ವಡೋದರಾ: ಆಲ್‌ರೌಂಡರ್ ಸಿವರ್ ಬ್ರಂಟ್ (Nat Sciver-Brunt) ಅವರ ಸ್ಫೋಟಕ ಶತಕದ ನೆರವಿನಿಂದ ಆರ್‌ಸಿಬಿ (RCB) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) 15 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಮುಂಬೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಗೆಲ್ಲಲೇಬೇಕಾದ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಎಂಐ 4 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತ್ತು. ಕಠಿಣ ಸವಾಲನ್ನು ಬೆನ್ನಟ್ಟಿದ ಆರ್‌ಸಿಬಿ ರಿಚಾ ಘೋಷ್ (Richa Ghosh) ಅವರ ಸ್ಫೋಟಕ ಅರ್ಧಶತಕದ ಏಕಾಂಗಿ ಹೋರಾಟದಿಂದ 9 ವಿಕೆಟ್ ನಷ್ಟಕ್ಕೆ 184 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಆರ್‌ಸಿಬಿ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಾಗಲೇ ಸೋಲು ಖಚಿತವಾಗಿತ್ತು. ಹೀಗಿದ್ದರೂ ರಿಚಾ ಘೋಷ್ ಮತ್ತು ನಾಡಿನ್ ಡಿ ಕ್ಲರ್ಕ್ 36 ಎಸೆತಗಳಲ್ಲಿ 42 ರನ್ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ನಾಡಿನ್ ಡಿ ಕ್ಲರ್ಕ್ 28 ರನ್(20 ಎಸೆತ, 3 ಬೌಂಡರಿ, 1 ಸಿಕ್ಸ್) ಹೊಡೆದರೆ ಅರುಂಧತಿ ರೆಡ್ಡಿ 14 ರನ್ ಗಳಿಸಿ ಔಟಾದರು.
A hat-trick of fours 🔥
Richa Ghosh leading #RCB‘s fight in Vadodara 💪
Updates ▶️ https://t.co/yUHXkzVIZw #TATAWPL | #KhelEmotionKa | #RCBvMI | @RCBTweets pic.twitter.com/pyfGuIv6dL
— Women’s Premier League (WPL) (@wplt20) January 26, 2026
ಅರುಂಧತಿ ರೆಡ್ಡಿ ಎಸೆದ 19ನೇ ಓವರ್‌ನಲ್ಲಿ ರಿಚಾಘೋಷ್ ಹ್ಯಾಟ್ರಿಕ್ ಸಿಕ್ಸ್ ಮತ್ತು ಒಂಟಿ ರನ್ ಬಳಿಕ ಶ್ರೇಯಾಂಕ ಪಾಟೀಲ್ 2 ಬೌಂಡರಿ ಸಿಡಿಸಿ ಒಂದೇ ಓವರ್‌ನಲ್ಲಿ 27 ರನ್ ಬಂದಾಗ ಪಂದ್ಯಕ್ಕೆ ರೋಚಕ ತಿರುವು ಸಿಕ್ಕಿತು.
ಅಮೆಲಿಯಾ ಕೆರ್ ಎಸೆದ ಕೊನೆಯ ಓವರ್‌ನಲ್ಲಿ ಬೌಂಡರಿ, ಮೂರನೇ ಮತ್ತು ನಾಲ್ಕನೇ ಎಸೆತದಲ್ಲಿ ರಿಚಾ ಘೋಷ್ ಸಿಕ್ಸ್ ಸಿಡಿಸಿದ ಪರಿಣಾಮ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಆದರೆ ಕೊನೆಯ ಎಸೆತದಲ್ಲಿ ರಿಚಾ ಘೋಷ್ ಕ್ಯಾಚ್ ನೀಡಿ ಔಟಾದರು. ರಿಚಾ ಘೋಷ್ ಮತ್ತು ಶ್ರೇಯಾಂಕ ಪಾಟೀಲ್ 18 ಎಸೆತಗಳಲ್ಲಿ 55 ರನ್ ಜೊತೆಯಾಟವಾಡುವ ಮೂಲಕ ಆರ್‌ಸಿಬಿ ನೆಟ್ ರನ್ ರೇಟ್ ಕಾಪಾಡುವಲ್ಲಿ ಯಶಸ್ವಿಯಾದರು.
