ಉಡುಪಿ: ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಟ್ರಕ್ ಟಯರ್ ಅಡಿಗೆ ಸಿಲುಕಿ ಯುವಕ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಣಿಪಾಲ ಎಂಐಟಿ ಕ್ವಾರ್ಟಸ್ ನಿವಾಸಿ ಅವಿನಾಶ್ (19) ಮೃತ ಯುವಕ. ಸ್ನೇಹಿತರೊಂದಿಗೆ ಮಲ್ಪೆ ಬೀಚ್‌ಗೆ ತೆರಳಿ ಮನೆಗೆ ಮರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಜಂಕ್ಷನ್‌ನಲ್ಲಿ ಸಿಗ್ನಲ್ ಬೀಳುತ್ತಿದ್ದಂತೆ ಯುವಕ ವೇಗವಾಗಿ ಸ್ಕೂಟಿ ಚಲಾಯಿಸಿದ್ದಾನೆ. ನಿರ್ಲಕ್ಷ್ಯ ಚಾಲನೆಯಿಂದ ಯುವಕ ದಾರುಣ ಸಾವಿಗೀಡಾಗಿದ್ದಾನೆ. ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

