ತುಮಕೂರು: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ (KSRTC Bus) ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್ (Kunigal) ಪಟ್ಟಣದ ಅಗ್ರಹಾರದ ಬಳಿ ನಡೆದಿದೆ.
ಕುಣಿಗಲ್ ಪಟ್ಟಣದ ನಿವಾಸಿ ತಿಮ್ಮೇಗೌಡ ಮೃತ ಯುವಕ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತು ಬಸ್‌ಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸಾಲು ಸಾಲು ರಜೆ – ಊರಿನತ್ತ ಜನರ ದಂಡು; ನೆಲಮಂಗಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಶುಕ್ರವಾರ ರಾತ್ರಿ 12:40ರ ಸುಮಾರಿಗೆ ಘಟನೆ ನಡೆದಿದೆ. ಬಸ್ ಚಲಿಸುತ್ತಿದ್ದ ವೇಳೆ ಯುವ ಏಕಾಏಕಿ ನುಗ್ಗಿದ ಪರಿಣಾಮ ಬಸ್ ಯುವಕನ ತಲೆ ಮೇಲೆ ಹರಿದು ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ. ಬಸ್ಸಿನಡಿಗೆ ಯುವಕ ನುಗ್ಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಯಲಹಂಕ ʻಕೈʼ ಮುಖಂಡನ ಅಳಿಯ & ಸ್ಥಳೀಯರ ನಡುವೆ ಕಿರಿಕ್

