– ನೀವೇ ವಿನ್ನರ್ ಅಂದ್ರು ಫ್ಯಾನ್ಸ್
ಬಿಗ್‌ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ರನ್ನರ್ ಅಪ್ ರಕ್ಷಿತಾ ಶೆಟ್ಟಿ (Rakshita Shetty) ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ಹೆಚ್ಚೇನು ಬೇಕು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ನಾನು ಈ ಸ್ಥಾನಕ್ಕೆ ಬರಲು ಕರ್ನಾಟಕವೇ ಕಾರಣ. ತುಂಬಾ ಪ್ರೀತಿಕೊಟ್ಟು ಕನ್ನಡಿಗರು ನನ್ನನ್ನು ಗೆಲ್ಲಿಸಿದ್ದಾರೆ. ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂದ ಹೆಚ್ಚೇನು ಬೇಕಿಲ್ಲ ಎಂದಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ನೀವೇ ವಿನ್ನರ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತೆರೆದ ವಾಹನದಲ್ಲಿ ಮೆರವಣಿಗೆ – ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ ರಕ್ಷಿತಾ
View this post on Instagram
ಬಿಗ್‌ಬಾಸ್ ಮನೆಯಲ್ಲಿರುವಾಗ ನೀವೆಲ್ಲ ಇಷ್ಟು ಪ್ರೀತಿ, ಸಪೋರ್ಟ್ ಮಾಡ್ತಿದೀರಾ ಅಂತ ಗೊತ್ತಿರಲಿಲ್ಲ. ನಾನು ಅಂದುಕೊಂಡೂ ಇರಲಿಲ್ಲ. ಮನೆಯಿಂದ ಆಚೆ ಬಂದಮೇಲೆ ಇದನ್ನೆಲ್ಲ ನೋಡಿದರೆ ಕನಸಾ? ಅಥವಾ ಸತ್ಯಾನಾ? ಅಂತ ಅನಿಸುತ್ತೆ. ಅಷ್ಟು ಪ್ರೀತಿ ನೀವೆಲ್ಲ ಕೊಟ್ಟಿದೀರಿ. ನಿಮ್ಮ ಆಶೀರ್ವಾದ, ಪ್ರೀತಿಯಿಂದ ನಾನು ರನ್ನರ್ ಅಪ್ ಆಗಿದೀನಿ. ನನಗೋಸ್ಕರ ಸಮಯ ಕೊಟ್ಟು ಇಷ್ಟೊಂದು ವೋಟ್ ಹಾಕಿದ್ದಕ್ಕೆ ತುಂಬು ಹೃದಯದ ಧನ್ಯವಾದ. ಎಲ್ಲ ಕನ್ನಡಿಗರಿಗೂ, ಬೇರೆ ರಾಜ್ಯದಲ್ಲಿರುವ, ಮುಂಬೈನಲ್ಲಿರುವ, ಬೇರೆ ದೇಶದಲ್ಲಿರುವ ಎಲ್ಲ ಕನ್ನಡಿಗರಿಗೂ ಥ್ಯಾಂಕ್ಯೂ ಎಂದು ಧನ್ಯವಾದ ತಿಳಿಸಿದ್ದಾರೆ.
ಈ ಮೊದಲು ನಾನು ವಿಡಿಯೋ ಮಾಡಿದಾಗ ನನ್ನ ಬಗ್ಗೆ ತುಂಬಾ ನೆಗೆಟಿವ್ ಕಾಮೆಂಟ್ ಬರುತ್ತಿತ್ತು. ತುಂಬಾ ಟ್ರೋಲ್ ಮಾಡ್ತಾ ಇದ್ರು, ಆದರೆ ಈಗ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಕಾಮೆಂಟ್ ನೋಡಲೇ ಇಲ್ಲ, ಎಲ್ಲರೂ ನನಗೆ ಕೇವಲ ಪ್ರೀತಿಯನ್ನೇ ಕೊಡ್ತಾ ಇದ್ದಾರೆ. ಟ್ರೋಲ್, ಟ್ರೋಲ್ ಮೀಮ್ಸ್ ಮಾಡಿದವರಿಗೆ ಥ್ಯಾಂಕ್ಸ್, ಎಲ್ಲ ಯೂಟ್ಯುಬರ್ಸ್, ಇನ್‌ಫ್ಲೂಯೆನ್ಸರ್ಸ್ ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದಾರೆ. ಇಲ್ಲಿ ತನಕ ಬರುವವರೆಗೂ ನನ್ನ ಶ್ರಮ ಎಷ್ಟಿತ್ತೋ, ನಿಮ್ಮದು ಕೂಡ ಅಷ್ಟೇ ಶ್ರಮ ಇದೆ ಎಂದಿದ್ದಾರೆ.
ನನ್ನ ಗೆಲುವಿಗೆ ಇಡೀ ಕರ್ನಾಟಕ ಕಾರಣ. ನಾನು ಸಾಯುವವರೆಗೂ ಮರೆಯಲ್ಲ. ನಾನು ಎಲ್ಲವನ್ನೂ ಪದಗಳಲ್ಲಿ ಹೇಳೋಕೆ ಆಗಲ್ಲ. ಇಷ್ಟು ದಿನ ವಿಡಿಯೋ ಮಾಡೋಕೆ ಆಗಲಿಲ್ಲ. ಈ ಮೂಲಕ ನಿಮ್ಮ ಜೊತೆ ಮಾತನಾಡುವ ಅವಕಾಶ ಸಿಕ್ಕಿತು, ಹೀಗೆ ಪ್ರೀತಿ ಮಾಡ್ತಾ ಇರಿ. ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ದೊಡ್ಡದೇನು ಬೇಕಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಟ್ರೋಫಿ ಸಿಕ್ಕಿಲ್ಲ ಅಷ್ಟೇ.. ನನಗೆ ಎಲ್ಲ ಸಿಕ್ಕಿದೆ, ನಾನೇ ವಿನ್ನರ್: ರಕ್ಷಿತಾ ಶೆಟ್ಟಿ
,

