ನವದೆಹಲಿ: ಭಾರತ (Indi) ಮತ್ತು ಯುರೋಪ್ (Europe) ಮಧ್ಯೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Deal) ಸಹಿ ಬಿದ್ದಿದೆ. ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತವು ತನ್ನ ಜಾಗತಿಕ ವ್ಯಾಪಾರ ಒಪ್ಪಂದಗಳಲ್ಲಿ ವ್ಯೂಹಾತ್ಮಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಎಲ್ಲಾ ಒಪ್ಪಂದಗಳ ತಾಯಿ (Mother of all deals) ಎಂದು ಕರೆಯಲ್ಪಡುವ ಈ ಒಪ್ಪಂದಿಂದಾಗಿ ಭಾರತದ ರಾಜ್ಯಗಳಿಗೆ ಸಹಾಯವಾಗಲಿದೆ.
ಮುಖ್ಯವಾಗಿ ಕರ್ನಾಟಕದ (Karnataka) ಯರೋಪಿಗೆ ರಫ್ತಾಗುವ ಎಂಜಿನಿಯರಿಂಗ್ ಗೂಡ್ಸ್, ಎಲೆಕ್ಟ್ರಾನಿಕ್ಸ್, ಫಾರ್ಮಾಸ್ಯುಟಿಕಲ್ಸ್ ಮೆಡಿಕಲ್ ಡಿವೈಸ್‌ಗಳು, ಕೆಮಿಕಲ್ಸ್, ಟೆಕ್ಸ್‌ಟೈಲ್ಸ್ ಮತ್ತು ಅಪಾರೆಲ್ಸ್ ಬೆಲೆ ಇಳಿಕೆಯಾಗಲಿದೆ ಮತ್ತು ರಫ್ತು ಹೆಚ್ಚಾಗಲಿದೆ. ಇದನ್ನೂ ಓದಿ: ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ
ಒಂದು ವ್ಯಾಪಾರ ಒಪ್ಪಂದಿಂದ 27 ಯರೋಪಿಯನ್ ದೇಶಗಳ ಮಾರುಕಟ್ಟೆ ರಾಜ್ಯಗಳು ಉತ್ಪನ್ನಗಳು ರಫ್ತಾಗಲಿದೆ. ಒಟ್ಟು 6.4 ಲಕ್ಷ ಕೋಟಿ ರೂ.ಗಳ ಬೃಹತ್ ಉತ್ತೇಜನ ರಾಜ್ಯಗಳಿಗೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದನ್ನೂ ಓದಿ: ಭಾರತ-ಯುರೋಪ್ ಒಕ್ಕೂಟ ಒಪ್ಪಂದದಿಂದ ಉತ್ಪಾದನೆ, ಬೆಂಬಲ ಸೇವಾ ವಲಯಕ್ಕೆ ಉತ್ತೇಜನ: ಮೋದಿ ಬಣ್ಣನೆ
ಯಾವ ಉದ್ಯಮಗಳಿಗೆ ಸಹಕಾರಿ?
ಜವಳಿ ಮತ್ತು ಉಡುಪುಗಳು, ಎಂಜಿನಿಯರಿಂಗ್ ಸರಕುಗಳು, ಔಷಧಗಳು ವೈದ್ಯಕೀಯ ಸಾಧನಗಳು, ಎಲೆಕ್ಟ್ರಾನಿಕ್ಸ್, ರತ್ನಗಳು ಮತ್ತು ಆಭರಣಗಳು, ರಾಸಾಯನಿಕಗಳು, ಸಾಗರ ಉತ್ಪನ್ನಗಳು, ಚರ್ಮ ಮತ್ತು ಪಾದರಕ್ಷೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್, ಚಹಾ ಮಸಾಲೆಗಳು, ಪೀಠೋಪಕರಣಗಳು, ಕರಕುಶಲ ವಸ್ತುಗಳು, ಖನಿಜಗಳು, ಕ್ರೀಡಾ ಸಾಮಗ್ರಿಗಳು, ಕೃಷಿ ಉತ್ಪನ್ನ ಉದ್ಯಮಗಳಿಗೆ ಸಹಕಾರಿಯಾಗಲಿದೆ.


