ಬೆಂಗಳೂರು: ರಾಜ್ಯಪಾಲರು ವಿಶೇಷ ಅಧಿವೇಶನಕ್ಕೆ ಬರಲಿದ್ದಾರೆ ಎಂದು ಲೋಕಭವನ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಂವಿಧಾನದ ವಿಧಿ 176.1 ರ ಅನ್ವಯ ಜಂಟಿ ಅಧಿವೇಶನಕ್ಕೆ ಬರಲು ರಾಜ್ಯಪಾಲರು ಒಪ್ಪಿದ್ದಾರೆ ಎಂದು ಲೋಕಭವನ ಸರ್ಕಾರಕ್ಕೆ ತಿಳಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೂ ಸಹ ಸಿಎಂ ನಿವಾಸಕ್ಕೆ ಆಗಮಿಸಿ ಅಧಿವೇಶನಕ್ಕೆ ಬರೋ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ. 11 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರು 100% ಅಧಿವೇಶನಕ್ಕೆ ಬರ್ತಾರೆ, ಭಾಷಣ ಓದುತ್ತಾರೆ: ಪೊನ್ನಣ್ಣ ವಿಶ್ವಾಸ
ಆದರೆ ರಾಜ್ಯ ಸರ್ಕಾರದ ಪೂರ್ಣ ಭಾಷಣ ಓದುತ್ತಾರಾ? ಅಥವಾ ಆಕ್ಷೇಪಾರ್ಹ ಅಂಶಗಳನ್ನ ಮೊಟಕುಗೊಳಿಸಿ ಭಾಷಣ ಓದುತ್ತಾರಾ? ಭಾಷಣ ಮಾಡದೇ ಅರ್ಧಕ್ಕೆ ತೆರಳುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ. ಒಟ್ಟಿನಲ್ಲಿ ಭಾರೀ ಹೈಡ್ರಾಮಾಕ್ಕೆ ಇಂದಿನ ಅಧಿವೇಶನ ಸಾಕ್ಷಿಯಾಗಲಿದೆ.
2 ಅಂಶ ತೆಗೆದು ಹಾಕಿ ರಾಜ್ಯಪಾಲರ ಭಾಷಣ ಪ್ರತಿ ಸಿದ್ಧ
ರಾಜ್ಯಪಾಲರು 11 ಅಂಶಗಳನ್ನ ತೆಗೆಯುವಂತೆ ಹೇಳಿದ್ದರು. ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ ರಾಜ್ಯ ಸರ್ಕಾರ 2 ಅಂಶಗಳನ್ನಷ್ಟೇ ತೆಗೆದು ರಾಜ್ಯಪಾಲರ ಭಾಷಣ ಸಿದ್ಧಪಡಿಸಿದೆ. ವಿಧಾನಸೌಧಕ್ಕೂ ಭಾಷಣ ಪ್ರತಿ ತರಲಾಗಿದೆ. ಇದನ್ನೂ ಓದಿ: ಗವರ್ನರ್ Vs ಗವರ್ನಮೆಂಟ್ | ಇಂಥ ಪರಿಸ್ಥಿತಿ ಬರುತ್ತೆ ಅಂತ ಸಂವಿಧಾನ ಸಭೆಯೂ ಯೋಚಿಸಿರಲಿಲ್ಲ: ಸುರೇಶ್ ಕುಮಾರ್
ರಾಜ್ಯಪಾಲರ ಆಕ್ಷೇಪ ಏಕೆ?
ಸರ್ಕಾರ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರೋಧಿ ಕಠಿಣ ಶಬ್ಧಗಳನ್ನ ಬಳಸಿ ವಾಗ್ದಾಳಿ ನಡೆಸಲಾಗಿದೆ ಅನ್ನೋದು ಆರೋಪ. ಕಸಿತ ಭಾರತ್ ಜಿರಾಮ್‌ಜಿ ಕಾಯ್ದೆ ವಿರೋಧಿಸಿ ರಾಜ್ಯ ಸರ್ಕಾರದ ಶಬ್ಧ ಪ್ರಯೋಗಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಭಾಷಣ ಬದಲಾವಣೆ ಮಾಡಿದರಷ್ಟೇ ನಾನು ಭಾಷಣ ಮಾಡುತ್ತೇನೆ ಎಂಬ ಸಂದೇಶ ಸರ್ಕಾರಕ್ಕೆ ಕಳುಹಿಸಿದ್ದರು.
ರಾಜ್ಯಪಾಲರ ಆಕ್ಷೇಪಗಳೇನು?
* ಕೇಂದ್ರ ಸರ್ಕಾರದ ವಿರುದ್ಧ ಶಬ್ಧ ಪ್ರಯೋಗ ಸರಿ ಇಲ್ಲ
* ವಿರೋಧ ಮಾಡುವ ರೀತಿ ದ್ವೇಷ ಭಾವನೆಯಿಂದ ಕೂಡಿದೆ
* ಜಿ ರಾಮ್ ಜಿ ಕಾಯ್ದೆ ವಿರೋಧಿಸಲು ಕಠಿಣ ಶಬ್ಧ ಬಳಕೆ
* 100 ಪ್ಯಾರಾಗಳ ಭಾಷಣದಲ್ಲಿ 11 ಪ್ಯಾರಾಗಳನ್ನ ತೆಗಿಬೇಕು
* ಆಕ್ಷೇಪಾರ್ಹ ಸಾಲುಗಳನ್ನ ತೆಗೆದರೆ ಮಾತ್ರ ಭಾಷಣ ಮಾಡುತ್ತೇನೆ.
ಸರ್ಕಾರದ ವಾದ ಏನು…?
* ರಾಜ್ಯಪಾಲರ ಆಕ್ಷೇಪಗಳನ್ನ ರಾಜ್ಯ ಸರ್ಕಾರ ಒಪ್ಪುವುದಿಲ್ಲ
* ಯಾವುದೇ ಕಾರಣಕ್ಕೂ 11 ಪ್ಯಾರಾಗಳನ್ನ ತೆಗೆಯಲು ಸಾಧ್ಯವಿಲ್ಲ
* ಸರ್ಕಾರ ಸಿದ್ಧಪಡಿಸಿದ ಭಾಷಣವನ್ನ ರಾಜ್ಯಪಾಲರು ಓದಬೇಕು
* ಕೇಂದ್ರ ಸರ್ಕಾರದ ನಿಲುವು, ಕಾಯ್ದೆಗಳನ್ನ ವಿರೋಧಿಸುವ ಹಕ್ಕಿದೆ
* ನಿಯಮಗಳ ಪ್ರಕಾರ ರಾಜ್ಯಪಾಲರು ಭಾಷಣ ನಿರಾಕರಿಸುವಂತಿಲ್ಲ
* ಆರ್ಟಿಕಲ್ 176(1) 163ರ ವಿಧಿ ಪ್ರಕಾರ ಭಾಷಣವನ್ನ ಸರ್ಕಾರ ಸಿದ್ಧಪಡಿಸಲಿದೆ
* ಸದ್ಯ 2 ಅಂಶಗಳನ್ನಷ್ಟೇ ತೆಗೆದುಹಾಕಿ ಭಾಷಣ ಸಿದ್ಧಪಡಿಸಿದೆ.