ರಿಚಾ ಘೋಷ್ 90 ರನ್(50 ಎಸೆತ, 10 ಬೌಂಡರಿ, 6 ಸಿಕ್ಸ್) ಶ್ರೇಯಾಂಕ ಪಾಟೀಲ್ ಔಟಾಗದೇ 12 ರನ್ (5 ಎಸೆತ, 3 ಬೌಂಡರಿ) ಹೊಡೆದರು. ಮುಂಬೈ ಪರ ಹೀಲಿ ಮ್ಯಾಥ್ಯೂಸ್ 3 ವಿಕೆಟ್ ಕಿತ್ತರೆ ಶಬ್ನಿಮ್ ಇಸ್ಮಾಯಿಲ್, ಅಮೆಲಿಯಾ ಕೆರ್ ತಲಾ 2 ವಿಕೆಟ್ ಕಿತ್ತರು. ಇದನ್ನೂ ಓದಿ: ಐಸಿಸಿ ಚಾಟಿಗೆ ಮಂಡಿಯೂರಿದ ಪಾಕ್ – ಟಿ20 ವಿಶ್ವಕಪ್‌ಗೆ ತಂಡ ಪ್ರಕಟ; ಬಾಬರ್ ಆಜಂ ಬ್ಯಾಕ್
6⃣, 6⃣, 6⃣ 💥
Richa Ghosh displayed her power with a brutal knock of 9⃣0⃣(50) 👏👏
Updates ▶️ https://t.co/yUHXkzVIZw #TATAWPL | #KhelEmotionKa | #RCBvMI | @RCBTweets pic.twitter.com/khKXH3sup9
— Women’s Premier League (WPL) (@wplt20) January 26, 2026
ಚೊಚ್ಚಲ ಶತಕ: ಡಬ್ಲ್ಯೂಪಿಎಲ್ (WPL) ಕ್ರಿಕೆಟ್ ಲೀಗ್‌ನಲ್ಲಿ ಚೊಚ್ಚಲ ಶತಕ ದಾಖಲಾಗಿದೆ. ಇಂಗ್ಲೆಂಡ್ ತಂಡದ ನಾಯಕಿ, ಮುಂಬೈ ಇಂಡಿಯನ್ಸ್ (MI) ಆಲ್‌ರೌಂಡರ್ ಸಿವರ್ ಬ್ರಂಟ್ (Nat Sciver-Brunt) ಡಬ್ಲ್ಯೂಪಿಎಲ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಅಜೇಯ 100 ರನ್ (57 ಎಸೆತ, 16 ಬೌಂಡರಿ, 1 ಸಿಕ್ಸ್) ಹೊಡೆಯುವ ಮೂಲಕ ಸಿವರ್ ಬ್ರಂಟ್ ದಾಖಲೆ ಬರೆದಿದ್ದಾರೆ. ಮೂರನೇ ಓವರಿನಲ್ಲಿ ಕ್ರೀಸಿಗೆ ಆಗಮಿಸಿದ ಸಿವರ್ ಬ್ರಂಟ್ ಕೊನೆಯ ಓವರ್‌ನಲ್ಲಿ ಶತಕ ಹೊಡೆದರು.
The moment 📸
The ball 💯
The celebration 🥳
Natalie Sciver-Brunt, forever etched in the history books 🫡
Updates ▶️ https://t.co/yUHXkzVIZw #TATAWPL | #KhelEmotionKa | #RCBvMI | @mipaltan pic.twitter.com/i2xECl5jyB
— Women’s Premier League (WPL) (@wplt20) January 26, 2026
ಗೆಲ್ಲಲೇ ಬೇಕಾದ ಇಂದಿನ ಪಂದ್ಯದಲ್ಲಿ 32 ಎಸೆತಗಳಲ್ಲಿ ಫಿಫ್ಟಿ ಹೊಡೆದ ಬ್ರಂಟ್ ನಂತರ 25 ಎಸೆತಗಳಲ್ಲಿ 50 ರನ್ ಹೊಡೆದರು. ಎರಡನೇ ವಿಕೆಟಿಗೆ ಹೇಲಿ ಮ್ಯಾಥ್ಯೂಸ್ ಜೊತೆ 73 ಎಸೆತಗಳಲ್ಲಿ 131 ರನ್ ಜೊತೆಯಾಟವಾಡಿದ ಬ್ರಂಟ್ ನಾಲ್ಕನೇ ವಿಕೆಟಿಗೆ ನಾಯಕಿ ಹರ್ಮನ್ ಪ್ರೀತ್ ಕೌರ್ ಜೊತೆ 25 ಎಸೆತಗಳಲ್ಲಿ 42 ರನ್ ಜೊತೆಯಾಟವಾಡಿದರು. ಹೇಲಿ ಮ್ಯಾಥ್ಯೂಸ್ 56 ರನ್(39 ಎಸೆತ, 9 ಬೌಂಡರಿ), ಪದ್ಮಶ್ರೀ ವಿಜೇತೆ ಹರ್ಮನ್ ಪ್ರೀತ್ ಕೌರ್ 20 ರನ್(12 ಎಸೆತ, 2 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರು.

