– ಏರ್ಪೋರ್ಟ್ ಸಿಬ್ಬಂದಿ ಬಂಧನ
ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ವಿದೇಶಿ ಮಹಿಳೆಗೆ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಘಟನೆ ಸಂಬಂಧ ಏರ್ ಸಾಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಫ್.ಡಿ ಆಪ್ಪಾನ್ ಅಹಮದ್ ಎಂಬಾತನನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದನ್ನೂ ಓದಿ: ಪ್ರಪಂಚದಲ್ಲಿ ಸೆಕೆಂಡ್, ದೇಶದಲ್ಲಿ Top-1 – ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಬೆಂಗಳೂರು
ಏರ್‌ಪೋರ್ಟ್‌ನಲ್ಲಿ ಆಗಿದ್ದೇನು?
ದಕ್ಷಿಣ ಕೊರಿಯಾ ಮೂಲದ 36 ವರ್ಷದ ಮಹಿಳೆಯೊಬ್ಬರು (South Korean Tourist) ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದರು. ಮರಳಿ ದಕ್ಷಿಣ ಕೊರಿಯಾಗೆ ತೆರಳಲು ಬೆಂಗಳೂರು ಏರ್‌ಪೋರ್ಟ್‌ಗೆ ವಾಪಸ್ ಆಗಿದ್ದರು. ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ಮುಗಿಸಿ ಬೋರ್ಡಿಂಗ್ ಆಗುವ ವೇಳೆ ಎದುರಾದ ಆರೋಪಿ ಮಹಿಳಾ ಪ್ರಯಾಣಿಕರ ಬಳಿ ತಮ್ಮ ಬ್ಯಾಗೇಜ್ ಪರಿಶೀಲನೆ ಮಾಡಬೇಕು ಅಂತ ಹೇಳಿ ಬ್ಯಾಗೇಜ್ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದ ಧಾರ್‌ನ ಭೋಜ್‌ಶಾಲಾದಲ್ಲಿ ಪ್ರಾರ್ಥನೆ ವಿವಾದ; ಹಿಂದೂ-ಮುಸ್ಲಿಮರ ಪ್ರಾರ್ಥನೆಗೆ ‘ಸುಪ್ರೀಂ’ ಅವಕಾಶ
ನಂತರ ವೈಯಕ್ತಿಕವಾಗಿ ಪರಿಶೀಲರಿಗೆ ಒಳಗಾಗಬೇಕು ಎಂದು ತಿಳಿಸಿ ಈ ಮಹಿಳೆಯನ್ನ ಪುರುಷರ ಶೌಚಾಲಯದ ಒಳಗೆ ಕರೆದುಕೊಂಡು ಹೋಗಿ ಆಕೆಯನ್ನು ಮುಟ್ಟುವ ಹಾಗೂ ತಬ್ಬಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಇದರಿಂದ ವಿಚಲಿತಳಾದ ಮಹಿಳೆ ಸಿಐಎಸ್‌ಎಫ್ ಸಿಬ್ಬಂದಿಗೆ ತಿಳಿಸಿದ್ದಾಳೆ. ಕೂಡಲೇ ಸಿಐಎಸ್ಎಫ್ ಸಿಬ್ಬಂದಿ ಆರೋಪಿಯನ್ನ ವಶಕ್ಕೆ ಪಡೆದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಮಹಿಳೆಯ ಬಳಿ ದೂರು ಪಡೆದಿರುವ ಪೊಲೀಸರು ಆರೋಪಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಅಸಲಿಗೆ ಪ್ರಯಾಣಿಕರಿಗೆ ಬೋರ್ಡಿಂಗ್ ಆಗಲು ಅನುಕೂಲ ಹಾಗೂ ಸಹಾಯ ಮಾಡುವ ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಆರೋಪಿ ಕರ್ತವ್ಯ ದುರಪಯೋಗ ಮಾಡಿಕೊಂಡು ಈಗ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾನೆ.



