ಗದಗ: ಲಕ್ಕುಂಡಿಯಲ್ಲಿ ಇಂದು 8ನೇ ದಿನವೂ ಉತ್ಖನನ (Lakkundi Excavation) ಕಾರ್ಯ ಭರದಿಂದ ನಡೆಯಿತು. ಇಂದು ಪ್ರಾಚ್ಯಾವಶೇಷ ಬಿಲ್ಲೆ, ಕಬ್ಬಿಣದ ಉಂಡೆ, ಪಚ್ಚೆ ಕಲ್ಲು ಪತ್ತೆಯಾಗಿದೆ.
ಕಳೆದ 7 ದಿನದಿಂದ ಸುಮಾರು 7 ಅಡಿಯಷ್ಟು ಆಳಕ್ಕೆ ಅಗೆಯಲಾಗಿದೆ. ಈವರೆಗೆ ಪ್ರಾಚೀನ ಅವಶೇಷಗಳು, ಮೂಳೆಗಳು, ಕವಡೆಗಳು, ಮಡಿಕೆ ತುಣುಕುಗಳು, ನಾಗ ಶಿಲೆಗಳು, ಶಿವಲಿಂಗ, ಶಿವಲಿಂಗ ಪಾಣಿಪೀಠ, ಟೆರ್ರಾಕೋಟ ಬಿಲ್ಲೆ ಸೇರಿದಂತೆ ಅನೇಕ ವಸ್ತುಗಳು ಪತ್ತೆ ಆಗಿವೆ. ಉತ್ಖನನ ಆಳಕ್ಕೆ ಇಳಿದಂತೆಲ್ಲ ಕುತೂಹಲ ಮೂಡಿಸುತ್ತಿದೆ. ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಸ್ಥಳಕ್ಕೆ ಫ್ರಾನ್ಸ್ ಪ್ರವಾಸಿಗರ ತಂಡ ಭೇಟಿ – ಪ್ರಜ್ವಲ್ ಪ್ರಾಮಾಣಿಕತೆಗೆ ಮೆಚ್ಚುಗೆ
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಜಾಗ ಈಗ ಪ್ರವಾಸಿಗರ ವೀಕ್ಷಣೆಯ ತಾಣವಾಗಿದೆ. ಫ್ರಾನ್ಸ್‌ನಿಂದ (France) ಆಗಮಿಸಿದ 15 ಪ್ರವಾಸಿಗರ ತಂಡ ನಿಧಿ ಸಿಕ್ಕ ಜಾಗ ವೀಕ್ಷಣೆ ಮಾಡಿತು. ಪ್ರಜ್ವಲ್ ಕುಟುಂಬಸ್ಥರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ ಪಂಚಾಯತ್‌ನಿಂದ ಸೈಟ್


