ಕೋಲಾರ: ಕೇರಳದ (Kerala) ಶಬರಿಮಲೆ (Sabarimala) ಪ್ರವಾಸಕ್ಕೆ ತೆರಳಿದ್ದ ಕೋಲಾರ (Kolar) ಮೂಲದ ವ್ಯಕ್ತಿಯೊಬ್ಬರು ತಮಿಳುನಾಡಿನಲ್ಲಿ (Tamil Nadu) ನಾಪತ್ತೆಯಾಗಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿಯ ರವಿ (40) ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದು, ತಮಿಳುನಾಡಿನ ತಿರುಚಂದೂರ್‌ನಲ್ಲಿ ಮಂಗಳವಾರ ಪ್ರವಾಸಕ್ಕೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿ ನಾಲ್ಕು ದಿನಗಳೇ ಕಳೆದರೂ ಯಾವುದೇ ಸುಳಿವು ಸಿಕಿಲ್ಲ. ಇದನ್ನೂ ಓದಿ: ಜನಗಣತಿಯ ಮೊದಲ ಹಂತಕ್ಕೆ ತಯಾರಿ; 33 ಪ್ರಶ್ನೆಗಳನ್ನು ಸಿದ್ಧಪಡಿಸಿದ ಕೇಂದ್ರ ಸರ್ಕಾರ
ಸದ್ಯ ಘಟನೆ ಸಂಬಂಧ ತಿರುಚಂದೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ನಾಪತ್ತೆಯಾಗಿರುವ ರವಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆ ಕಾವು – ಟಿಕೆಟ್‌ಗಾಗಿ ಕಮಲ ಪಾಳಯದಲ್ಲಿ ಫೈಟ್

