ನವದೆಹಲಿ: 77ನೇ ಗಣರಾಜ್ಯೋತ್ಸವದ (Republic Day) ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಸೇನೆಯ ಶಕ್ತಿ ಪ್ರದರ್ಶನಗೊಳ್ಳುತ್ತಿದೆ. ಈ ಆಕರ್ಷಕ ಮೆರವಣಿಗೆಯಲ್ಲಿ ಸೇನೆಯ ಶಕ್ತಿಯುತ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆದಿದೆ. ಜೊತೆಗೆ ಆಪರೇಷನ್ ಸಿಂಧೂರ್ ಟ್ಯಾಬ್ಲೋ ಪ್ರದರ್ಶನ ನಡೆದಿದೆ. ಇದೇ ಮೊದಲ ಬಾರಿಗೆ ಸೇನೆಯ ಡ್ರೋನ್‌ಗಳು (Drone) ಸಹ ಕಾಣಿಸಿಕೊಂಡಿವೆ.

ಗರುಡಾ ಫಾರ್ಮೆಷನ್‌ನಲ್ಲಿ ಅಪಾಚೆ, ಧ್ರುವ ಹೆಲಿಕಾಪ್ಟರ್, T-90 ಭೀಷ್ಮ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಶಕ್ತಿಬಾನ್ (Shaktibaan) ಮತ್ತು ದಿವ್ಯಾಸ್ತ್ರ, ಧನುಷ್ ಮತ್ತು ಅಮೋಘ್ ಸಿಸ್ಟಮ್, ಸೂರ್ಯಾಸ್ತ್ರ ರಾಕೇಟ್ ಲಾಂಚರ್ , ಬ್ರಮ್ಮೋಸ್ ಸೂಪರ್ ಸಾನಿಕ್ ಮಿಷಲ್ ವೆಪನ್ ಸಿಸ್ಟಮ್, ಆಕಾಶ್ ಮತ್ತು ಅಭರ ಮಧ್ಯಮ ರೇಜ್ ಮಿಸೈಲ್, ಡ್ರೋನ್ ಶಕ್ತಿ ಪ್ರದರ್ಶನ ನಡೆದಿದೆ. ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ – ಪರೇಡ್‌ನಲ್ಲಿಂದು ಪಾಕ್ ಹುಟ್ಟಡಗಿಸಿದ S-400 ವಾಯು ರಕ್ಷಣಾ ವ್ಯವಸ್ಥೆ ಪ್ರದರ್ಶನ
ವಂದೇ ಮಾತರಂನ 150 ವರ್ಷಗಳು ಪೂರೈಸಿದ ವಿಷಯ, ದೇಶದ ಅಭಿವೃದ್ಧಿ, ಸಾಂಸ್ಕೃತಿಕ ವೈವಿಧ್ಯತೆಯ ಸ್ತಬ್ಧಚಿತ್ರಗಳ ಪ್ರದರ್ಶನ ಸಹ ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಯುರೋಪಿಯನ್ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಭಾಗವಹಿಸಿದ್ದಾರೆ. ಇದನ್ನೂ ಓದಿ: ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಮೋದಿ ಗೌರವ; ರಾಷ್ಟ್ರಪತಿಗಳಿಂದ ಧ್ವಜಾರೋಹಣ

