ಹಿರಿಯ ನಟ ಧರ್ಮೇಂದ್ರ (Dharmendra), ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ (Mammootty), ಬಂಗಾಳಿ ಚಲನಚಿತ್ರ ದಿಗ್ಗಜ ಪ್ರೊಸೆನ್‌ಜಿತ್ ಚಟರ್ಜಿ ಮತ್ತು ನಟ ಆರ್ ಮಾಧವನ್ ಅವರು 2026 ರ ಪದ್ಮ ಪ್ರಶಸ್ತಿಗಳಿಗೆ (Padma Awards 2026) ಭಾಜನರಾಗಿದ್ದಾರೆ.
ಭಾರತೀಯ ಚಿತ್ರರಂಗಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಧರ್ಮೇಂದ್ರ ಸಿಂಗ್ ಡಿಯೋಲ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಶತಾವಧಾನಿ ಗಣೇಶ್ಗೆ ಪದ್ಮ ಭೂಷಣ, ರಾಜ್ಯದ 7 ಮಂದಿಗೆ ಪದ್ಮಶ್ರೀ
ಪದ್ಮಭೂಷಣ: 1990 ಮತ್ತು 2000 ರ ದಶಕದ ಆರಂಭದಲ್ಲಿ ಹಿಂದಿ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಅಲ್ಕಾ ಯಾಗ್ನಿಕ್ ಅವರು ಅತ್ಯುತ್ತಮ ಗೌರವಕ್ಕೆ ಪಾತ್ರರಾಗಿದ್ದಾರೆ. ಮಲಯಾಳಂ ಚಿತ್ರರಂಗವನ್ನು ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಗಳಲ್ಲಿ ಉನ್ನತೀಕರಿಸಿದ ನಟ ಮಮ್ಮುಟ್ಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಬಂಗಾಳಿ ಚಿತ್ರರಂಗದ ನಟ ಪ್ರೊಸೆನ್‌ಜಿತ್ ಚಟರ್ಜಿ, ನಟ ಆರ್.ಮಾಧವನ್ ಅವರು ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಧವನ್ ಅವರು ಹಿಂದಿ, ತಮಿಳು ಮತ್ತು ಅಂತರರಾಷ್ಟ್ರೀಯ ಸಿನಿಮಾಗಳಲ್ಲಿ ಅವರ ಬಹುಮುಖ ಪ್ರತಿಭೆಯಾಗಿ ಹೆಸರು ಮಾಡಿದ್ದಾರೆ. ಇದನ್ನೂ ಓದಿ: ಹಿಮೋಫಿಲಿಯಾ ವಿರುದ್ಧ ಹೋರಾಟ – ಡಾ.ಸುರೇಶ್ ಹನಗವಾಡಿಗೆ ಪದ್ಮಶ್ರೀ


