ಕಾರವಾರ: ಸಮುದ್ರದಲ್ಲಿ ಮುಳುಗುತಿದ್ದ ಮೂರುಜನ ಪ್ರವಾಸಿಗರನ್ನು (Tourists) ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumata) ತಾಲೂಕಿನ ಗೋಕರ್ಣದ ಮೇನ್ ಬೀಚ್‌ನಲ್ಲಿ ನಡೆದಿದೆ.
ಚಿತ್ರದುರ್ಗ (Chitradurga) ಜಿಲ್ಲೆಯ ಮನು (23), ಶಿವು (36), ಕಿರಣ್ (26) ರಕ್ಷಣೆಗೆ ಒಳಗಾದ ಪ್ರವಾಸಿಗರು. ಚಿತ್ರದುರ್ಗದಿಂದ ಗೋಕರ್ಣಕ್ಕೆ 21 ಜನ ಪ್ರವಾಸಕ್ಕೆ ಬಂದಿದ್ದರು. ಲೈಫ್ ಗಾರ್ಡ್ ಎಚ್ಚರಿಕೆ ನಡುವೆಯೇ ಸಮುದ್ರಕ್ಕಿಳಿದಿದ್ದ ಆರು ಜನ ಪ್ರವಾಸಿಗರಲ್ಲಿ ಅಲೆಗಳ ಅಬ್ಬರಕ್ಕೆ ಮೂರು ಜನ ಕೊಚ್ಚಿಹೋಗಿದ್ದರು. ಇದನ್ನು ಗಮನಿಸಿದ ಲೈಫ್ ಗಾರ್ಡ್ಗಳಾದ ಲೋಕೇಶ್ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ, ಮೋಹನ ಅಂಬಿಗ ಎಂಬವರು ಮೂರು ಜನರನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ
ಇವರಿಗೆ ಬೀಚ್ ಸೂಪರ್ವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ದೀಪಕ್ ಗೌಡ ಸಹಾಯ ಮಾಡಿದ್ದು ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಕೇಂದ್ರದ ವಿರುದ್ಧ ಸಮರ ಸಾರಿದ ಕಾಂಗ್ರೆಸ್ – ಮನರೇಗಾ ರದ್ದು ಖಂಡಿಸಿ ನಾಳೆ ರಾಜಭವನ ಚಲೋ

