ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸೇವೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಹತಾಶರಾದ ಆಟೋ ಸಂಘಟನೆಗಳು (Auto Organizations) ಸುಪ್ರೀಂ (Supreme Court) ಕದ ತಟ್ಟಲು ಮುಂದಾಗಿದ್ದಾರೆ.
ಕರ್ನಾಟಕ ಹೈಕೋರ್ಟ್ ಬೈಕ್‌ಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಬೈಕ್ ಟ್ಯಾಕ್ಸಿ ನಿಷೇಧಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿ, ಏಕಸದಸ್ಯ ಪೀಠದ ಆದೇಶವನ್ನು ವಜಾಗೊಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಹಸಿರು ನಿಶಾನೆ ದೊರೆತಿದೆ. ಇದನ್ನೂ ಓದಿ: ಆಸ್ತಿಗಾಗಿ ತಾಯಿ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪಾಪಿ ಮಗ
ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಕೋರ್ಟ್‌ನಲ್ಲಿ ಈ ಆದೇಶ ಬಂದಿದೆ ಅಂತ ಆಟೋ ಚಾಲಕರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಇದೀಗ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಬಾರದೆಂದು ಸುಪ್ರೀಂ ಕೋರ್ಟ್ ಕದ ತಟ್ಟಲು ಸಂಘಟನೆಗಳು ಮುಂದಾಗಿವೆ. ಇದನ್ನೂ ಓದಿ: ಕಾಜಿರಂಗದಲ್ಲಿ ಪ್ರಾಣಿಗಳ ಮಾರಣಹೋಮ ತಡೆಯಬಲ್ಲದೇ ʻಎಲಿವೇಟೆಡ್ ಕಾರಿಡಾರ್ʼ? 30 ವರ್ಷಗಳ ಹೋರಾಟಕ್ಕೆ ಸಿಗುವುದೇ ಜಯ?
ಕಾನೂನು ತಜ್ಞರ ಸಲಹೆ ಪಡೆದು, ಸುಪ್ರೀಂ ಕೋರ್ಟ್ ಕದ ತಟ್ಟಲು ಚಿಂತನೆ ಮಾಡಲಾಗುತ್ತಿದೆ. ಮತ್ತೊಂದೆಡೆ ಸಾರಿಗೆ ಇಲಾಖೆಯ ಮೂಲಕವೇ ಸುಪ್ರೀಂಗೆ ಅರ್ಜಿ ಹಾಕಬೇಕೆಂದು ಆಟೋ ಚಾಲಕರು ಒತ್ತಾಯಿಸುತ್ತಿದ್ದಾರೆ. ಸಾರಿಗೆ ಇಲಾಖೆ, ಸರ್ಕಾರದ ಗಮನ ಸೆಳೆಯಲು ಆಟೋ ಚಾಲಕರು ಸಾರಿಗೆ ಇಲಾಖೆಯ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕೋದಕ್ಕೂ ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ಕೊನೆಯಲ್ಲಿ ರೊಚ್ಚಿಗೆದ್ದ ರಿಚಾ, ಹೋರಾಡಿ ಸೋತ ಆರ್‌ಸಿಬಿ – ಮುಂಬೈಗೆ 15 ರನ್ ಜಯ
ಈ ಹಿಂದೆ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿ 2025ರ ನವೆಂಬರ್ 26ರಂದು ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಮತ್ತು ಕಾನೂನು ಬಾಹಿರ ಎಂದು ವರದಿ ನೀಡಿತ್ತು. ಈ ಬಗ್ಗೆ ಓಲಾ, ಊಬರ್ ಸೇರಿ ಹಲವು ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಆದರೆ ಇದೀಗ ಹೈಕೋರ್ಟ್ ಬೈಕ್ ಟ್ಯಾಕ್ಸಿ ಸಂಸ್ಥೆಗಳ ಮೇಲ್ಮನವಿಯನ್ನು ಪುರಸ್ಕರಿಸಿದೆ. ಅವುಗಳ ಸೇವೆ ಪುನರಾರಂಭಕ್ಕೆ ಅವಕಾಶ ಕಲ್ಪಿಸಿದೆ. ಈ ತೀರ್ಪಿನಿಂದಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಅಧಿಕೃತವಾಗಿ ಮುಂದುವರೆಯಲಿದೆ. ಈ ಆದೇಶ ಆಟೋ ಚಾಲಕರಿಗೆ ಅಸಮಾಧಾನ ತಂದಿದೆ. ಇದನ್ನೂ ಓದಿ: ಮೋದಿ ಜೊತೆ ಮಾತುಕತೆ ನಡೆದ ಕೆಲ ದಿನಗಳಲ್ಲೇ ಪಾಕ್ ವಿಮಾನ ನಿಲ್ದಾಣ ನಿರ್ವಹಣೆಯಿಂದ ಹಿಂದೆ ಸರಿದ ಯುಎಇ

