ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಚುರುಕುಗೊಂಡಿದೆ. 19ನೇ ಕ್ರಸ್ಟ್ ಗೇಟ್‌ನ ಎಲಿಮೆಂಟ್‌ಗಳು ತೆರವು ಕಾರ್ಯ ಮುಗಿದಿದ್ದು, ಹೊಸ ಗೇಟ್ ಅಳವಡಿಕೆ ಕಾರ್ಯ ಶುರುಮಾಡಿದ್ದಾರೆ.
ಈಗಾಗಲೇ 18ನೇ ಕ್ರಸ್ಟ್ ಗೇಟ್ ಕೂಡಿಸುವ ಕಾರ್ಯ ಯಶಸ್ವಿಯಾಗಿದೆ. ಇದೀಗ 19ನೇ ಕ್ರಸ್ಟ್ ಗೇಟ್‌ನ ಎಲಿಮೆಂಟ್‌ಗಳನ್ನು ತೆರವುಗೊಳಿಸಿದ್ದಾರೆ. ಹೊಸ ಗೇಟ್ ಅಳವಡಿಕೆ ಕಾರ್ಯವನ್ನು ಅಧಿಕಾರಿಗಳು ಶುರುಮಾಡಿದ್ದಾರೆ. 19ನೇ ಕ್ರಸ್ಟ್ಗೇಟ್ ಕಿತ್ತು ಹೋದ ಬಳಿಕ, ಎಲಿಮೆಂಟ್ ಕೂಡಿಸಿದ್ದ ಕನ್ನಯ್ಯ ನಾಯ್ಡು ಅಂಡ್ ಟೀಂ ಇದೀಗ ಎಲಿಮೆಂಟ್‌ಗಳನ್ನು ತೆರವು ಮಾಡಿದೆ. 19ನೇ ಕ್ರಸ್ಟ್ ಗೇಟ್‌ಗೆ ಹೊಸ ಗೇಟ್ ಕೂಡಿಸೋ ಕಾರ್ಯವನ್ನ ಮಾಡುತ್ತಿದೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಕೆ ಪರಿಶೀಲಿಸಿದ ಜನಾರ್ದನ ರೆಡ್ಡಿ
2024ರ ಆ.11ರಂದು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಿತ್ತು ಹೋಗಿತ್ತು. ಆ ಬಳಿಕ ಜಲಾಶಯದ ಎಲ್ಲಾ ಗೇಟ್‌ಗಳನ್ನ ಬದಲಾಯಿಸಲು ತಜ್ಞರ ತಂಡ ಸಲಹೆ ನೀಡಿತ್ತು. ಹೀಗಾಗಿ ಟಿಬಿ ಡ್ಯಾಂ ಬೋರ್ಡ್‌ನಿಂದ ಜಲಾಶಯದ 33 ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಿ, ಹೊಸ ಗೇಟ್ ಕೂಡಿಸುವ ಕೆಲಸ ಶುರುವಾಗಿದೆ.

