– ಚುನಾವಣೆಗೆ ಮುನ್ನವೇ ಕೇರಳದಲ್ಲಿ ಪ್ರಚಾರ ಕಣಕ್ಕೆ ಇಳಿದ ಮೋದಿ
– ನಂಬಿಕೆ ಇಡಿ, ತಿರುವನಂತಪುರಂ ಇಡೀ ದೇಶಕ್ಕೆ ಮಾದರಿ ನಗರವಾಗಲಿದೆ
– LDF, UDF ಕೇರಳವನ್ನು ಭ್ರಷ್ಟಾಚಾರ, ತುಷ್ಟೀಕರಣದ ರಾಜಕೀಯಕ್ಕೆ ತಳ್ಳಿವೆ
ತಿರುವನಂತಪುರಂ: ಕೇರಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸಲಾಗುವುದು. ಇದು ಮೋದಿಯ ಗ್ಯಾರಂಟಿ ಎಂದು ಪ್ರಧಾನಿ (PM Narendra Modi) ಹೇಳಿದ್ದಾರೆ.
ಚುನಾವಣಾ ದಿನಾಂಕ ಪ್ರಕಟವಾಗುವ ಮೊದಲೇ ಕೇರಳದಲ್ಲಿ ಮೋದಿ ಪಕ್ಷದ ಪರ ಪ್ರಚಾರಕ್ಕೆ ಇಳಿದಿದ್ದು ಇಂದು ತಿರುವನಂತಪುರದಲ್ಲಿ ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್‌ಡಿಎಫ್, ಯುಡಿಎಫ್ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.
ತಿರುವನಂತಪುರ (Thiruvananthapuram) ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಇದು ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟವಾದ ಉದಾಹರಣೆ. ಕೇರಳದಲ್ಲಿ ಬದಲಾವಣೆ ಅನಿವಾರ್ಯ. ಎಡಪಂಥೀಯ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಕೇರಳವನ್ನು ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕೀಯದ ತಳ್ಳಿವೆ ಎಂದು ದೂರಿದರು.
ಎಲ್‌ಡಿಎಫ್, ಯುಡಿಎಫ್ ಧ್ವಜಗಳು ಮತ್ತು ಚಿಹ್ನೆಗಳು ಭಿನ್ನವಾಗಿದ್ದರೂ ಅವರ ರಾಜಕೀಯ ಮತ್ತು ಕಾರ್ಯಸೂಚಿ ಬಹುತೇಕ ಒಂದೇ ಆಗಿವೆ. ದಶಕಗಳಿಂದ ಎಲ್‌ಡಿಎಫ್ ಮತ್ತು ಯುಡಿಎಫ್ ತಿರುವನಂತಪುರವನ್ನು ನಿರ್ಲಕ್ಷಿಸಿ ನಗರವನ್ನು ಮೂಲಭೂತ ಸೌಕರ್ಯಗಳಿಂದ ವಂಚಿತಗೊಳಿಸಿತ್ತು. ಎಡಪಂಥೀಯರು ಮತ್ತು ಕಾಂಗ್ರೆಸ್ ಜನರ ಅಗತ್ಯಗಳನ್ನು ಪೂರೈಸುವಲ್ಲಿ ನಿರಂತರವಾಗಿ ವಿಫಲವಾಗಿವೆ. ಆದರೆ ನಮ್ಮ ತಂಡ ಅಭಿವೃದ್ಧಿ ಹೊಂದಿದ ತಿರುವನಂತಪುರಂ ಕಡೆಗೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದರು. ಇದನ್ನೂ ಓದಿ: Gold, Silver ಪ್ರಿಯರಿಗೆ ಶಾಕ್; 10 ಗ್ರಾಂ ಚಿನ್ನಕ್ಕೆ 5,400 ರೂ, ಕೆಜಿ ಬೆಳ್ಳಿಗೆ 15,000 ರೂ. ಏರಿಕೆ
UDF and LDF:
Full corruption, zero accountability.
