ರಾಯ್ಪುರ್: 2017ರ ಸೆಕ್ಸ್ ಸಿಡಿ ಪ್ರಕರಣದಲ್ಲಿ (Sex CD Case) ಛತ್ತಿಸ್‌ಗಢದ ಮಾಜಿ ಸಿಎಂ ಭೂಪೇಶ್ ಭಗೇಲ್ ಅವರನ್ನ ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನ ರಾಯ್ಪುರದ ಸಿಬಿಐ ವಿಶೇಷ ಕೋರ್ಟ್ (Special CBI Court) ಶನಿವಾರ ರದ್ದುಗೊಳಿಸಿದೆ.
ಮಾಜಿ ಸಚಿವ ರಾಜೇಶ್ ಮುನಾತ್ (Rajesh Munnat) ಅವರ ಮಾನನಷ್ಟಕ್ಕೆ ಸಂಬಂಧಿಸಿದ 2017ರ ಅಶ್ಲೀಲ ವಿಡಿಯೋ ಪ್ರಕರಣಲ್ಲಿ ಬಘೇಲ್ ಅವರನ್ನ ಖುಲಾಸೆಗೊಳಿಸಿ 2024ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿತ್ತು. ಈ ದೇಶವನ್ನ 2026ರ ಜನವರಿ 24 ರಂದು ಸಿಬಿಐ ವಿಶೇಷ ನ್ಯಾಯಾಲಯವು ರದ್ದುಗೊಳಿಸಿದೆ. ರಾಜೇಶ್ ಮುನ್ನತ್ ಆಗ ಛತ್ತೀಸ್‌ಗಢ (Chhattisgarh) ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ (PWD) ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು.
ಇದೇ ವಿಚಾರಣೆಯಲ್ಲಿ ಇತರ ಆರೋಪಿಗಳಾದ ಕೈಲಾಶ್ ಮುರಾರ್ಕ, ವಿನೋದ್ ವರ್ಮಾ ಮತ್ತು ವಿಜಯ್ ಭಾಟಿಯಾ ಅವರು ತಮ್ಮ ವಿರುದ್ಧ ಆರೋಪಗಳನ್ನು ರೂಪಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಗಳನ್ನೂ ಕೋರ್ಟ್ ತಿರಸ್ಕರಿಸಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಂಸಾಚಾರ, ಯುದ್ಧದ ಆತಂಕ – ರಂಜಾನ್ ಹೊಸ್ತಿಲಲ್ಲೇ ಡ್ರೈಫ್ರೂಟ್ಸ್ ಸಪ್ಲೈ ಬಂದ್
ಏನಿದು ಸೆಕ್ಸ್ ಸಿಡಿ ಪ್ರಕರಣ?
ಆಗಿನ ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ರಾಜೇಶ್ ಮುನಾತ್ ಹೆಸರಿಗೆ ಕಳಂಕ ತರಲು ನಕಲಿ ಸೆಕ್ಸ್ ಸಿ.ಡಿ ಬಿಡುಗಡೆ ಮಾಡಿದ್ದಾರೆ ಎನ್ನುವ ಆರೋಪವನ್ನ ಛತ್ತಿಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಎದುರಿಸುತ್ತಿದ್ದಾರೆ. ಆ ಸಮಯದಲ್ಲಿ ಪ್ರಸಾರವಾದ ಸೆಕ್ಸ್ ಸಿಡಿಯಲ್ಲಿ ಮುನಾತ್ ಅವರ ಆಕ್ಷೇಪಾರ್ಹ ವಿಡಿಯೋ ಇತ್ತು. ಪ್ರಕರಣ ಸಂಬಂಧ 2016ರ ಅಕ್ಟೋಬರ್‌ನಲ್ಲಿ ಪತ್ರಕರ್ತ ಹಾಗೂ ಬಘೇಲ್ ಸಹಲೆಗಾರನೂ ಆಗಿದ್ದ ವಿನೋದ್ ಶರ್ಮಾನನ್ನ 500 ಸಿಡಿಗಳೊಂದಿಗೆ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿತ್ತು. ವಿಡಿಯೋವನ್ನ ರಾಜಕೀಯ ವಲಯದಲ್ಲಿ ಪ್ರಸಾರ ಮಾಡಿ ಮುನಾತ್ ಅವರ ಖ್ಯಾತಿಗೆ ಕಳಂಕ ತಂದಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.
ನಂತರ ಮುನಾತ್ ಸಲ್ಲಿಸಿದ ಎಫ್‌ಐಆರ್ ಮೇಲೆ ಅಂದಿನ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲ್ ಅವನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು. ನಂತರ ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಲಾಯಿತು. ಇದನ್ನೂ ಓದಿ: ಮನಾಲಿಯಲ್ಲಿ ಭಾರೀ ಹಿಮಪಾತ – 8 ಕಿಮೀ ಟ್ರಾಫಿಕ್ ಜಾಮ್, ರಸ್ತೆಯಲ್ಲೇ ನಿಂತ ಪ್ರವಾಸಿಗರು
ಸಿಬಿಐ ತನಿಖೆ ಕೈಗೆತ್ತಿಕೊಂಡ ನಂತರ ಸುದೀರ್ಘ ತನಿಖೆ ನಡೆಸಿ ಬಘೇಲ್ ಸೇರಿದಂತೆ 6 ಆರೋಪಿಗಳ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿತು. ಈ ಪ್ರಕರಣವು ಹಲವಾರು ವರ್ಷಗಳಿಂದ ಕಾನೂನು ಪರಿಶೀಲನೆಯಲ್ಲಿದೆ. 2024ರಲ್ಲಿ ಛತ್ತೀಸ್‌ಗಢದ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣದಿಂದ ಬಘೇಲ್‌ಗೆ ರಿಲೀಫ್ ಕೊಟ್ಟಿತ್ತು. ಆದರೀಗ ಸಿಬಿಐ ಕೋರ್ಟ್ ಖುಲಾಸೆಯನ್ನ ರದ್ದುಗೊಳಿಸಿದೆ.



