ನವದೆಹಲಿ: 77ನೇ ಗಣರಾಜ್ಯೋತ್ಸವದ ಸ್ಮರಣಾರ್ಥವಾಗಿ ಗೂಗಲ್ ಡೂಡಲ್ (Google Doodle) ವಿಶೇಷ ಗೌರವ ಸಲ್ಲಿಸಿದೆ. ಈ ಎನಿಮೆಟೆಡ್ ಡೂಡಲ್‍ನಲ್ಲಿ ರಾಷ್ಟ್ರದ ಹೆಮ್ಮೆಯನ್ನು ಪ್ರತಿಬಿಂಬಿಸುವ ಅಂಶಗಳನ್ನು ಪ್ರದರ್ಶಿಸಲಾಗಿದೆ.
ಗೂಗಲ್ ಸರ್ಚ್ ಇಂಜಿನ್‍ನ ಎಲ್ಲಾ ಅಕ್ಷರಗಳು ಗಣರಾಜ್ಯೋತ್ಸವದ (Republic Day) ನಿಮಿತ್ತ ವಿಶಿಷ್ಟ ವಿನ್ಯಾಸವನ್ನ ಒಳಗೊಂಡಿದೆ. ರಾಕೆಟ್ ಉಡಾವಣೆ, ಟೆಕ್, ಬಾಹ್ಯಾಕಾಶ, ಕ್ರಿಕೆಟ್ ಸೇರಿದಂತೆ ಭಾರತದ ಭಾರತದ ಸಾಧನೆಗಳನ್ನ ಪ್ರತಿಬಿಂಬಿಸುವ ಚಿತ್ರವನ್ನ ಒಳಗೊಂಡಿದೆ. ಇದೆಲ್ಲ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಗೂಗಲ್ ಡೂಡಲ್‍ನಲ್ಲಿ ಹಾಕಲಾಗಿದೆ.
ಈ ಬಾರಿ ವಿಶೇಷತೆ ಏನು?
ಈ ಬಾರಿ ಗಣರಾಜ್ಯೋತ್ಸವ ಆಚರಣೆಯು ‘ವಂದೇ ಮಾತರಂಗೆ 150 ವರ್ಷಗಳು’ ಎಂಬ ವಿಷಯದ ಮೇಲೆ ನಡೆಯಲಿದೆ. 1875ರಲ್ಲಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ವಿರಚಿತ ವಂದೇ ಮಾತರಂಗೆ ಇದೀಗ 150 ವರ್ಷಗಳ ಸಂಭ್ರಮ. ಈ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಂದೇ ಮಾತರಂನಿಂದ ಪ್ರೇರಿತವಾದ ಸಾಂಸ್ಕೃತಿಕ ಹಾಗೂ ಪ್ರದರ್ಶನಗಳು ಪಾಲ್ಗೊಳ್ಳಲು ಸೂಚಿಸಲಾಗಿದೆ.
ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪಾಠ ಸಂಚಲನದಲ್ಲಿ ಭಾರತೀಯ ಸೇನೆಯು ಬ್ಯಾಟಲ್ ಅರೇ (ಯುದ್ಧ ಶ್ರೇಣಿ) ಪ್ರದರ್ಶಿಸಲಿದೆ. ಈ ವೇಳೆ ಮಿಲಿಟರಿ ಪ್ರದರ್ಶನ, ಆಧುನಿಕ ಶಸ್ತ್ರಾಸ್ತ್ರ, ಡ್ರೋನ್, ಟ್ಯಾಂಕರ್ ಗಳು ಮತ್ತು ಕ್ಷಿಪಣಿ ಸೇರಿದಂತೆ ಇನ್ನಿತರ ರಚನೆಯನ್ನು ಪ್ರದರ್ಶಿಸಲಿದೆ. ಜೊತೆಗೆ ಭಾರತೀಯ ಸೇನೆಯ ವಿವಿಧ ರಚನೆಯ ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ ಗಳು ಕೂಡ ಪಾಲ್ಗೊಳ್ಳಲಿದೆ. ಇನ್ನು ಭಾರತೀಯ ವಾಯುಪಡೆಯ ವಿಶೇಷ ನಿವೃತ್ತ ಸೈನಿಕರ ಟ್ಯಾಬ್ಲೋ ಕೂಡ ಇದರ ಭಾಗವಾಗಲಿದೆ.
ಗಣರಾಜ್ಯೋತ್ಸವದ ಅತಿಥಿ ಯಾರು?
ಜನವರಿ 26, 2026ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ.ಇದೇ ವೇಳೆ ರೈತರು, ವಿಜ್ಞಾನಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಮಹಿಳಾ ಸ್ವಸಹಾಯ ಗುಂಪು ಸದಸ್ಯರು, ಕುಶಲಕರ್ಮಿಗಳು, ಕಾರ್ಮಿಕರು, ಸ್ವಯಂಸೇವಕರು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 10,000 ಜನರು ವಿಶೇಷ ಅತಿಥಿಗಳಾಗಿ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.



