿಗೆ ಯುರೋಪ್ ತನ್ನ ವಿರುದ್ಧವೇ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ: ಅಮೆರಿಕ
2023-24ರಲ್ಲಿ 135 ಶತಕೋಟಿ ಡಾಲರ್ ಮೌಲ್ಯದ ಸರಕುಗಳ ವ್ಯಾಪಾರದೊಂದಿಗೆ EU (ಯುರೋಪ್ ಒಕ್ಕೂಟ) ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳಿಂದ ಉಂಟಾದ ವ್ಯಾಪಾರ ಅಡಚಣೆಗಳ ನಡುವೆ ದೇಶಗಳು ಅಪಾಯಗಳನ್ನು ಕಡಿಮೆ ಮಾಡುವತ್ತ ಗಮನಹರಿಸಿವೆ. FTA ಭಾರತ ಮತ್ತು EU ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

