-40 ಲಕ್ಷ ರೂ.ಗೂ ಹೆಚ್ಚು ವಂಚನೆ ಮಾಡಿರುವುದಾಗಿ ಆರೋಪಿಸಿದ ನಿರ್ಮಾಪಕ
ಮುಂಬೈ: ಬೇರೊಬ್ಬಳೊಂದಿಗೆ ಏಕಾಂತದಲ್ಲಿದ್ದಾಗ ಪಾಲಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಇದೇ ಕಾರಣಕ್ಕೆ ಸ್ಮೃತಿ ಮಂಧಾನ ಹಾಗೂ ಪಾಲಶ್ ಮುಚ್ಚಲ್ ಮದುವೆ ಮುರಿದು ಹೋಯಿತು ಎಂದು ನಟ, ನಿರ್ಮಾಪಕ ವಿಧ್ಯಾನ್ ಮಾನೆ (Vidnyan Mane) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸ್ಮೃತಿ ಮಂಧಾನ ನನ್ನ ಬಾಲ್ಯ ಸ್ನೇಹಿತೆ. ಅವರಿಂದ ನನಗೆ ಪಾಲಶ್ ಮುಚ್ಚಲ್ ಹಾಗೂ ಅವರ ಕುಟುಂಬಸ್ಥರ ಪರಿಚಯವಾಯಿತು. 2025 ನವೆಂಬರ್‌ನಲ್ಲಿ ಇಬ್ಬರು ಮದುವೆಯಾಗಿ ಸಾಂಗ್ಲಿಯಲ್ಲಿ ಇರುತ್ತಾರೆ ಎಂದುಕೊಂಡಿದ್ದೆ. ಆದರೆ ಮದುವೆ ಸಮಯದಲ್ಲಿ ಪಾಲಶ್ ಬೇರೊಬ್ಬ ಮಹಿಳೆ ಜೊತೆ ಏಕಾಂದಲ್ಲಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಇದನ್ನು ಗಮನಿಸಿದ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಪಾಲಶ್‌ಗೆ ಬೈದು, ಥಳಿಸಿದರು. ಪಾಲಶ್ ಮಾತ್ರವಲ್ಲ, ಅವರ ಕುಟುಂಬವೇ ಸರಿಯಿಲ್ಲ. ಮದುವೆ ರದ್ದಾದ ಬಳಿಕ ನನ್ನ ಮತ್ತು ಪಾಲಶ್ ಕುಟುಂಬದೊಂದಿಗಿನ ಮಾತು ಸಂಪೂರ್ಣವಾಗಿ ನಿಂತಿತು ಎಂದಿದ್ದಾರೆ. ಇದನ್ನೂ ಓದಿ: ಮದುವೆ ಮುರಿಯಿತು – ಮೌನ ಮುರಿದು ವದಂತಿಗಳಿಗೆ ತೆರೆ ಎಳೆದ ಸ್ಮೃತಿ ಮಂಧಾನ
ಇದೇ ವೇಳೆ ರಿಲೀಸ್ ಆಗದ ಸಿನಿಮಾಗೆ ಸಂಬಂಧಿಸಿದಂತೆ ನನಗೆ 40 ಲಕ್ಷ ರೂ.ಗೂ ಹೆಚ್ಚು ವಂಚನೆ ಮಾಡಿದ್ದಾರೆ. ಈ ಕುರಿತು ಈಗಾಗಲೇ ಸಾಂಗ್ಲಿ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ತಿಂಗಳು ಪಾಲಶ್ ತಾಯಿ ಅವರನ್ನು ಭೇಟಿಯಾಗಿದ್ದೆ. ಆಗ ಸಿನಿಮಾ ರಿಲೀಸ್ ಮಾಡಲು ಬಜೆಟ್ 1.5 ಕೋಟಿ ರೂ. ಏರಿಕೆಯಾಗಿದೆ. ಹೀಗಾಗಿ ಇನ್ನೂ 10 ಲಕ್ಷ ರೂ. ಹೂಡಿಕೆ ಮಾಡಿ, ಇಲ್ಲದಿದ್ದರೆ ಯಾವುದೇ ಹಣವನ್ನು ಹಿಂದಿರುಗಿಸುವುದಿಲ್ಲ ಎಂದಿದ್ದರು. ಆಗಿನಿಂದ ನನಗೆ ಬ್ಲ್ಯಾಕ್‌ಮೇಲ್ ಮಾಡಿದ್ದಲ್ಲದೇ, ಸಿನಿಮಾದಿಂದಲೂ ಹೊರಗಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ನನ್ನನ್ನು ಸೇರಿದಂತೆ ಸಿನಿಮಾದ ಸಹ ಕಲಾವಿದರಿಗೂ ಕೂಡ ಸಿಗಬೇಕಾದ ಹಣ ಸಿಕ್ಕಿಲ್ಲ. ನಾಣು ಹೇಳಿದ್ದೆಲ್ಲವೂ ಸತ್ಯ. ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು ನನ್ನ ಬಳಿ ಇದೆ. ಅವರೊಂದಿಗಿನ ಚಾಟ್, ಕಾಲ್ ರೆರ್ಕಾಡಿಂಗ್ ಎಲ್ಲವೂ ಇದೆ. ಇದೆಲ್ಲವನ್ನು ನಾನು ಪೊಲೀಸರು ಮತ್ತು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧಾನ ಮೊದಲ ಪೋಸ್ಟ್ – ಎಂಗೇಜ್‌ಮೆಂಟ್ ರಿಂಗ್ ಎಲ್ಲಿ ಅಂದ್ರು ಫ್ಯಾನ್ಸ್

