ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಕಾಳಿ ರಕ್ಷಿತ ಅರಣ್ಯ ವಲಯದಲ್ಲಿ ಮೋಜು-ಮಸ್ತಿ ಪಾರ್ಟಿಗಾಗಿ ಅರಣ್ಯಾಧಿಕಾರಿಗಳೇ ಅಮೂಲ್ಯ ಮರಗಳನ್ನು ಕಡಿದು ಅಕ್ರಮ ಪ್ಯಾರಾಗೋಲಾ ನಿರ್ಮಿಸಿರುವುದು ಬೆಳಕಿಗೆ ಬಂದಿದೆ.
ಕಾಳಿ ಹುಲಿ ರಕ್ಷಿತ ಅರಣ್ಯದ ಅತೀ ಹಳೆಯ ಸಾಗವಾನಿಯ ಮೂರು ಮರಗಳ 60 ಕ್ಕೂ ಹೆಚ್ಚು ತುಂಡುಗಳಾಗಿ ಮಾಡಲಾಗಿದ್ದು ಇದರಿಂದ ದಟ್ಟ ಅರಣ್ಯದಲ್ಲಿ ಪ್ಯಾರಾಗೋಲಾ ನಿರ್ಮಾಣ ಮಾಡಲಾಗುತ್ತಿದೆ. ಇದನ್ನೂ ಓದಿ: ಕಲಬುರಗಿ| ರೀಲ್ಸ್ ಮಾಡುತ್ತ ಟ್ರ್ಯಾಕ್ಟರ್ ಕೆಳಗೆ ಬಿದ್ದ ಚಾಲಕ; ಚಕ್ರಕ್ಕೆ ಸಿಲುಕಿ ಸಾವು
ಅರಣ್ಯ ಇಲಾಖೆಯ ಆರ್‌ಎಫ್‌ಓ ನೀಲಕಂಠ ದೇಸಾಯಿ, ಡಿಎಫ್‌ಓ ನೀಲೆ ಶಿಂಧೆ, ಎಸಿಎಫ್ ಎಮ್.ಎಸ್ ಕಳ್ಳೀಮಠ ಅವರ ವ್ಯಾಪ್ತಿಗೆ ಬರುವ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳೇ ಮರ ಕಟಾವು ಮಾಡಿದ್ದಾರೆ.
ಮರ ಕಟಾವು ಮಾಡಿದ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ಈ ಸಂಬಂಧ ಸಿಸಿಎಫ್‌ಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಭೇಟಿ ಕೊಟ್ಟು ವರದಿ ನೀಡುವಂತೆ ಡಿಸಿಎಫ್‌ಗೆ ಸಿಸಿಎಫ್ ಹೀರಾಲಾಲ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಧಾರವಾಡ | ಯುವತಿಯ ಕೊಲೆ ಕೇಸ್ – ಮದುವೆ ಆಗಬೇಕಿದ್ದ ಯುವಕನೇ ವಿಲನ್