Full communalism, zero responsibility. pic.twitter.com/uJ5137AQof
— Narendra Modi (@narendramodi) January 23, 2026
ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಐತಿಹಾಸಿಕ, ಈ ಗೆಲುವು ಉತ್ತಮ ಆಡಳಿತದ ಗೆಲುವು ಮತ್ತು ಅಭಿವೃದ್ಧಿ ಹೊಂದಿದ ಕೇರಳದ ಸಂಕಲ್ಪದ ಗೆಲುವು, ಕೇರಳವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಬದ್ಧತೆಯ ವಿಜಯ ಎಂದು ಬಣ್ಣಿಸಿದರು. ಪ್ರಧಾನಿ ಮೋದಿ ಅವರು ಕೇರಳದಲ್ಲಿ ಬಿಜೆಪಿಯ ಆರಂಭವನ್ನು ಗುಜರಾತ್‌ನಲ್ಲಿ ಪಕ್ಷದ ಆರಂಭಿಕ ಪ್ರಯಾಣದೊಂದಿಗೆ ಹೋಲಿಸಿದರು.
1987 ಕ್ಕಿಂತ ಮೊದಲು ಬಿಜೆಪಿ ಗುಜರಾತ್‌ನಲ್ಲಿ ಒಂದು ಸಣ್ಣ ಪಕ್ಷವಾಗಿತ್ತು ಮತ್ತು ಅದೇ ವರ್ಷ ಅದು ಮೊದಲ ಬಾರಿಗೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಗೆದ್ದಿತು. ಗುಜರಾತ್‌ನಲ್ಲಿ ಒಂದು ನಗರದಿಂದ ಆರಂಭವಾದಂತೆ ಕೇರಳದಲ್ಲಿ ಬಿಜೆಪಿಯ ಹೊಸ ರಾಜಕೀಯ ಪ್ರಯಾಣವೂ ಒಂದು ನಗರದಿಂದ ಪ್ರಾರಂಭವಾಗುತ್ತಿದೆ ಎಂದು ಮೋದಿ ಹೇಳಿದರು.
ತಿರುವನಂತಪುರಂ ಈಗ ಇಡೀ ದೇಶಕ್ಕೆ ಮಾದರಿ ನಗರವಾಗಲಿದೆ, ಈ ನಗರದ ಜನರಿಗೆ ನಾನು ಹೇಳುತ್ತೇನೆ ನಂಬಿಕೆ ಇಡಿ. ಇದನ್ನು ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದನ್ನಾಗಿ ಮಾಡಲು ನಾನು ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ ಎಂದು ಹೇಳಿದರು.
UDF and LDF have failed Kerala’s youth. pic.twitter.com/Bt1aRYM6DG
— Narendra Modi (@narendramodi) January 23, 2026
ಭಾಷಣಕ್ಕೂ ಮೊದಲು ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವಿನ ಪ್ರಾದೇಶಿಕ ರೈಲು ಸಂಪರ್ಕವನ್ನು ಹೆಚ್ಚಿಸಲು ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ನಾಲ್ಕು ಹೊಸ ರೈಲು ಸೇವೆಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು.
ನಾಗರಕೋಯಿಲ್-ಮಂಗಳೂರು, ತಿರುವನಂತಪುರಂ- ತಾಂಬರಂ, ತಿರುವನಂತಪುರಂ-ಚರ್ಲಪಲ್ಲಿ ಮಾರ್ಗಗಳಿಗೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಚಾಲನೆ ನೀಡಿದರು. ನಗರ ಜೀವನೋಪಾಯವನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ, ಪ್ರಧಾನಿ ಮೋದಿ ಅವರು ಒಂದು ಲಕ್ಷ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ವಿತರಿಸಿದರು. ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ, ಪ್ರಧಾನಿ ಮೋದಿ ತಿರುವನಂತಪುರಂನಲ್ಲಿ CSIR-NIIST ನಾವೀನ್ಯತೆ, ತಂತ್ರಜ್ಞಾನ ಮತ್ತು ಉದ್ಯಮಶೀಲತಾ ಕೇಂದ್ರಕ್ಕೆ ಅಡಿಪಾಯ ಹಾಕಿದರು.

