– ಹಳ್ಳಿಯಲ್ಲಿ ವಾಸ ಮಾಡಿದ್ದಕ್ಕೆ ನೊಂದು ನವವಿವಾಹಿತೆ ಸೂಸೈಡ್
ಕಲಬುರಗಿ: ಪ್ರೀತಿಸಿ ಮದುವೆಯಾದ ನವವಿವಾಹಿತೆ ಎರಡೇ ತಿಂಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ಅನಸೂಯಾ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಕಲಬುರಗಿ ನಗರದ ಆಜಾದಪುರ್ ಬಡಾವಣೆಯ ನಿವಾಸಿಯಾಗಿದ್ದು, ಈಕೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಅತ್ತೆ ಮಗ ಅವಿನಾಶ್ ಜೊತೆ ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಎರಡೇ ತಿಂಗಳಲ್ಲಿ ಈಕೆಗೆ ತನ್ನ ಮೂರು ಜನ ಸಹೋದರಿಯರು ಕ್ಯಾಪಿಟಲ್ ಸಿಟಿಗಳಲ್ಲಿ ವಾಸವಿದ್ರು, ತಾನು ಮಾತ್ರ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಮಾನಸಿಕ ಕೊರಗು ಕಾಡಲಾರಂಭಿಸಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು; ತನಿಖಾ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಣೆ
ಮದುವೆಯ ಬಳಿಕ ತವರು ಮನೆಗೆ ಹೋದಾಗ ತನ್ನ ಪೋಷಕರ ಬಳಿ ಸಹ ಒಂದೆರಡು ಬಾರಿ, ಸಹೋದರಿಯರು ಬೆಂಗಳೂರು ಹಾಗೂ ಮುಂಬೈನಂತಹ ಕ್ಯಾಪಿಟಲ್ ಸಿಟಿಗಳಲ್ಲಿ ವಾಸಿಸುತ್ತಿದ್ದಾರೆ. ನಾನು ಮಾತ್ರ ಉತ್ತಮ ವಿದ್ಯಾಭ್ಯಾಸ ಪಡೆದರೂ ಹಳ್ಳಿಯಲ್ಲಿ ಜೀವನ ನಡೆಸುತ್ತಿರುವ ಕೊರಗನ್ನು ಹೇಳಿಕೊಂಡಿದ್ದಳು. ಈ ವೇಳೆ ಪೋಷಕರು ಬುದ್ದಿಮಾತು ಹೇಳಿ ಕಳುಹಿಸಿದ್ದಾರೆ. ಆದರೆ, ಅನಸೂಯಾಗೆ ಇದೇ ಮಾನಸಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮದುವೆಗೂ ಮುನ್ನ ಅನಸೂಯಾ ಸಹ ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿಕೊಂಡು ಇಲ್ಲೇ ವಾಸವಿದ್ದರು. ಆದರೆ, ಮದುವೆ ಬಳಿಕ ಮತ್ತೆ ಕ್ಯಾಪಿಟಲ್ ಸಿಟಿಯಲ್ಲಿ ವಾಸ ಮಾಡಬೇಕು ಎಂಬ ಆಸೆ ಹೆಚ್ಚಾಗಿ ಅದೇ ಕೊರಗಿನಲ್ಲಿ ಕಾಲ ಕಳೆಯುತ್ತಿದ್ದರು. ಒಂದೆಡೆ ಲೈಫ್‌ಸ್ಟೈಲ್, ಇನ್ನೊಂದೆಡೆ ಈಕೆ ಹಲವು ವರ್ಷಗಳಿಂದ ಪ್ರೀತಿಸಿದ ಅವಿನಾಶ್‌ನನ್ನು ಸಹ ಬಿಟ್ಟು ಇರಲು ಆಗುತ್ತಿರಲಿಲ್ಲ. ಹೀಗಾಗಿ, ಬೆಂಗಳೂರು ಬಿಟ್ಟು ಅವಿನಾಶ್ ಜೊತೆ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಕಲಬುರಗಿಯ ಆಜಾದಪುರದಲ್ಲಿರುವ ಗಂಡನ ಮನೆಯಲ್ಲಿ ಜೀವನ ಕಳೆಯುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಗಂಡನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯ ಪ್ರತಿಷ್ಠಿತ ಮಾಲ್‌ನಲ್ಲಿ ಅಗ್ನಿ ಅವಘಡ – ಹೊತ್ತಿಯುರಿದ 60ಕ್ಕೂ ಹೆಚ್ಚು ಅಂಗಡಿಗಳು

