ಚಿಕ್ಕಬಳ್ಳಾಪುರ: ಶಿಡ್ಲಘಟ್ಟ (Sidlaghatta) ನಗರಸಭೆ ಪೌರಾಯುಕ್ತೆ (Municipal Commissioner) ಅಮೃತಗೌಡಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡ (Rajeev Gowda) ಬಂಧನ ಭೀತಿಯಿಂದ ಪರಾರಿಯಾಗಿ 10 ದಿನಗಳೇ ಕಳೆದಿದ್ದು, ಚಿಕ್ಕಬಳ್ಳಾಪುರ ಪೊಲೀಸರು ರಾಜೀವ್ ಗೌಡರನ್ನ ಬಂಧಿಸಲು ಹರಸಾಹಸ ಪಡುತ್ತಿದ್ದಾರೆ.
ರಾಜೀವ್ ಗೌಡ ಬಂಧನಕ್ಕೆ ಪೊಲೀಸರು ಹಗಲು ರಾತ್ರಿ ಹುಡುಕಾಟ ಮುಂದುವೆರೆಸಿದ್ದು, ಶುಕ್ರವಾರ ರಾತ್ರಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಪೊಲೀಸರು, ಬೆಂಗಳೂರಿನ ಸಂಜಯ್ ನಗರದ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ರಾಜೀವ್ ಗೌಡ ಪತ್ತೆಯಾಗಿಲ್ಲ. ಇನ್ನೂ ರಾಜೀವ್ ಗೌಡ ವಿದೇಶಕ್ಕೆ ಪರಾರಿಯಾಗದಂತೆ ಪಾಸ್ ಪೋರ್ಟ್ ಮೇಲೂ ಸಹ ಪೊಲೀಸರು ಕಣ್ಣಿಟ್ಟಿದ್ದಾರೆ. ಇದರ ನಡುವೆ ಇಂದು ನ್ಯಾಯಾಲಯದಿಂದ ರಾಜೀವ್ ಗೌಡ ಬೇಲ್ ಭವಿಷ್ಯ ಹೊರಬೀಳಲಿದ್ದು, ಏನಾಗಲಿದೆ ಎಂಬ ಕೂತಹೂಲದಿಂದ ಎಲ್ಲರ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ. ಇದನ್ನೂ ಓದಿ: 77ನೇ ಗಣರಾಜ್ಯೋತ್ಸವ; ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ 2,000 ಇ-ಪಾಸ್ ವ್ಯವಸ್ಥೆ: ಸೀಮಂತ್ ಕುಮಾರ್ ಸಿಂಗ್
ಮತ್ತೊಂದೆಡೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಮೇಲೆ ಆ್ಯಸಿಡ್ ದಾಳಿ ಆಗಲಿದೆ ಎಂಬ ಬೆದರಿಕೆ ಪತ್ರವೂ ಅಂಚೆ ಮೂಲಕ ನಗರಸಭಾ ಕಚೇರಿಗೆ ಬಂದಿತ್ತು. ಈ ಪತ್ರವನ್ನ ಪಡೆದಿರುವ ಪೊಲೀಸರು ಈಗಾಗಲೇ ಎನ್‌ಸಿಆರ್ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಿಲು ನಿರ್ಧರಿಸಿದ್ದಾರೆ. ಆ್ಯಸಿಡ್ ದಾಳಿಯ ಮಾಹಿತಿಯ ಬೆದರಿಕೆ ಪತ್ರದಿಂದ ಎಚ್ಚೆತ್ತಿರುವ ಹಾಗೂ ಕೆಪಿಸಿಸಿ ವತಿಯಿಂದ ರಾಜೀವ್ ಗೌಡ ಅಮಾನತು ಆದ ಕಾರಣ ಅಮೃತಗೌಡ ಮೇಲೆ ದಾಳಿ ಆಗುವ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಿಡ್ಲಘಟ್ಟ ನಗರಸಭಾ ಕಚೇರಿ ಸೇರಿದಂತೆ ಪೌರಾಯುಕ್ತೆ ನಿವಾಸದ ಬಳಿಯೂ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಇದನ್ನೂ ಓದಿ: ರೆಡ್ಡಿ, ರಾಮುಲುಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ – ಇಬ್ಬರು ಅಪ್ರಾಪ್ತರು ಸೇರಿ 8 ಮಂದಿ ವಶಕ್ಕೆ

