– ರಾಜ್ಯಪಾಲರು ಸಂವಿಧಾನಕ್ಕಿಂತ ದೊಡ್ಡವರಲ್ಲ
ರಾಮನಗರ: ಕೇಂದ್ರ ಸರ್ಕಾರ ರಾಜ್ಯಪಾಲರನ್ನು (Thawarchand Gehlot) ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಆಕ್ರೋಶ ಹೊರಹಾಕಿದ್ದಾರೆ.
ಜಂಟಿ ಅಧಿವೇಶನದಲ್ಲಿ (Joint Session) ರಾಜ್ಯಪಾಲರ ಭಾಷಣ ಮೊಟಕು ವಿಚಾರವಾಗಿ ಮಾತನಾಡಿದ ಅವರು, ಅಧಿವೇಶನದಲ್ಲಿ ಕೇವಲ 5 ನಿಮಿಷ ಏನೋ ಓದಿ ಹೋಗಿದ್ದಾರೆ. ಸ್ವಲ್ಪ ಗೊಂದಲ ಆಯ್ತು, ರಾಮನಗರದಲ್ಲಿ ಮೀಟಿಂಗ್ ಇದ್ದ ಕಾರಣ ನಾನು ಈ ಕಡೆ ಬಂದೆ. ಸ್ವಾತಂತ್ರ‍್ಯ ಬಂದಾಗಲಿಂದಲೂ ಅಧಿಕಾರದಲ್ಲಿರೋ ಸರ್ಕಾರ ರೆಡಿ ಮಾಡಿಕೊಡುವ ಭಾಷಣವನ್ನೇ ರಾಜ್ಯ ಪಾಲರು ಓದುತ್ತಾರೆ. ಎಲ್ಲಾ ರಾಜ್ಯಗಳಲ್ಲೂ ಈ ಸಂಪ್ರದಾಯ ಇದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನ ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ಗವರ್ನರ್ ಕೂಡಾ ಕಾನೂನು ಚೌಕಟ್ಟಿನಲ್ಲಿ ಅವರ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಸಂವಿಧಾನದ ಉಲ್ಲಂಘನೆಯಾಗಿದೆ, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ: ಸಿದ್ದರಾಮಯ್ಯ ತೀವ್ರ ಆಕ್ಷೇಪ
ರಾಜ್ಯಪಾಲರು ಸ್ವತಂತ್ರವಾಗಿ ಕೆಲಸ ಮಾಡಲು ಬಿಜೆಪಿ ಬಿಡುತ್ತಿಲ್ಲ. ಕೇಂದ್ರಕ್ಕೆ ತಕ್ಕಂತೆ ರಾಜ್ಯ ಬಿಜೆಪಿಯೂ ತಾಳ ಹಾಕುತ್ತಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಬಿಜೆಪಿಯವರು ಸುಳ್ಳುಗಾರರು, ಅವರಿಗೆ ಕಾನೂನು, ಸಂವಿಧಾನದ ಅರಿವಿಲ್ಲ. ರಾಜ್ಯಪಾಲರು ಸಂವಿಧಾನಕ್ಕಿಂತ ದೊಡ್ಡವರಲ್ಲ. ಅವರು ಸಂವಿಧಾನದ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಸರ್ಕಾರದ ಭಾಷಣ ಓದದೇ ಹೋಗಿರೋದು ತಪ್ಪು. ಹಿಂದೆಯೂ ರಾಜ್ಯಪಾಲರ ವಿರುದ್ಧ ಬಿಜೆಪಿ ಘೋಷಣೆ ಕೂಗಿದ್ದರು. ಸ್ಪೀಕರ್ ವಿರುದ್ಧ ಘೋಷಣೆ ಕೂಗಿ ಪತ್ರ ಎಸೆದಿದ್ದರು. ಇಂತಹ ಬಿಜೆಪಿಯವರಿಂದ ನಾವು ನೀತಿ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ – ಭಾಷಣ ಓದದೇ ತೆರಳಿದ ಗೆಹ್ಲೋಟ್
ದಕ್ಷಿಣ ರಾಜ್ಯದಲ್ಲಿ ಎಲ್ಲಾ ಕಡೆ ಇದೇ ರೀತಿ ಆಗುತ್ತಿದೆ. ಉಳಿದ ಕಡೆ ಕೇಂದ್ರ ಸರ್ಕಾರ ಏನು ಹೇಳಿದ್ರೂ ಜೈ ಅಂತಾರೆ. ರಾಜ್ಯಪಾಲರು ಅವರಿಗಿಷ್ಟ ಇಲ್ಲ ಅಂದರೆ ಆ ಲೈನ್ ಬಿಟ್ಟು ಬೇರೆ ವಿಚಾರಗಳನ್ನು ಓದಬಹುದಿತ್ತು. ಆದರೆ ಸಂಪೂರ್ಣ ಭಾಷಣ ಮೊಟಕು ಮಾಡೋದು ಸರಿಯಲ್ಲ. ಈ ಬಗ್ಗೆ ಮುಂದಿನ ಹೋರಾಟದ ಬಗ್ಗೆ ಸಿಎಂ, ಡಿಸಿಎಂ ಹಾಗೂ ಕಾನೂನು ಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಕರಾಳ ರೀತಿಯಲ್ಲಿ ಈ ಅಧಿವೇಶನವನ್ನ ನಡೆಸಿದೆ: ಆರ್ ಅಶೋಕ್

